ಸಂಚಾರ ನಿಯಮ ಪಾಲಿಸದೆ ಪ್ರಾಣಕ್ಕೆ ಸಂಚಕಾರ ತಂದುಕೊಂಡ ಸಂಚಾರಿ ವಿಜಯ್ | ವಿಜಯ್ ಸ್ನೇಹಿತನ ಮೇಲೆ FIR

ಬೆಂಗಳೂರು: ಸಂಚಾರಿ ವಿಜಯ್ ಅವರ ಸಾವಿಗೆ
ಕಾರಣನಾದಬಾತನ ಸ್ನೇಹಿತ ಪಿ.ಎಸ್. ನವೀನ್ ವಿರುದ್ಧ ಜಯನಗರ ಸಂಚಾರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಾಗಿದೆ.

ವಿಜಯ್ ಅವರ ಸಹೋದರ ಸಿದ್ದೇಶ್‌ಕುಮಾರ್ ದೂರು ನೀಡಿದ್ದು, ನಿರ್ಲಕ್ಷ್ಯದಿಂದ ಚಾಲನೆ ಮಾಡಿ ಜೀವಕ್ಕೆ ಕುತ್ತು ತಂದ ಆರೋಪದಡಿ ನವೀನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 12 ರಂದು ರಾತ್ರಿ 11.45 ಬೆಂಗಳೂರಿನ ಜೆಪಿ ನಗರದ 7 ನೇ ಹಂತದಲ್ಲಿ ಸ್ನೇಹಿತ ನವೀನ್ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಸಂಚಾರಿ ವಿಜಯ್ ಅವರ ಸ್ನೇಹಿತ ಬೈಕು ಚಲಾಯಿಸುತ್ತಿದ್ದು ಹಿಂಬದಿ ಸವಾರರಾಗಿ ಸಂಚಾರಿ ವಿಜಯ್ ಸಂಚಾರ ಮಾಡುತ್ತಿದ್ದರು. ಹಿಂಬದಿ ಸವಾರ ಕೂಡಾ ಹೆಲ್ಮೆಟ್ ಧರಿಸುವುದು ಕಡ್ಡಾಯ ಆಗಿರುವಾಗ, ನಟ ವಿಜಯ್ ಹೆಲ್ಮೆಟ್ ಹಾಕಿರಲಿಲ್ಲ. ವಿಜಯ್ ಅವರ ಹೆಸರಿಗೆ ಸಂಚಾರಿ ಎಂಬ ಹೆಸರು ಅಂಟಿಕೊಂಡಿದ್ದು, ಇದೀಗ ಸಂಚಾರ ನಿಯಮ ಪಾಲಿಸದೆ ಹೋದುದೆ ಅವರ ಪ್ರಾಣಕ್ಕೆ ಸಂಚಕಾರ ಬಂದೊದಗಿದ್ದು ದುರಂತವೇ ಸರಿ.

Leave A Reply

Your email address will not be published.