ಪುತ್ತೂರು ತಹಶೀಲ್ದಾರರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ

ಪುತ್ತೂರು ತಾಲೂಕು ಕಾರ್ಯ ನಿರ್ವಾಹಕ ದಂಡಾಧಿಕಾರಿಯವರೂ ಆಗಿರುವ ತಹಶೀಲ್ದಾರ್ ಟಿ.ರಮೇಶ್ ಬಾಬುರವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ ನೀಡಿರುವ ಪ್ರಕರಣ ನಡೆದಿದ್ದು, ಈ ಬಗ್ಗೆ ಅವರು ಗುರುವಾರ ಮಂಗಳೂರು ಸೈಬರ್ ಕ್ರೈಮ್ ಗೆ ದೂರು ನೀಡಿದ್ದಾರೆ.

ತಹಶೀಲ್ದಾರ್ ರಮೇಶ್ ಬಾಬುರವರ ಹೆಸರಿನಲ್ಲಿ ಇತ್ತೀಚೆಗೆ ಯಾರೋ ಫೇಸ್ಬುಕ್ ಖಾತೆ ತೆರೆದಿದ್ದು ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗಿತ್ತು.‌ ರಿಕ್ವೆಸ್ಟ್ ಒಪ್ಪಿದ ಗ್ರಾಮಕರಣಿಕರು, ಸಾಮಾಜಿಕ ಕಾರ್ಯಕರ್ತರು ಸಹಿತ ಹಲವರಿಗೆ ಇದೇ ಫೇಸ್ಬುಕ್ ಅಕೌಂಟಿನಿಂದ ಸಂದೇಶ‌ ಕಳುಹಿಸಿ ತುರ್ತಾಗಿ ಹಣ ಬೇಕಿರುವುದರಿಂದ ತಕ್ಷಣ ಗೂಗಲ್ ಪೇ ಮಾಡುವಂತೆ ಕೇಳಲಾಗಿತ್ತು.

ಈ ಮಾಹಿತಿ ಅರಿತ ತಹಸಿಲ್ದಾರರು ತನ್ನ ಹೆಸರಿನಲ್ಲಿ ಯಾರೋ ನಕಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಡಿರುವ ಬಗ್ಗೆ ದೂರು ನೀಡಿದ್ದಾರೆ

Leave A Reply

Your email address will not be published.