ಮೊಬೈಲ್ ಗೇಮ್ ಆಡದಂತೆ ಬುದ್ಧಿವಾದ ಹೇಳಿದಕ್ಕೆ ಬಾಲಕ ಆತ್ಮಹತ್ಯೆ
ಮೊಬೈಲ್ನಲ್ಲಿ ಗೇಮ್ ಆಡುವುದನ್ನು ಬಿಟ್ಟು ಓದಿನ ಕಡೆ ಗಮನ ಕೊಡುವಂತೆ ಬುದ್ಧಿಮಾತು ಹೇಳಿದಕ್ಕಾಗಿ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಬಿಜೂರು ಗ್ರಾಮದ ಹೊಸಕೋಟೆ ಎಂಬಲ್ಲಿ ರವಿವಾರ ನಡೆದಿದೆ.
ಮೃತನನ್ನು ಉಪ್ಪುಂದ ಸ್ಕೂಲ್ನ 8ನೇ ತರಗತಿಯ ವಿದ್ಯಾರ್ಥಿ ರೋಹನ್ (14) ಎಂದು ಗುರುತಿಸಲಾಗಿದೆ.
ಮನೆಯ ರೂಮಿನಲ್ಲಿ ಏಕಾಂಗಿಯಾಗಿ ಇರುತ್ತಿದ್ದ ರೋಹನ್, ಮೊಬೈಲ್ ನಲ್ಲಿ ಯಾವಾಗಲು ಗೇಮ್ ಆಡುತ್ತಿದ್ದನು ಎನ್ನಲಾಗಿದ್ದು, ಇದಕ್ಕೆ ಮನೆಯವರು ಮೊಬೈಲ್ ನಲ್ಲಿ ಗೇಮ್ ಆಡಬಾರದು, ಓದಿನ ಕಡೆ ಗಮನ ಕೊಡಬೇಕೆಂದು ಬುದ್ಧಿ ಮಾತು ಹೇಳಿದ್ದರು. ಇದೇ ವಿಚಾರಕ್ಕೆ ಕೋಪಗೊಂಡು ರೋಹನ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗೀಗ ಇಂತಹ ಕ್ಷುಲ್ಲಕ ವಿಷಯಗಳಿಗೆ ಮಕ್ಕಳು ತಮ್ಮ ಜೀವ ಕಳೆದುಕೊಳ್ಳುತ್ತಿರುವುದು ಹೆಚ್ಚು ಕಂದುಬರುತ್ತಿದೆ.