ವಾಣೀಜ್ಯೋದ್ಯಮ ಬ್ಲಾಕ್ ಆದರೂ ಪಾನಪ್ರಿಯರ ದಯೆಯಿಂದ ಮದ್ಯದ ಉದ್ಯಮ ರಾಕಿಂಗ್ !!
ಬೆಂಗಳೂರು : ಕೊರೋನಾ ಎರಡನೆಯ ಅಲೆ ಜೋರಾಗಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ಡೌನ್ ಹೇರಲಾಗಿದ್ದು ವ್ಯಾಪಾರ-ವಹಿವಾಟು ಬಹುತೇಕ ಸ್ಥಗಿತಗೊಂಡಿದೆ. ಕೆಲವೊಂದು ಉದ್ಯಮಗಳು ಸಂಪೂರ್ಣ ಲಾಕ್ ಆಗಿದ್ದರೂ ಕರ್ನಾಟಕದಲ್ಲಿ ಮಧ್ಯ ಮಾರಾಟ ಯಾವುದೇ ಪರಿಣಾಮವಿಲ್ಲದೆ ನಿರಾತಂಕವಾಗಿ ನಡೆಯುತ್ತಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಶೇಕಡಾ 95ಕ್ಕಿಂತ ಹೆಚ್ಚು ದಿನದ ವಹಿವಾಟು ಎಗ್ಗಿಲ್ಲದೆ ನಡೆಯುತ್ತಿದೆ. ಮದ್ಯಪ್ರಿಯರು ಸರ್ಕಾರದ ಬೊಕ್ಕಸವನ್ನು ತುಂಬಿಸುತ್ತಲೆ ಇದ್ದಾರೆ.ಆ ಮೂಲಕ ತಾವು ಎಕಾನಮಿ ವಾರಿಯರ್ಸ್ ಎಂಬುದನ್ನು ಮಗದೊಮ್ಮೆ ಪ್ರೂವ್ ಮಾಡಿದ್ದಾರೆ.
ಮುಂದೆ ದಿನದ 10 ಗಂಟೆಗಳ ಕಾಲ ತೆರೆದಿರುತ್ತಿದ್ದ ಮದ್ಯದಂಗಡಿಗಳು ಈಗ ಕೇವಲ 4 ಗಂಟೆಗಳಿಗೆ ಸೀಮಿತವಾಗಿದ್ದರುೂ ವ್ಯಾಪಾರದಲ್ಲಿ ಯಾವುದೇ ಬದಲಾವಣೆ ಆಗದಿರುವುದು ಅಚ್ಚರಿಗೆ ಕಾರಣವಾಗಿದೆ. ರೆಸ್ಟೋರೆಂಟ್, ಪಬ್ ಗಳು ಬಂದ್ ಆಗಿದ್ದು, ಅಲ್ಲಿ ನಡೆಯುತ್ತಿದ್ದ ವ್ಯಾಪಾರಗಳು ಮೊಟಕು ಗೊಂಡ ಕಾರಣ ಮಧ್ಯದ ವ್ಯಾಪಾರದ ಮೇಲೆ ಕೊಂಚ ಪರಿಣಾಮ ಬೀರಿದೆ. ಅದರ ಹೊರತಾಗಿ ಮದ್ಯಪ್ರಿಯರ ದಯೆಯಿಂದ ಉದ್ಯಮಕ್ಕೆ ಯಾವುದೇ ಪೆಟ್ಟು ಬಿದ್ದಿಲ್ಲ.
ರಾಜ್ಯದಲ್ಲಿ ಸಾಮಾನ್ಯ ದಿನಗಳಲ್ಲಿ 1.7 ಲಕ್ಷ ಬಾಕ್ಸ್ ಮಧ್ಯ ಮಾರಾಟವಾಗುತ್ತಿದ್ದರೆ, ಇದೀಗ ಲಾಕ್ಡೌನ್ ಸಮಯದಲ್ಲಿ 1.6 ಲಕ್ಷ ಬಾಕ್ಸ್ ಗಳು ಮಾರಾಟವಾಗುತ್ತಿದೆ.
ಕಳೆದ ವರ್ಷ 22,700 ಕೋಟಿ ಆದರೆ ಅಂದಾಜಿಸಲಾಗಿತ್ತು, ಅದು ಈಡೇರಿದೆ, ಈ ವರ್ಷ 24,780 ಆದರೆ ನಿರೀಕ್ಷಿಸಲಾಗಿದೆ. ನಿರೀಕ್ಷೆಯಂತೆ ಆದಾಯ ಹರಿದು ಬರುತ್ತಿದೆ. ಕಳೆದ ಬಾರಿ ಮದ್ಯದಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿದ ಪರಿಣಾಮ ಮತ್ತೆ ತೆರೆದಾಗ ಜನದಟ್ಟಣೆ ಎದುರಾಗಿತ್ತು. ಆ ಕಾರಣದಿಂದ ಈ ಬಾರಿ ಮದ್ಯದಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಲ್ಲ. ಕೋರೋನಾ ಹಾವಳಿ ಕಡಿಮೆಯಾದ ತಕ್ಷಣ ಮದ್ಯದಂಗಡಿಗಳು ಸಂಪೂರ್ಣವಾಗಿ ತೆಗೆದುಕೊಳ್ಳಲಿದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಮತ್ತು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.