‘ಮೂರನೇಯ ಮಹಾಯುದ್ಧದ ದಿಶೆಯಲ್ಲಿ’ ಈ ಕುರಿತು ಆನ್‌ಲೈನ್ ವಿಶೇಷ ವಿಚಾರ ಸಂಕಿರಣ !

ಪ್ಯಾಲೆಸ್ಟೈನ್ ಮತ್ತು ಚೀನಾ ಇವುಗಳ ಕುರಿತು ಭಾರತವು ಸ್ಪಷ್ಟ ನಿಲುವನ್ನು ತೆಗೆದುಕೊಂಡು ಇಸ್ರೈಲ್‌ಗೆ ಬೆಂಬಲ ನೀಡಬೇಕು ! – ಶ್ರೀ. ಸುಶೀಲ ಪಂಡಿತ, ಸಂಸ್ಥಾಪಕರು, ‘ರೂಟ್ಸ್ ಇನ್ ಕಾಶ್ಮೀರ್’

 

ಕಾರ್ಗಿಲ್ ಯುದ್ಧದ ಸಮಯದಲ್ಲಿ ಇಸ್ರೈಲ್ ಭಾರತಕ್ಕೆ ಯುದ್ಧಸಾಮಗ್ರಿಗಳನ್ನು ನೀಡಿ ಸಹಾಯ ಮಾಡಿತ್ತು. ಇದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ; ಆದರೆ ಇಂದು ಇಸ್ರೈಲ್ ಮತ್ತು ಪ್ಯಾಲೆಸ್ಟೈನ್ ಇವುಗಳ ನಡುವಿನ ಯುದ್ಧದಲ್ಲಿ ನಾವು ಪ್ಯಾಲೆಸ್ಟೈನ್‌ನನ್ನು ಸಮರ್ಥಿಸುತ್ತಿದ್ದೇವೆ, ಇದು ಮಿತ್ರತ್ವಕ್ಕೆ ದ್ರೋಹ ಬಗೆದಂತಾಗುವುದಿಲ್ಲವೇ ? ಇದೇ ಪ್ಯಾಲೆಸ್ಟೈನ್ ಕಾಶ್ಮೀರದ ವಿಷಯದಲ್ಲಿ ಸತತವಾಗಿ ಭಾರತದ ವಿರುದ್ಧ ಮತದಾನವನ್ನು ಮಾಡಿದೆ. ಕಾಶ್ಮೀರದಲ್ಲಿ ಜಿಹಾದಿ ಹಿಂಸಾಚಾರದ ಸಮರ್ಥನೆ ಮಾಡಿದೆ. ಅದು ಎಂದಿಗೂ ನಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ. ಅದೇ ರೀತಿ ಚೀನಾದ ಬಗ್ಗೆಯೂ ನಮ್ಮ ನಿಲುವು ಸ್ವಾತಂತ್ರ್ಯಕಾಲದಿಂದ ಯೋಗ್ಯವಾಗಿಲ್ಲ. ಸತತ ಭಾರತದ ಭೂಭಾಗವನ್ನು ಕಬಳಿಸಿದ ನಂತರವೂ ನಾವು ಚೀನಾದೆಡೆಗೆ ಮಿತ್ರತ್ವದ ದೃಷ್ಟಿಯಿಂದ ಏಕೆ ನೋಡುತ್ತಿದ್ದೇವೆ ? ನಾವು ಚೀನಾವನ್ನು ಏಕೆ ಖಂಡಿಸುವುದಿಲ್ಲ ? ಈ ಬಗ್ಗೆ ಅಮೇರಿಕಾದ ಮಾಜಿ ಸಚಿವ ಮೈಕ್ ಪಾಂಪಿಓ ಇವರು ‘ಭಾರತವು ಸ್ಪಷ್ಟವಾದ ನಿಲುವನ್ನು ತಾಳದಿದ್ದರೆ ಚೀನಾದ ಸೊಕ್ಕು ಹೆಚ್ಚಾಗುವುದು’, ಎಂದು ಬಹಿರಂಗವಾಗಿ ಹೇಳಿದ್ದರು. ಆದುದರಿಂದ ಭಾರತವು ಪ್ಯಾಲೆಸ್ಟೈನ್ ಮತ್ತು ಚೀನಾ ಇವುಗಳ ಬಗ್ಗೆ ಜಾಗರೂಕ ನಿಲುವನ್ನು ತೆಗೆದುಕೊಳ್ಳದೇ ಸ್ಪಷ್ಟ ನಿಲುವನ್ನು ತೆಗೆದುಕೊಂಡು ಇಸ್ರೈಲ್‌ಗೆ ಬೆಂಬಲ ನೀಡಬೇಕು, ಎಂಬ ಸ್ಪಷ್ಟವಾದ ಹೇಳಿಕೆಯನ್ನು ‘ರೂಟ್ಸ್ ಇನ್ ಕಾಶ್ಮೀರ’ನ ಸಂಸ್ಥಾಪಕರಾದ ಶ್ರೀ. ಸುಶೀಲ ಪಂಡಿತ ಇವರು ಮಂಡಿಸಿದರು. ಅವರು ‘ಹಿಂದೂ ಜನಜಾಗೃತಿ ಸಮಿತಿ’ಯು ಆಯೋಜಿಸಿದ ‘ನಾವು ಮೂರನೇಯ ಮಹಾಯುದ್ಧದ ದಿಶೆಗೆ ಸಾಗುತ್ತಿದ್ದೇವೆಯೇ ?’ ಈ ‘ಆನ್‌ಲೈನ್ ವಿಚಾರ ಸಂಕಿರಣ’ದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ ಜಾಲತಾಣ HinduJagruti.org, ಯು-ಟ್ಯೂಬ್ ಮತ್ತು ಟ್ವಿಟರ್ ಇವುಗಳ ಮೂಲಕ 11 ಸಾವಿರಗಳಿಗಿಂತ ಹೆಚ್ಚು ಜನರು ಪ್ರತ್ಯಕ್ಷ ವೀಕ್ಷಿಸಿದರು.

