ಬೆಳ್ತಂಗಡಿ : ಲಾಕ್‌ಡೌನ್ ಅವಧಿಯಲ್ಲಿ ರಸ್ತೆ ದುರಸ್ತಿ ಮಾಡಿದ ಬಳಂಜ ಗ್ರಾಮಸ್ಥರು | ರಸ್ತೆ ಬದಿ ಇದ್ದ ಪೊದೆ ತೆರವು ಮಾಡಿದ ಸಮಾಜಮುಖಿ ಗ್ರಾಮಸ್ಥರು
ಬೆಳ್ತಂಗಡಿ: ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಲಾಕ್‌ಡೌನ್ ಸಮಯದಲ್ಲಿ ಬೆಳ್ತಂಗಡಿಯ ಬಳಂಜ ಗ್ರಾಮಸ್ಥರು ಮೂಲಭೂತ ಆವಶ್ಯಕತೆಯಾದ ರಸ್ತೆಯನ್ನು ದುರಸ್ತಿ ಮಾಡುವ ಮೂಲಕ ಲಾಕ್‌ಡೌನ್ ಸಮಯವನ್ನು ಸಮಾಜಮುಖಿಯಾಗಿ ಬಳಸಿಕೊಂಡಿದ್ದಾರೆ.
ಬಳಂಜ ಗ್ರಾಮದ ಪರಾರಿ ಬೊಟ್ಟುದಡ್ಡ ರಸ್ತೆಯಿಂದ ಜಾರಿಗೆದಡಿಯಿಂದ ಪಾಡಿಮನೆಯವರಿಗೆ ಶ್ರಮದಾನ ಮಾಡುವ ಮೂಲಕ ದುರಸ್ತಿಗೊಳಿಸಿದ್ದು, ಸುತ್ತಮುತ್ತ ಬೆಳೆದಿದ್ದ ಅನಗತ್ಯ ಗಿಡ ಪೊದೆಗಳನ್ನು ತೆರವುಗೊಳಿಸಿದ್ದಾರೆ.
ಈ ಸಮಾಜಮುಖಿ ಕಾರ್ಯದಲ್ಲಿ ಪ್ರವೀಣ್ ಕುಮಾರ್ ಎಚ್.ಎಸ್, ಕೇಶವ ಪೂಜಾರಿ ಮಜ್ಜೆನಿ, ಅಣ್ಣಿ ಪೂಜಾರಿ ಪಾಡಿ ಮನೆ, ಧರ್ಣಪ್ಪ ಪೂಜಾರಿ ಗುಂಡಿದಡ್ಡ, ಕರಿಯ ಪೂಜಾರಿ ಪಾಡಿಮನೆ, ಸಂಜೀವ ಪೂಜಾರಿ ಕಿನ್ನರ್ ದಡ್ಡ, ವಸಂತ ಪೂಜಾರಿ ಗೊಬ್ಬರ ಗುಡ್ಡೆ, ರಂಜಿತ್ ಎಚ್.ಡಿ ಸುಧಾಮ, ರತ್ನಾಕರ ಪೂಜಾರಿ ಮಜ್ಜಿನಿ, ಹರೀಶ್ ಪೂಜಾರಿ ಮಜ್ಜೆನಿ, ದೀಪಕ್ ಎಚ್. ಡಿ ಸಂಧ್ಯಾದೀಪ, ಜತಿನ್ ಕುಮಾರ್, ಮುರಳಿ ಪೂಜಾರಿ ಪಾಡಿ ಮನೆ, ಧರಣೇಂದ್ರ ಕುಮಾರ್, ಪ್ರೀತೆಶ್ ಬರಮೇಲು ಶ್ರಮದಾನದಲ್ಲಿ ಪಾಲ್ಗೊಂಡು ಮಾದರಿಯಾಗಿದ್ದಾರೆ.