ಅಧಿಕಾರವಿಲ್ಲದ ಕಾಂಗ್ರೆಸಿಗರಿಂದ ಜನತೆಯ ದಾರಿ ತಪ್ಪಿಸುವ ವ್ಯರ್ಥ ಯತ್ನ- ಬಿಜೆಪಿ ಸುಳ್ಯ

ಸುಳ್ಯ : ದೇಶದ ಎಲ್ಲಾ ಭಾಗದ ಜನಗಳಿಂದಲೂ ತಿರಸ್ಕರಿಸಲ್ಪಟ್ಟಿರುವ ಕಾಂಗ್ರೆಸ್ಸಿಗರು ಈಗ ಜನತೆಯ ದಾರಿ ತಪ್ಪಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ನಾಯಕರ ಟೂಲ್ ಕಿಟ್ ಆದೇಶದಂತೆ ಸುಳ್ಯ ತಾಲೂಕಿನ ನಾಯಕರೂ ಸುಳ್ಳು ಹೇಳಿಕೆಗಳ ಮೂಲಕ ಪ್ರಚಾರ ಪಡೆಯಲು ಬಯಸುತ್ತಿದ್ದಾರೆ ಎಂದು ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಭೋದ್ ಶೆಟ್ಟಿ ಮೇನಾಲ,ರಾಕೇಶ್ ರೈ ಕೆಡೆಂಜಿ ಹೇಳಿದ್ದಾರೆ.

ದೇಶದ ಆಡಳಿತ ನಡೆಸುತ್ತಿರುವ ಮೋದಿಯವರ ಸರ್ಕಾರದ ಸಂಪೂರ್ಣ ಸಹಕಾರದಿಂದ ಹೆಮ್ಮೆಯ ವಿಜ್ಞಾನಿಗಳು ಲಸಿಕೆಯನ್ನು ಕಂಡುಹಿಡಿದು ದೇಶವಾಸಿಗಳ ಪ್ರಾಣರಕ್ಷಣೆಗೆ ಮುಂದಾದಾಗ, ಲಸಿಕೆ ಹಾಕಿಸಿ ಕೊಂಡರೆ ಷಂಡತನ ಬರುತ್ತದೆ , ಅಡ್ಡಪರಿಣಾಮಗಳು ಇದೆ, ಪ್ರಾಣ ಹೋಗುತ್ತದೆ ಎಂದು ಜನರ ಮನಸ್ಸಿನಲ್ಲಿ ಭಯ ಹುಟ್ಟಿಸಿದ ಭಯೋತ್ಪಾದಕ ಮಾನಸಿಕತೆಯ ಕಾಂಗ್ರೆಸಿಗರಿಗೆ ಈಗ ಲಸಿಕೆಯ ಬಗ್ಗೆ ಒಂದೇ ಒಂದು ಶಬ್ದ ಮಾತನಾಡುವ ನೈತಿಕತೆಯಿಲ್ಲ . ಜನರನ್ನು ಹೆದರಿಸಿದ ಕಾಂಗ್ರೆಸ್ ನಾಯಕರು ತಾವು ಮಾತ್ರ ಲಸಿಕೆ ಹಾಕಿಕೊಂಡು ಅಪಹಾಸ್ಯಕ್ಕೆ ಈಡಾದುದನ್ನು ಸುಳ್ಯದ ಕಾಂಗ್ರೆಸಿಗರು ನೆನಪಿಸಿಕೊಳ್ಳಲಿ.

ಅಧಿಕಾರದಿಂದ ತಿರಸ್ಕರಿಸಲ್ಪಟ್ಟ ಕಾಂಗ್ರೆಸಿಗರು ಹೇಗಾದರೂ ತನ್ನ ಅಸ್ತಿತ್ವವನ್ನು ತೋರ್ಪಡಿಸುವ ಹತಾಶ ಪ್ರಯತ್ನವಾಗಿ ಇದೀಗ ಸುಳ್ಯದಲ್ಲಿ ಬಿಜೆಪಿ, ಸೇವಾಭಾರತಿಯ ಸೇವಾ ಕಾರ್ಯಗಳ ವೈಖರಿಯನ್ನು ನೋಡಿ ಮಾನಸಿಕ ಸ್ಥಿಮಿತ ನನ್ನು ಕಳೆದುಕೊಂಡವರಂತೆ ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ.

ಜನರಿಂದ ತಿರಸ್ಕರಿಸಲ್ಪಟ್ಟ ಕಾಂಗ್ರೆಸ್ಸಿಗರಿಗೆ ಇನ್ನು ಮುಂದೆ ಸುಳ್ಳು ಆರೋಪ ಮಾಡುವ ವೃತ್ತಿಯೆ ಶಾಶ್ವತವಾಗುಳಿಯಲಿದೆ.
ಭಾರತೀಯ ಜನತಾ ಪಾರ್ಟಿಯ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡು ಕೊರೋನ ಪಿಡುಗನ್ನು ಸಮರ್ಥವಾಗಿ ನಿಭಾಯಿಸುತ್ತಿವೆ.

