ಕೊನೆಗೂ ಮದುವೆಯಾಗಲು ಒಪ್ಪಿದ ಮಮತಾ ಬ್ಯಾನರ್ಜಿ | ವರ ಯಾರು ಗೊತ್ತಾ, ಲಗ್ನ ಪತ್ರಿಕೆ ನೋಡಿ

ಮಮತಾ ಬ್ಯಾನರ್ಜಿಗೆ ನಾಳೆ ಮದುವೆಯಂತೆ ! ವರ ಯಾರು ಗೊತ್ತಾ? ಲಗ್ನ ಪತ್ರಿಕೆ ನೋಡಿ !!

ಜೂನ್​ 13ನೇ ತಾರೀಕಿನಂದು ಒಂದು ಭರ್ಜರಿ ಮದುವೆ ಇದೆ. ನವ ಜೋಡಿಗಳಾಗಿ ಹಸೆ ಮಣೆ ಏರುತ್ತಿರುವ ವಧುವಿನ ಹೆಸರು ‘ಮಮತಾ ಬ್ಯಾನರ್ಜಿ’ !
ಗಟ್ಟಿಗಿತ್ತಿ ಮಮತಾ ಬ್ಯಾನರ್ಜಿಯನ್ನು ವರಿಸುವ ಮಹಾನುಭಾವ ಯಾರಿರಬಹುದು ಎಂಬ ಕುತೂಹಲ ಪ್ರತಿಯೊಬ್ಬರಲ್ಲಿ ಬರುವುದು ಸಹಜ.

ಸಾಮಾಜಿಕ ಜಾಲತಾಣದಲ್ಲಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ.. ಅಬ್ಬಾ ಇದೇನಪ್ಪಾ ಎಂದು ಕುತೂಹಲ ಕೆರಳಿಸುತ್ತಿರುವ ವಿಷಯವೊಂದು ಹರಿದಾಡುತ್ತಿದೆ. ಒಮ್ಮೆಲೆ ವಿಷಯ ಕೇಳಿದೊಡನೆ ಎಲ್ಲರಿಗೂ ಆಶ್ಚರ್ಯವಾಗುವಂತಹ ಸುದ್ದಿ ಇದು.

ಅಂದಹಾಗೆ ಮಮತಾ ಬ್ಯಾನರ್ಜಿ ಅವರನ್ನು ಮದುವೆಯಾಗುವ ಗಂಡು ತಮಿಳುನಾಡಿನವನು. ನಾಳೆಯೇ ಆಕೆಗೆ ಮದುವೆ ಇದೆ. ಜೂನ್​ 13ರಂದು ನಡೆಯಲಿರುವ ಈ ಮದುವೆ ವಿವಾಹದ ಲಗ್ನ ಪತ್ರಿಕೆಯೊಂದು ಭಾರೀ ಸುದ್ದಿಯಲ್ಲಿದೆ. ಗಾಬರಿಯಾಗಬೇಡಿ ವಿಷಯ ನಿಜವೇ! ಸರಿಯಾಗಿಯೇ ಓದಿದ್ದೀರಿ. ಮಮತಾ ಬ್ಯಾನರ್ಜಿ ಮತ್ತು ಸೋಶಿಯಲಿಸಂ ಎಂಬ ಹೆಸರಿನ ವಧು-ವರ ವಿವಾಹವಾಗುತ್ತಿದ್ದಾರೆ. ಆದರೆ ಈ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಲ್ಲ. ಮತ್ಯಾರು ಎಲ್ಲರಂತೆ ನಮ್ಮಂತ ಬ್ಯಾನರ್ಜಿ ಎಂಬ ಹೆಸರಿನ ಹೆಣ್ಣು ಮಗಳು. ಆಕೆಯನ್ನು ಮದುವೆಯಾಗುವ ಗಂಡಿನ ಸುಂದರ ಹೆಸರು ಸೋಶಿಯಲಿಸಂ !

ತಮಿಳು ನಾಡಿನ ಸೇಲಂನ ಮೋಹನ್​ ಎಂಬುವವರ ಪುತ್ರ ಸೋಶಿಯಲಿಸಂ. ಅವರು ನಂಬಿದ ಸಿದ್ಧಾಂತಕ್ಕೆ ತಕ್ಕಂತೆಯೇ ಇನ್ನಿತರ ಪುತ್ರರಿಗೂ ಕೂಡಾ ‘ ಕಮ್ಯುನಿಸಂ’, ‘ಲೆನಿನಿಸಂ’ ಎಂದು ನಾಮಕರಣ ಮಾಡಿದ್ದಾರೆ. ಹಾಗೂ ಅವರ ಮೊಮ್ಮಗನಿಗೆ ‘ಮಾರ್ಕ್ಸಿಸಂ’ ಎಂದು ಹೆಸರಿಟ್ಟಿದ್ದಾರೆ. ವರನ ತಂದೆ ಮೋಹನ್​ ಅವರು ತಮಿಳುನಾಡಿನ ಸೇಲಂನಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ.