ಈ ಸಮಯದಲ್ಲಿ ರಾಜಕೀಯ ಸಲಹೆಗಾರರಾದ ಶ್ರೀ ನಿಶೀಥ ಶರಣ ಇವರು ಮಾತನಾಡುತ್ತಾ, , ಜಾಗತಿಕ ಪ್ರಭುತ್ವವನ್ನು ಪ್ರಾಪ್ತಮಾಡಿಕೊಳ್ಳಲು ಅಮೇರಿಕಾದ ನಂತರ ಚೀನಾವು ಪ್ರಯತ್ನದಲ್ಲಿದೆ. ಆದುದರಿಂದ ಅದು ‘ಕೊರೊನಾ’ ವಿಷಾಣುವಿನ ಮೂಲಕ ಜೈವಿಕ ಯುದ್ಧವನ್ನು ಹೇಗೆ ಹೋರಾಡಬೇಕು’ ಎಂಬುದಕ್ಕಾಗಿ ಅನೇಕ ವರ್ಷಗಳಿಂದ ಪ್ರಯೋಗ ಮಾಡುತ್ತಿದೆ. ಈ ಕುರಿತು ಅನೇಕ ಶೋಧಪ್ರಬಂಧಗಳನ್ನು ಅವರ ವಿಜ್ಞಾನಿಗಳು ಪ್ರಸ್ತುತ ಪಡಿಸಿದ್ದಾರೆ. ಈ ವಿಷಯದ ಕುರಿತು ಆಸ್ಟ್ರೇಲಿಯಾದ ಸೈರಿ ಮ್ಯಾಕ್ಸನ್ ಇವರು ವಿಸ್ತಾರವಾದ ಪುಸ್ತಕವನ್ನು ಬರೆಯುತ್ತಿದ್ದಾರೆ. ಆದುದರಿಂದ ಮೊದಲ ಮಹಾಯುದ್ಧವನ್ನು ರಾಸಾಯನಿಕ ಶಸ್ತ್ರಗಳಿಂದ ಮತ್ತು ಎರಡನೇಯ ಮಹಾಯುದ್ಧವನ್ನು ಅಣ್ವಸ್ತ್ರಗಳಿಂದ ಹೋರಾಡಲಾಯಿತು ಮತ್ತು ಮೂರನೇಯ ಮಹಾಯುದ್ಧವನ್ನು ಜೈವಿಕ ಶಸ್ತ್ರಗಳಿಂದ ಹೋರಾಡಲಾಗುವುದು, ಎಂಬುದು ಅಮೇರಿಕಾ ಸಹಿತ ಅನೇಕ ತಜ್ಞರ ಅಭಿಪ್ರಾಯವಾಗಿದೆ. ಈ ಯುದ್ಧವು ಕೆಲವು ವರ್ಷಗಳ ಹಿಂದೇಯೇ ಆರಂಭವಾಗಿದೆ, ಎಂದರು.

