ಬಾಲಕಿಯ ಎದುರು ಪ್ಯಾಂಟ್ ಜಾರಿಸಿ ಅಸಭ್ಯ ವರ್ತನೆ | ಅನ್ಯಕೋಮಿನ ಯುವಕನ ವಿರುದ್ಧ ಫೋಕ್ಸೋ ,ದಲಿತ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲು

ಬಂಟ್ವಾಳ : ವಿಟ್ಲ ಪಡ್ನೂರು ಗ್ರಾಮದ ಬೆದ್ರಕಾಡು ಎಂಬಲ್ಲಿ ಬಾಲಕಿಯೊಂದಿಗೆ ಪ್ಯಾಂಟ್ ಜಾರಿಸಿ ಅಸಭ್ಯ ರೀತಿಯಲ್ಲಿ ವರ್ತಿಸಿದ ಅನ್ಯಕೋಮಿನ ಯುವಕನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ಧೆಯಡಿ ಕೇಸು ದಾಖಲಾಗಿದೆ.

ಪ.ಜಾ.ಗೆ ಸೇರಿರುವ ಬಾಲಕಿಯ ಕುಟುಂಬದ ಕೃಷಿ ಜಮೀನಿಗೆ ಪಕ್ಕದಮನೆಯ ನಜೀರ್ ಎಂಬವರ ಮನೆಯ ಆಡುಗಳು ಬಂದಿದ್ದನ್ನು ಓಡಿಸಿದ ಬಾಲಕಿಯೊಂದಿಗೆ ನಜೀರ್ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಕೃಷಿಯನ್ನು ಹಾಳು ಮಾಡುತ್ತಿರುವ ಆಡುಗಳನ್ನು ಓಡಿಸಿದ್ದನ್ನು ಪ್ರಶ್ನಿಸಿದ ನಜೀರ್ ಬಾಲಕಿಯ ಅಕ್ಕ, ಬಾವ ಅವರಿಗೆ ಅವಾಚ್ಯವಾಗಿ ನಿಂದಿಸಿ ತನ್ನ ಪ್ಯಾಂಟ್ ಜಾರಿಸಿ ವಿಡಿಯೋ ಮಾಡು ಎಂದು ಅಸಭ್ಯವಾಗಿ ಬಾಲಕಿಯ ಜೊತೆ ವರ್ತಿಸಿದ್ದಾನೆ ಎನ್ನಲಾಗಿದೆ.

ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ, ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.