ಕಡಲ್ಕೊರೆತ ಪ್ರದೇಶಗಳಿಗೆ ಸಚಿವ ಅಂಗಾರ ಭೇಟಿ
ವಾಯುಭಾರ ಕುಸಿತಕ್ಕೆ ತಲ್ಲಣಗೊಂಡಿರುವ ಸೋಮೇಶ್ವರದ ಹಿಂದು ರುದ್ರಭೂಮಿ, ಸೋಮೇಶ್ವರ ಮೋಹನ್ ಹಾಗೂ ಹೇಮಚಂದ್ರ ಅವರ ಮನೆ, ಉಚ್ಚಿಲದ ರೋಹಿತ್ ಮಾಸ್ಟರ್, ನಾಗೇಶ್ ಉಚ್ಚಿಲ್, ರೂಪೇಶ್ ಉಚ್ವಿಲ್ ಹಾಗೂ ಕಡಪ್ಪರ ಫ್ರೆಂಡ್ಸ್ ಕ್ಲಬ್ ಹಾಗೂ ಬೆಟ್ಟಂಪಾಡಿ ಎಂಡ್ ಪಾಯಿಂಟ್ ಬಳಿಗೆ ಶನಿವಾರ ಸಚಿವ ಅಂಗಾರ ಅವರು ಬೇಟಿ ನೀಡಿದರು.
ತುರ್ತು ಅಗತ್ಯ ಇರುವ ಸೋಮೇಶ್ವರದ ಹೇಮಚಂದ್ರ ಹಾಗೂ ನೋಹನ್ ಅವರ ಮನೆ ಬಳಿ, ಉಚ್ಚಿಲ ರೋಹಿತ್ ಮಾಸ್ಟರ್ ಹಾಗೂ ರೂಪೇಶ್ ಉಚ್ಚಿಲ್, ನಾಗೇಶ್ ಉಚ್ವಿಲ್ ಅವರ ಮನೆ ಬಳಿ ಸದ್ಯಕ್ಕೆ ಮನೆ ರಕ್ಷಿಸಲು ಕಾಮಗಾರಿ ನಡೆಸುವಂತೆ ಸೂಚಿಸಿದರು.
ಈಗಾಗಲೇ ಈ ಭಾಗದಲ್ಲಿ ವಾಯುಭಾರ ಕುಸಿತದಿಂದಾದ ಅನಾಹುತದ ಬಗ್ಗೆ ಮಾಹಿತಿ ಪಡೆದಿದ್ದು ಅಧಿಕಾರಿಗಳ ಜೊತೆ ಸಮಗ್ರವಾಗಿ ಚರ್ಚಿಸು ತ್ತೇನೆ, ಹಂತಹಂತವಾಗಿ ಕಾಮಗಾರಿ ನಡೆಸುವುದಾದರೂ ತುರ್ತು ಅವಶ್ಯ ಇದ್ದಲ್ಲಿಗೆ ತಕ್ಷಣ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.
ಸಚಿವರ ಜೊತೆಯಲ್ಲಿ ಬಂದರು ಹಾಗೂ ಮೀನುಗಾರಿಕೆ ಅಧಿಕಾರಿಗಳು, ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸತೀಶ್ ಕುಂಪಲ, ಧನಲಕ್ಷ್ಮಿ ಗಟ್ಟಿ, ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಕ್ಷೇತ್ರ ಉಪಾಧ್ಯಕ್ಷ ಯಶವಂತ ಅಮೀನ್, ಕ್ಷೇತ್ರ ಕೋಶಾಧಿಕಾರಿ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಶಂಕರ್ ಹಾಗೂ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ವಾಣಿ ವಿ. ಆಳ್ವ ಜೊತೆಗಿದ್ದರು.