‘ಹಿಂದೂ ಜನಜಾಗೃತಿ ಸಮಿತಿ’ಯು ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಮಾತನಾಡುತ್ತಾ, ಒಟ್ಟಾರೆ ಪರಿಸ್ಥಿತಿಯನ್ನು ನೋಡಿದರೆ ಮೂರನೇಯ ಮಹಾಯುದ್ಧವು ಈಗಾಗಲೇ ಪ್ರಾರಂಭವಾಗಿದೆ ಎಂದೆನಿಸುತ್ತದೆ. ಈ ಯುದ್ದದ ಪ್ರಸವ ವೇದನೆಯು ಕಂಡು ಬರುತ್ತಿದೆ. ಯುದ್ಧಕಾಲದಲ್ಲಿ ಗಡಿಯಲ್ಲಿನ ಸೈನ್ಯದಂತೆ ದೇಶದ ಅಂತರ್ಗತ ಸುರಕ್ಷೆಗಾಗಿ ಭಾರತೀಯ ನಾಗರಿಕರು ಸೈನಿಕರಾಗಿ ಹೋರಾಡಬೇಕಾಗಲಿದೆ. ಯುದ್ಧಕಾಲದಲ್ಲಿ ಅನೇಕ ವಿಷಯಗಳು ಸಿಗುವುದಿಲ್ಲ; ಆದುದರಿಂದ ಔಷಧಗಳು, ನೀರು, ಆಹಾರ, ವಿದ್ಯುತ್ ಮುಂತಾದವುಗಳ ಪ್ರತ್ಯೇಕ ಆದ ವ್ಯವಸ್ಥೆಯನ್ನು ಮಾಡಿಡಬೇಕಾಗುವುದು. ಇದಕ್ಕಾಗಿ ಸನಾತನ ಸಂಸ್ಥೆಯು ೯ ಭಾಷೆಗಳಲ್ಲಿ ‘ಆಪತ್ಕಾಲೀನ ಸುರಕ್ಷೆ’ ಹೆಸರಿನ ‘ಅಂಡ್ರೈಡ್ ಆಪ್’ನ್ನು ಪ್ರಾರಂಭಿಸಿದೆ’, ಎಂದು ಹೇಳಿದರು.

ಈ ಸಮಯದಲ್ಲಿ ‘ಭಾರತ ರಕ್ಷಾ ಮಂಚ’ ದ ರಾಷ್ಟ್ರೀಯ ಸಚಿವ ಶ್ರೀ. ಅನಿಲ ಧೀರ ಇವರು ಮಾತನಾಡುತ್ತಾ, ಇಸ್ರೈಲ್ ಮತ್ತು ಪ್ಯಾಲೆಸ್ಟೈನ್ ಇವುಗಳ ಮಧ್ಯೆ ಯುದ್ಧವು ಆರಂಭವಾದ ನಂತರ ಇಸ್ರೈಲ್‌ನಲ್ಲಿರುವ ಅರಬಿ ಜನರು ಗಲಭೆಯನ್ನು ಆರಂಭಿಸಿದರು. ಅದೇ ರೀತಿ ಭಾರತ-ಪಾಕ್ ನಡುವೆ ಯುದ್ಧವಾದರೆ ಭಾರತದಲ್ಲಿಯೂ ಆಗಬಹುದು; ಏಕೆಂದರೆ ಭಾರತದಲ್ಲಿ ಅನೇಕ ಸೂಕ್ಷ್ಮಪ್ರದೇಶಗಳಿವೆ. ನಾವು ಬಂಗಾಲ ಮತ್ತು ಕೇರಳ ರಾಜ್ಯಗಳಲ್ಲಿನ ಹಿಂಸಾಚಾರದ ಘಟನೆಗಳಿಂದ ಇಂದಿನವರೆಗೂ ಪಾಠವನ್ನು ಕಲಿತಿಲ್ಲ. ಇದರಿಂದ ರಾಷ್ಟ್ರೀಯ ಧೋರಣೆಯನ್ನು ಖಚಿತಪಡಿಸಿಕೊಳ್ಳಬೇಕು. ಪಂಜಾಬ್ ರಾಜ್ಯವು, ಮುಸಲ್ಮಾನರಿಗಾಗಿ ಪ್ರತ್ಯೇಕ ಜಿಲ್ಲೆಯನ್ನೇ ತಯಾರಿಸಿದೆ; ಆದರೆ ಇದೇ ರೀತಿಯ ಬೇಡಿಕೆಯು ಇತರ ರಾಜ್ಯಗಳಿಂದ ಬಂದರೆ ಭವಿಷ್ಯದಲ್ಲಿ ಅದು ಅಪಾಯಕಾರಿಯಾಗಬಹುದು’, ಎಂದು ಹೇಳಿದರು.

ತಮ್ಮವಿಶ್ವಾಸಿ,
ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.

Leave A Reply

Your email address will not be published.