ಜೂನ್ 30 ರೊಳಗೆ ಮುಗಿಸಿಕೊಳ್ಳಿ ಈ 5 ಬ್ಯಾಂಕ್ ಕಾರ್ಯಗಳನ್ನು

1) ಆಧಾರ್ ಪಾನ್ ಲಿಂಕ್

30 ಜೂನ್ 2021 ರೊಳಗೆ ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಅನ್ನು ನೀವು ಲಿಂಕ್ ಮಾಡಿಕೊಳ್ಳಬೇಕು. ಹಾಗೆ ಮಾಡಲು ವಿಫಲರಾದರೆ 1,000 ರೂ.ಗಳ ದಂಡ ವಿಧಿಸಲಾಗುತ್ತದೆ ಮತ್ತು ಪಾನ್ ಕಾರ್ಡ್ ಸಹ ನಿಷ್ಕ್ರಿಯಗೊಳ್ಳುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ನಿಮಗೆ ಬ್ಯಾಂಕಿಂಗ್ ಸೇರಿದಂತೆ ಹಣಕಾಸು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮಪಾನ್ ಸಕ್ರಿಯವಾಗಿಲ್ಲದಿದ್ದರೆ, ಟಿಡಿಎಸ್ ಅನ್ನು ಸಹ 20% ದರದಲ್ಲಿ ಕಡಿತಗೊಳಿಸಲಾಗುತ್ತದೆ.

2)ಜೂನ್ 30 ರೊಳಗೆ ಐಟಿಆರ್ ಸಲ್ಲಿಸುವುದು ಅವಶ್ಯಕ


ಆದಾಯ ತೆರಿಗೆ ಮರುಪಾವತಿ ಮಾಡದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಸರ್ಕಾರ ಈ ವಿಚಾರದಲ್ಲಿ ತನ್ನ ನಿಯಮಗಳನ್ನು ಬದಲಾಯಿಸಿದೆ. ಹೊಸ ಟಿಡಿಎಸ್ ನಿಯಮಗಳ ಪ್ರಕಾರ, ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 206 ಎಬಿ ಅಡಿಯಲ್ಲಿ ಐಟಿಆರ್ ಸಲ್ಲಿಸದಿದ್ದಕ್ಕಾಗಿ ಡಬಲ್ ಟಿಡಿಎಸ್ ಪಾವತಿಸಬೇಕಾಗುತ್ತದೆ. ಜೊತೆಗೆ ಮೂಲದಲ್ಲಿ ತೆರಿಗೆ ಸಂಗ್ರಹವೂ (ಟಿಸಿಎಸ್) ಹೆಚ್ಚು ಇರುತ್ತದೆ.ಜುಲೈ 1, 2021 ರಿಂದ, ದಂಡದ ಟಿಡಿಎಸ್ ಮತ್ತು ಟಿಸಿಎಸ್ ದರಗಳು 10-20% ಆಗಿರುತ್ತದೆ.

3) ಪಿಎಂ ಕಿಸಾನ್ (PM Kisan)


ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ಬಯಸಿದರೆ,ಜೂನ್ 30 ರವರೆಗೆ ನಿಮಗೆ ಅವಕಾಶವಿದೆ. ನೀವು ಕೃಷಿಕರಾಗಿದ್ದರೆ ಈ ಯೋಜನೆಯಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳಿ. ನೀವು ಇದನ್ನು ಮಾಡಿದರೆ, ಈ ವರ್ಷದ ಎರಡು ಕಂತುಗಳು ನಿಮ್ಮಖಾತೆಯಲ್ಲಿ ಜಮೆ ಆಗುತ್ತವೆ. ಜೂನ್ ಅಥವಾ ಜುಲೈನಲ್ಲಿ ನೀವು 2000 ರೂಪಾಯಿಗಳನ್ನು ಪಡೆಯುತ್ತೀರಿ. ಅದರ ನಂತರ ಆಗಸ್ಟಲ್ಲಿ ನಿಮ್ಮಬ್ಯಾಂಕ್ ಖಾತೆಯಲ್ಲಿ 2000 ರೂಪಾಯಿಗಳ ಕಂತು ಬರುತ್ತದೆ. ಆದರೆ ಇದಕ್ಕಾಗಿ ನಿಮ್ಮಅರ್ಜಿಯನ್ನು ಸಲ್ಲಿಸುವುದು ಅವಶ್ಯಕ.

4)ಜುಲೈ 1ರಿಂದ ಸಿಂಡಿಕೇಟ್ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್ ಬದಲಾಗುತ್ತದೆ

ನೀವು ಸಿಂಡಿಕೇಟ್ ಬ್ಯಾಂಕಿನ ಖಾತೆದಾರರಾಗಿದ್ದರೆ ನಿಮಗೆ ಪ್ರಮುಖ ಸುದ್ದಿ ಇದೆ. ಈ ಬ್ಯಾಂಕ್ ಜುಲೈ 1ರಿಂದ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್ ಅನ್ನು ಬದಲಾಯಿಸಲಿದೆ. ಬ್ಯಾಂಕಿನ ಹೊಸ ಐಎಫ್‌ಎಸ್‌ಸಿ ಕೋಡ್ ಗಳು ಜುಲೈ 1,2021 ರಿಂದ ಅನ್ವಯವಾಗುತ್ತವೆ. ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಬ್ಯಾಂಕ್ ಶಾಖೆಗೆ ಹೋಗಿ ಹೊಸ ಐಎಫ್‌ಎಸ್‌ಸಿ ಕೋಡ್ ಪಡೆಯಬೇಕು. ಏಪ್ರಿಲ್ 1, 2020 ರಿಂದ ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗಿದೆ.

5) ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್‌ನ ಎಫ್‌ಡಿ ಯೋಜನೆಗಳು

ದೇಶದ ಪ್ರಮುಖ ಬ್ಯಾಂಕುಗಳಾದ ಎಸ್‌ಬಿಐ (SBI), ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಪರಿಚಯಿಸಿದ್ದು, ಇದು 2021 ರ ಜೂನ್ 30 ರಂದು ಕೊನೆಗೊಳ್ಳುತ್ತಿದೆ. ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಹಿರಿಯ ನಾಗರಿಕರಾಗಿದ್ದರೆ ಮತ್ತು ಸಾಮಾನ್ಯ ಎಫ್‌ಡಿಗಿಂತ ಹೆಚ್ಚಿನ ಬಡ್ಡಿಯನ್ನು ಬಯಸಿದರೆ, ನೀವು ಈ ತಿಂಗಳು ಅದರಲ್ಲಿ ಹೂಡಿಕೆ ಮಾಡಬಹುದಾಗಿದೆ.

Leave A Reply

Your email address will not be published.