ಜಗತ್ತಲ್ಲಿ ಈ ಹಿಂದೆ ಪೋಲಿಯೋ ಪಿಡುಗಿನ ಸಂದರ್ಭದಲ್ಲಿ ಲಸಿಕೆ ತಯಾರಾದ ಎಷ್ಟು ವರ್ಷಗಳ ಬಳಿಕ ಭಾರತದಲ್ಲಿ ಲಸಿಕೆ ವಿತರಿಸಲಾಯಿತು ಎಂಬುದನ್ನು ಕಾಂಗ್ರೆಸಿಗರು ನೆನಪಿಸಿಕೊಳ್ಳಬೇಕಿದೆ. ಆದರೆ ಕೊರೋನ ಕಾಯಿಲೆ ಬಂದ ಒಂದು ವರ್ಷದಲ್ಲೇ ದೇಶೀಯವಾಗಿ ಲಸಿಕೆ ಉತ್ಪಾದನೆ ಮಾಡಿದುದಲ್ಲದೆ ಕನಿಷ್ಠ ಅವಧಿಯಲ್ಲಿ ಗರಿಷ್ಟ ಲಸಿಕೆ ವಿತರಣೆಯ ಕಾರ್ಯ ಮಾಡುತ್ತಿದೆ.

ಕೋವಿಡ್ ನ ಮೊದಲ ಅಲೆಯ ಸಂದರ್ಭದಲ್ಲಿ ಬಡಜನರಿಗೆ ಸಹಕಾರ ನೀಡಿದಂತೆ ಎರಡನೆಯ ಅಲೆಯ ಸಂದರ್ಭದಲ್ಲೂ ಕೇಂದ್ರ ಸರಕಾರದಿಂದ ಮುಂದಿನ ದೀಪಾವಳಿ ತನಕ ಬಡ ಕುಟುಂಬ ಗಳಿಗೆ ಹೆಚ್ಚುವರಿ ಅಕ್ಕಿ ವಿತರಣೆ ಮಾಡುತ್ತಿದೆ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ಇದೆ ಮೇ ತಿಂಗಳಲ್ಲಿ ಎರಡು ಕಂತಿನ ಹಣವನ್ನು ಏಕಕಾಲದಲ್ಲಿ ಖಾತೆಗಳಿಗೆ ಜಮಾ ಮಾಡಿದೆ.

ಕರ್ನಾಟಕ ರಾಜ್ಯ ಸರಕಾರವು ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗಕ್ಕೆ, ಅಸಂಘಟಿತ ಕಾರ್ಮಿಕರಿಗೆ, ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ – ಈ ರೀತಿ ಎಲ್ಲ ರೀತಿಯ ದುಡಿಯುವ ವರ್ಗಕ್ಕೆ ಅನುಕೂಲವಾಗುವಂತೆ 1350ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ.
ಭಾರತೀಯ ಜನತಾ ಪಾರ್ಟಿಯು ಆಡಳಿತ ಪಕ್ಷವಾಗಿದ್ದು, ಜನರ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.

ಸೇವಾ ಹಿ ಸಂಘಟನ್ ಅನ್ನುವ ಪ್ರಧಾನಮಂತ್ರಿಯವರ ಕರೆಯಂತೆ ಪಕ್ಷದ ಎಲ್ಲಾ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪಕ್ಷದ ಚುನಾಯಿತ ಪ್ರತಿನಿಧಿಗಳು ಮುಂಚೂಣಿಯಲ್ಲಿ ನಿಂತುಸಂತ್ರಸ್ತರಿಗೆ ನೆರವಾಗುವ ಕಾರ್ಯದಲ್ಲಿ ತೊಡಗಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷವು ದೇಶದ ಈ ಸಂಕಷ್ಟ ಕಾಲದಲ್ಲಿ ಜನರ ಸೇವೆಯಲ್ಲಿ ತೊಡಗುವುದನ್ನು ಬಿಟ್ಟು ತನ್ನ ಕ್ಷುಲ್ಲಕ ರಾಜಕೀಯ ಚಾಳಿಯನ್ನು ಮುಂದುವರಿಸಿದೆ.
ದೇಶ ಕಂಡ ಮಹಾನ್ ನಾಯಕ ವಾಜಪೇಯಿ ಅವರ ಮಾತಿನಂತೆ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇರುವುದಕ್ಕಿಂತ ಅಧಿಕಾರದಲ್ಲಿ ಇಲ್ಲದಿರುವಾಗಲೆ ಹೆಚ್ಚು ಅಪಾಯಕಾರಿ ಎನ್ನುವುದನ್ನು ಕಾಂಗ್ರೆಸ್ಸಿನ ನಾಯಕರು ದೆಹಲಿಯಿಂದ ಸುಳ್ಯದ ತನಕ ತೋರಿಸಿಕೊಡುತ್ತಿದ್ದಾರೆ.

ಬಿಜೆಪಿ ಯು ದೇಶದ ಪ್ರಗತಿಗಾಗಿ ಮಾಡುತ್ತಿರುವ ದೂರಗಾಮಿ ದೃಷ್ಟಿಯ ಕಾರ್ಯಕ್ರಮಗಳಿಂದಗಿಯೇ ಜನ ಬಿಜೆಪಿ ಯನ್ನು ಬೆಂಬಲಿಸುತ್ತಿದ್ದಾರೆ. 70ವರ್ಷಗಳ ಸ್ವಾರ್ಥ ರಾಜಕಾರಣ ನಡೆಸಿದ ಕಾಂಗ್ರೆಸ್ ಭಾರತದ ರಾಜಕಾರಣದಲ್ಲಿ ಶಾಶ್ವತವಾಗಿ ಶವಪೆಟ್ಟಿಗೆಯನ್ನು ಸೇರಲಿದೆ ಎಂದು ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ
ಸುಬೋದ್ ಶೆಟ್ಟಿ ಮೇನಾಲ,ರಾಕೇಶ್ ರೈ ಕೆಡೆಂಜಿ
ತಿಳಿಸಿದ್ದಾರೆ.

Leave A Reply

Your email address will not be published.