ಕೊರೋನಾ ಸೋಂಕಿತರನ್ನು ಬೆತ್ತಲಾಗಿಸಿ, ನೆಲದ ಮೇಲೆ ನೀಡುತ್ತಿದ್ದಾರೆ ಚಿಕಿತ್ಸೆ !!!
ಭುವನೇಶ್ವರದ ಮಯೂರ್ಭಂಜ್ ಕೋ ಆಸ್ಪತ್ರೆಯಲ್ಲಿ ಸೋಂಕಿತರನ್ನು ನೆಲದ ಮೇಲೆ ಬೆತ್ತಲಾಗಿ ಮಲಗಿಸಿ ಚಿಕಿತ್ಸೆ ಕೊಡುತ್ತಿರುವ ವಿಡಿಯೋ, ಫೋಟೋ ವೈರಲ್ ಆಗಿದ್ದು, ವ್ಯಾಪಕ ಕೋಲಾಹಲ ಸೃಷ್ಟಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ಹಾಗೂ ವಿಡಿಯೋ ತುಣುಕುಗಳಲ್ಲಿ ಸೋಂಕಿತರು ಹಾಸಿಗೆ ಇಲ್ಲದೇ ನೆಲದ ಮೇಲೆ ಮಲಗಿರುವುದು ಕಂಡುಬರುತ್ತದೆ. ಅಲ್ಲದೆ ಕೆಲ ಸೋಂಕಿತರು ಬಟ್ಟೆಯೇ ಇಲ್ಲದ ಪರಿಸ್ಥಿತಿಯಲ್ಲಿರುವುದು ಸಹ ಕಂಡುಬಂದಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ವಿಭಾಗೀಯ ವೈದ್ಯಕೀಯ ಅಧಿಕಾರಿ ಎನ್.ಆರ್.ದಾಸ್, ‘ಈ ಘಟನೆಯ ಕುರಿತು ಯಾವುದೇ ಮಾಹಿತಿ ನಮಗೆ ತಿಳಿದುಬಂದಿಲ್ಲ. ಆದರೆ, ಈ ಕುರಿತು ತುರ್ತು ತನಿಖೆಗೆ ಆದೇಶಿಸಲಾಗಿದೆ’ ಎಂದಿದ್ದಾರೆ.
ಈ ಕಷ್ಟಕಾಲದಲ್ಲಿ ಕೆಲವು ಆಸ್ಪತ್ರೆಗಳಲ್ಲಿ ಮೂಲಸೌಲಭ್ಯದ ಕೊರತೆಯಿಂದಾಗಿ ಈ ರೀತಿಯಲ್ಲಿ ಸೋಂಕಿತರನ್ನು ನೋಡಿಕೊಳ್ಳಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಸಂಬಂಧಪಟ್ಟವರು ತಕ್ಷಣ ಇದಕ್ಕೆ ಸ್ಪಂದಿಸಿ ಒದಗಿಸಬೇಕಾದ ಸೌಕರ್ಯವನ್ನು ಒದಗಿಸಿದರೆ ಸಾಕಪ್ಪ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.