ಮೊದಲ ರಾತ್ರಿಯ ದಿನವೇ ವಧುವಿನ ಮೇಲೆ ನಡೆಯಿತು ಗ್ಯಾಂಗ್ ರೇಪ್

ಕನಸು ಕಂಡಿದ್ದ ಮದುವೆಯಾದ ಮೊದಲ ರಾತ್ರಿಯೇ ವಧೂವರ ಇಬ್ಬರಿಗೂ ದುಸ್ವಪ್ನವಾಗಿ ಕಾಡಿ ಅವರಿಬ್ಬರ ಆಸೆ ಗಳನ್ನು ಹೊಸಕಿ ಹಾಕಿದೆ.

 


ಪೊಲೀಸ್ ಸಮವಸ್ತ್ರದಲ್ಲಿ ಬಂದಿದ್ದ ನಾಲ್ವರು ದರೋಡೆಕೋರರು ಗಂಡನ ಎದುರೇ 22 ವರ್ಷದ ನವ ವಧುವಿನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಎಂದು ಪೊಲೀಸರು ಹೇಳಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ, ಲಾಹೋರ್ ನಿಂದ 350 ಕಿ.ಮೀ.ದೂರದಲ್ಲಿರುವ ಮುಲ್ತಾನ್ ನಲ್ಲಿನ ಮೊಚಿಪುರದಲ್ಲಿರುವ ವರ ಮೊಹಮ್ಮದ್ ಲತೀಫ್ ನ ನಿವಾಸಕ್ಕೆ ವಧುವಿನೊಂದಿಗೆ ಮೆರವಣಿಗೆ ತಲುಪಿದೆ. ಆಗ ಮುಂಜಾನೆ ಮುಂಜಾನೆ 3 ಗಂಟೆ ಆಗಿತ್ತು. ಆ ಸಮಯದಲ್ಲಿ ಪೊಲೀಸ್ ಸಮವಸ್ತ್ರದಲ್ಲಿದ್ದ ನಾಲ್ವರು ದರೋಡೆಕೋರರು, ಮನೆಯೊಳಗೆ ನುಗ್ಗಿದ್ದು, ಕುಟುಂಬಸ್ಥರನ್ನು ಒತ್ತೆಯಾಳಾಗಿಟ್ಟುಕೊಂಡು ಪತಿ ಸೇರಿದಂತೆ ಎಲ್ಲರನ್ನೂ ಕಟ್ಟಿ ಹಾಕಿದ್ದಾರೆ. ನಂತರ ಪತಿಯ ಎದುರೇ ವಧುವಿನ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಾರೆ.

ದರೋಡೆಕೋರರು ನಂತರ ವಧುವಿನ ಬಳಿಯಿದ್ದ 58 ಗ್ರಾಮ್ ಚಿನ್ನ, ಮತ್ತು 12500 ನಗದು ದೋಚಿ ಪರಾರಿಯಾಗಿದ್ದಾರೆ. ನಂತರ ದಂಪತಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ವೈದ್ಯಕೀಯ ವರದಿಯಲ್ಲಿ ರೇಪ್ ನಡೆದಿರುವುದು ದೃಢಪಟ್ಟಿದೆ. ವಧುವಿನ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಕುರಾಮ್ ಆಲಿ ಶಾ ನ್ಯಾಯ ಕೊಡಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.
ದರೋಡೆಕೋರರು ಈ ಈ ಕೃತ್ಯ ನಡೆಸಿದ್ದಾರೆಯೇ ಅಥವಾ ವೈಯಕ್ತಿಕ ದ್ವೇಷದಿಂದ ಇದನ್ನು ನಡೆಸಲಾಗಿದ್ದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಉನ್ನತ ಪೊಲೀಸ್ ಅಧಿಕಾರಿಗಳಿಗೆ
ನಿರ್ದೇಶಿಸಿದ್ದಾರೆ.

Leave A Reply

Your email address will not be published.