ಪಂಜಕ್ಕೆ ಬಂತು ಪರಿಸರ ಸ್ನೇಹಿ ಕಾರು | ಹೊಗೆ ರಹಿತ ಹಾಗೂ ಶಬ್ದ ರಹಿತ ಕಾರಿಗೆ ಭವಿಷ್ಯದಲ್ಲಿ ಬೇಡಿಕೆ ಹೆಚ್ಚಾದೀತೇ..?
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ,ಪಂಜದ ಕೃಷ್ಣನಗರದ ಡಾ.ದೇವಿಪ್ರಸಾದ್ ಕಾನತ್ತೂರ್ ಅವರು ಹೊಗೆ,ಶಬ್ದ ರಹಿತ ಪರಿಸರ ಸ್ನೇಹಿ ಟಾಟಾ ನೆಕ್ಸಾನ್ ಇಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ.
ಹಲವು ಸಮಯಗಳ ಹಿಂದೆ ಅವರು ಬುಕ್ಕಿಂಗ್ ಮಾಡಿದ್ದು ಮೇ.14 ರಂದು ಕಾರು ಅವರಿಗೆ ತಲುಪಿದೆ. ಒಮ್ಮೆ ಚಾರ್ಜಿಂಗ್ ಆದರೆ ಸುಮಾರು 320 ಕಿ.ಮೀ.ಓಡುತ್ತದೆ.8 ವರುಷ ಬ್ಯಾಟರಿ ವಾರೆಂಟಿ ಇರುತ್ತದೆ. ಕಂಪೆನಿಯ ಮಾಹಿತಿ ಪ್ರಕಾರ ಕಿ.ಮೀ.ಗೆ ಅಂದಾಜು ಕೇವಲ 70 ಪೈಸೆ ಖರ್ಚಾಗುವುದು. ಮೂರು ಮೋಡೆಲ್ ನಲ್ಲಿ ಕಾರು ಮಾರುಕಟ್ಟೆಗೆ ಬಂದಿದ್ದು. ಡಾ.ದೇವಿಪ್ರಸಾದ್ ಕಾನತ್ತೂರ್ ರವರು ಖರೀದಿಸಿದ್ದು ಟಾಪ್ ಮೊಡೆಲ್. ಅವರ ಪುತ್ರ ಕಾರ್ ಕಾರ್ಡಿಯಾಕ್ ಕೇರ್ ಸಂಸ್ಥೆಯ ಮಾಲೀಕ ಪುನೀತ್ ಕಾನತ್ತೂರ್ ಟಾಟಾ ನೆಕ್ಸಾನ್ ಇಲೆಕ್ಟ್ರಿಕ್ ಕಾರು ಬುಕಿಂಗ್ ಮಾಡಿದ್ದು ಕೆಲವೇ ದಿನಗಳಲ್ಲಿ ಅವರಿಗೆ ದೊರೆಯಲಿದೆ. ಪುನೀತ್ ಕಾನತ್ತೂರ್ ಅವರ ಸಂಸ್ಥೆಯಲ್ಲಿ ಕಾರಿನ ಕಾರ್ಬನ್ ತೆಗೆದು ಕಾರಿನ ಸಾಮರ್ಥ್ಯವನ್ನು ಹೆಚ್ಚಿಸುವ ಮುಖಾಂತರ ಕಾರಿನ ಆಯುಷ್ಯ ವೃದ್ಧಿಸಲಾಗುತ್ತದೆ.
ಪೆಟ್ರೋಲ್ ಡೀಸೆಲ್ ದರ ಗಗನಕ್ಕೆ ಏರುತ್ತಿದೆ. ಇಂತಹ ಸಂದರ್ಭ ಪರಿಸರಸ್ನೇಹಿ ಎಲೆಕ್ಟ್ರಿಕ್ ಕಾರು ಅತ್ಯಂತ ಕಡಿಮೆ ಖರ್ಚಿನಲ್ಲಿ ಸಂಚರಿಸಿ ಜನರಿಗೆ ಪ್ರಯೋಜನವಾಗಲಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಇಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾದೀತು. ಅದೇರೀತಿ ಇದು ಹೊಗೆ ರಹಿತ ಹಾಗೂ ಶಬ್ದರಹಿತ ವಾಹನವಾದ್ದರಿಂದ ಪರಿಸರ ಸ್ನೇಹಿಯಾಗಿದೆ. ಟಾಟಾ ಕಾರು ಉತ್ಪಾದನಾ ಕಂಪೆನಿಯು ಭಾರತೀಯ ಕಂಪೆನಿಯಾಗಿದ್ದು, ದೇಶೀಯ ಕಾರು ಇದಾಗಿದೆ ಎಂದು ಡಾ. ದೇವಿಪ್ರಸಾದ್ ಕಾನತ್ತೂರ್ ಅವರು ಅಭಿಪ್ರಾಯ ಪಟ್ಟಿದ್ದಾರೆ.