ಮಂಗಳೂರು : ನವಭಾರತ್ ವೃತ್ತ ತೆರವು | ರಾಜಕೀಯ ಪೋಸ್ಟರ್ಗಳೇ ತುಂಬಿರುತ್ತಿದ್ದ ಸರ್ಕಲ್
ಮಂಗಳೂರಿನ ನವಭಾರತ್ ಸರ್ಕಲ್ ನ್ನು ಶುಕ್ರವಾರ ಮಾಡಲಾಗಿದೆ.ಆ ಸ್ಥಳದಲ್ಲೇ ಮನಪಾ ವತಿಯಿಂದ ಹೊಸದಾಗಿ ಸರ್ಕಲ್ ನಿರ್ಮಿಸಲಿದೆ.
ಮಂಗಳೂರಿನ ಹೃದಯಭಾಗದಲ್ಲಿದ್ದ ನವಭಾರತ್ ಸರ್ಕಲ್ ರಾಜಕೀಯ ಪಕ್ಷಗಳ ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಮಾತ್ರ ಅಂಟಿಸಲು ಸೀಮಿತವಾಗಿತ್ತು.
ರಾಷ್ಟ್ರಕವಿ ಗೋವಿಂದ್ ಪೈ ವೃತ್ತ ಎಂದು ಇಲ್ಲಿಗೆ ಹೆಸರಿಸಲಾಗಿದ್ದರೂ ನವಭಾರತ್ ಸರ್ಕಲ್ ಎಂದೇ ಜನಜನಿತವಾಗಿತ್ತು.
ಈ ಕುರಿತಂತೆ ಮಾತನಾಡಿರುವ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಅವರು,ಈಗ ಇದ್ದ ಸರ್ಕಲ್ ಅವೈಜ್ಞಾನಿಕವಾಗಿತ್ತು,ಅಲ್ಲದೆ ಸುಗಮ ವಾಹನ ಸಂಚಾರಕ್ಕೆ ತೊಡಕಾಗಿತ್ತು.ಈ ಕಾರಣದಿಂದ ನವಭಾರತ್ ವೃತ್ತವನ್ನು ನೆಲಸಮ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಇದೇ ಸ್ಥಳದಲ್ಲಿ ವೈಜ್ಞಾನಿಕವಾಗಿ ಸರ್ಕಲ್ನ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.