ಕಮಲ ಮುಡಿದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ । ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ
ನವದೆಹಲಿ: ಖ್ಯಾತ ಬ್ಯಾಡ್ಮಿಟಂನ್ ತಾರೆ ಸೈನಾ ನೆಹ್ವಾಲ್ ರಾಜಕೀಯ ಕ್ಷೇತ್ರಕ್ಕಿಳಿದಿದ್ದು ಇಂದು ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
29 ರ ಹರೆಯದ ಸೈನಾ ಒಂದು ಕಾಲದ ವರ್ಲ್ಡ್ ನಂಬರ್ 1 ಬ್ಯಾಡ್ಮಿಂಟನ್ ಆರ್ಟಗಾರ್ತಿ.
ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಕೂಟಗಳಲ್ಲಿ ಡಾಮಿನೇಟ್ ಮಾಡುವಂತಹಾ ಆಟ ಪ್ರದರ್ಶಿಸಿದ ಸೈನಾ ನೆಹ್ವಾಲ್ ಒಟ್ಟು 24 ಅಂತಾರಾಷ್ಟೀಯ ಪ್ರಶಸ್ತಿಗಳನ್ನು ಎತ್ತಿ ಬೀಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಭಾವಿತನಾಗಿ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಸೈನಾ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮೋದಿ ಸರ್ಕಾರ ‘ಖೇಲೋ ಇಂಡಿಯಾ ಸೇರಿದಂತೆ ಕ್ರೀಡಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಯಿಂದ ಪ್ರಭಾವಿತನಾಗಿ ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಭಾವಿತಳಾಗಿ ಬಿಜೆಪಿ ಸೇರ್ಪಡೆ- ಸೈನಾ ನೆಹ್ವಾಲ್
ನವದೆಹಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿದ ಸೈನಾ ‘ವೈಯಕ್ತಿಕವಾಗಿ ನಾನು ಕಠಿಣಪರಿಶ್ರಮಿ. ಹಾಗಾಗಿ ಕಠಿಣ ಪರಿಶ್ರಮ ಪಡುವವರ ಜತೆ ಕೆಲಸ ಮಾಡಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದಿದ್ದಾರೆ. ದೆಹಲಿ ಚುನಾವಣೆ ಸಂದರ್ಭದಲ್ಲಿ ಸೈನಾರನ್ನು ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳುವ ಸಾಧ‍್ಯತೆಯಿದೆ ಎನ್ನಲಾಗಿದೆ.
ಆಕೆಯ ಸಾಧನೆಗೆ ದೇಶದ ಕ್ರೀಡಾಳುಗಳಿಗೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮ ಭೂಷಣ್, ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ ಪ್ರಶಸ್ತಿಗಳು ಮುಡಿಗೇರಿದೆ.
ಹರಿಯಾಣಾದ ಈ ಸುಂದರಿ ಕ್ರೀಡಾಳುವಾಗಿ ಅರಳಿದ್ದುಬ್ಯಾಡ್ಮಿಂಟನ್ ತಾರೆ ಪುಲ್ಲೇಲ ಗೋಪಿಚಂದ್ ಎಂಬ ಸರಳ ಜೀವಿಯ ಗರಡಿಯಲ್ಲಿ.
ಅಂತಹ ಸಾಧಕಿ ಇವತ್ತು ಕಮಲ ಮುಡಿದಿದ್ದಾಳೆ. ಕಮಲದ ಕೈಹಿಡಿದ ಆಕೆ ರಾಜಕೀಯವಾಗಿ ಕಮಾಲ್ ಮಾಡಲೆಂಬುದು ಆಕೆಯ ಅಭಿಮಾನಿಗಳ ಆಶಯ.