ಈ ಕುರಿತಂತೆ ಮೋಹನ್​ ಅವರು ಮಾತನಾಡಿ, ನನ್ನ ಮಕ್ಕಳು ಯಾವಾಗಲೂ ಜನರ ಬೆಂಬಲಿಗರಾಗಿ ನಿಂತಿದ್ದಾರೆ. ತಮ್ಮ 5 ನೇ ವಯಸ್ಸಿನಿಂದಲೇ ಪಕ್ಷದ ಸಭೆಗಳಲ್ಲಿ ಭಾಗವಹಿಸುವಂತೆ ನಾನು ಅವರನ್ನು ಪ್ರೋತ್ಸಾಹಿಸಿದ್ದೇನೆ. ದೊಡ್ಡವರಾಗುತ್ತಿದ್ದಂತೆಯೇ ಪ್ರತಿಭಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 2009ರಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ತಮಿಳುನಾಡಿನಿಂದ 2,000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ನನ್ನ ಮಕ್ಕಳಾದ ‘ಕಮ್ಯುನಿಸಂ’ ಮತ್ತು ‘ಲೆನಿನಿಸಂ’ ಭಾಗವಹಿಸಿದ್ದರು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮೂರು ವರ್ಷದ ಹಿಂದೆ ಕಮ್ಯುನಿಸಂ ಹೆಸರಿನ ಮಗನನ್ನು ಆಸ್ಪತ್ರೆಗೆ ದಾಖಲಿಸಲು ಕಷ್ಟಪಟ್ಟ ಕುರಿತಾಗಿ ಮಾತನಾಡಿದ ಮೋಹನ್ ಅವರು​​, ಹೆಸರು ಕೇಳಿದಾಕ್ಷಣ ವೈದ್ಯರು ನನ್ನ ಮಗನನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದರು. ಹಾಗಾಗಿ ಬೇರೆ ಆಸ್ಪತ್ರೆಯೊಂದನ್ನು ಹುಡುಕುವ ಪರಿಸ್ಥಿತಿ ಎದುರಾಗಿತ್ತು ಎಂದು ಹೇಳಿದ್ದಾರೆ. ಆದರೆ ಖುಷಿಯೆಂದರೆ, ಇವರ ಹೆಸರುಗಳನ್ನು ಕಾಲೇಜಿನಲ್ಲಿ ಕೇಳಿದ ವಿದ್ಯಾರ್ಥಿಗಳು ಹೆಚ್ಚು ಉತ್ಸುಕರಾದರು. ಕಮ್ಯುನಿಸಂ ಈಗ ವಕೀಲ ವೃತ್ತಿಯಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಮಮತಾ ಬ್ಯಾನರ್ಜಿ ಎಂಬ ಹೆಸರಿನ ವಧುವಿನ ಅಜ್ಜ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿದ್ದರು. ಮಮತಾ ಬ್ಯಾನರ್ಜಿಯವರ ಕಾರ್ಯಗಳಿಂದ ಪ್ರೇರೇಪಿತರಾದ ಅವರು ತಮ್ಮ ಮೊಮ್ಮಗಳಿಗೆ ಅವರ ಹೆಸರನ್ನೇ ಇಟ್ಟು ನಾಮಕರಣ ಮಾಡಿದರು. ಇವರ ಮದುವೆಗೆ ಸಿಸಿಐ(ಎಂ)ನ ರಾಜ್ಯ ಕಾರ್ಯದರ್ಶಿ ಮುತ್ತರಸನ್​ ಮತ್ತು ಸಹಾಯಕ ಕಾರ್ಯದರ್ಶಿ ಸುಬ್ಬರಾಯನ್​ ಅವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.

ತಮಿಳುನಾಡಿನಲ್ಲಿ ಕಮ್ಯುನಿಸಂ ಮತ್ತು ಕಮ್ಯುನಿಸ್ಟ್ ನಾಯಕರುಗಳ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಟ್ಟ ಸಾಲು ಸಾಲು ಉದಾಹರಣೆಗಳು ಸಿಗುತ್ತವೆ. ತಾವು ನಂಬಿದ ಸಿದ್ಧಾಂತಗಳಿಗೆ ಪೂರಕವಾಗಿ ತಮ್ಮ ಮಕ್ಕಳ ಮೊಮ್ಮಕ್ಕಳ ಹೆಸರನ್ನು ಇಟ್ಟು ಸಂಭ್ರಮಿಸುವುದರ ಜೊತೆಗೆ ಮುಂದಿನ ಪೀಳಿಗೆಯನ್ನು ಆ ಸಿದ್ಧಾಂತಗಳೆಡೆಗೆ ಆಕರ್ಷಿಸಿ ಹುರಿದುಂಬಿಸುವುದು ಅವರ ಉದ್ದೇಶ.

Leave A Reply

Your email address will not be published.