Mysore : ಪ್ರವಾಸಿಗರಿಗೆ ಶಾಕ್ – ಮೈಸೂರು ಅರಮನೆ ನೋಡಲು ಇನ್ನು ಬಿಚ್ಚಬೇಕು ಈ ಪರಿ ದುಡ್ಡು !!

Share the Article

Mysore : ವಿಶ್ವವಿಖ್ಯಾತ ಮೈಸೂರು ಅರಮನೆ ವೀಕ್ಷಿಸಲು ಪ್ರವಾಸಿಗರಿಗೆ ನಿಗದಿಪಡಿಸಿದ್ದ ಪ್ರವೇಶ ದರವನ್ನು ಇದೀಗ ಇದ್ದಕ್ಕಿದ್ದಂತೆ ಏರಿಕೆ ಮಾಡಲಾಗಿದೆ. ಈ ಮೂಲಕ ಜಗದ್ವಿಖ್ಯಾತ ಅರಮನೆಯನ್ನು ನೊಡಲು ಇದೀಗ ಜಿಎಸ್​ಟಿ ಕಟ್ಟಬೇಕಿದೆ.

ಹೌದು, ಜಿಎಸ್​​ಟಿ(GST) ಸೇರಿಸಿ ಮೈಸೂರು(Mysore)ಅರಮನೆ ಪ್ರವೇಶ ಟಿಕೆಟ್​ ದರ ಹೆಚ್ಚಳ ಮಾಡಲಾಗಿದೆ. ವಿದೇಶಿ ಪ್ರವಾಸಿಗರು, ಭಾರತೀಯ ವಯಸ್ಕರಿಗೆ, ಮಕ್ಕಳಿಗೆ( 10-18 ವರ್ಷದೊಳಗಿನ) ಮತ್ತು ಪ್ರವಾಸ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಹೆಚ್ಚಿಸಲಾಗಿದೆ. ಈಚೆಗೆ ನಡೆದ ಅರಮನೆ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಎಷ್ಟು ಹೆಚ್ಚಳ?
* ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಬರೋಬ್ಬರಿ 900 ರೂ. ಹೆಚ್ಚಳ ಮಾಡಲಾಗಿದೆ. ಅಂದರೆ ಈ ಹಿಂದೆ ಇವರಿಗೆ 100ರೂ ದರವಿತ್ತು. ಆದರೀಗ 1000ರೂ ಮಾಡಲಾಗಿದೆ.
* ಭಾರತೀಯ ವಯಸ್ಕರಿಗೆ ಪ್ರವೇಶ ಶುಲ್ಕ 120 ರೂಪಾಯಿ ಏರಿಕೆ ಮಾಡಲಾಗಿದೆ.
* 10ರಿಂದ 18 ವರ್ಷದೊಳಗಿನ ಮಕ್ಕಳಿಗೆ 70 ರೂಪಾಯಿ ಪ್ರವೇಶ ಶುಲ್ಕ ಫಿಕ್ಸ್ ಮಾಡಿದ್ದರೆ, ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ತಲಾ 50 ರೂ. ನಿಗದಿಪಡಿಸಿದೆ.

ಇನ್ನು ನಾಳೆಯಿಂದಲೇ(ಅಕ್ಟೋಬರ್ 25) ಪರಿಷ್ಕೃತ ದರ ಜಾರಿಗೆ ಬರಲಿದೆ. ಇನ್ನು ಒಳ ಆವರಣದಲ್ಲಿ ಚಪ್ಪಲಿ ಸ್ಟ್ಯಾಂಡ್, ಲಗ್ಗೇಜ್ ಕೊಠಡಿ ಹಾಗೂ ಶೌಚಾಲಯ ಸೇವಾ ಶುಲ್ಕವನ್ನ ರದ್ದುಪಡಿಸಲಾಗಿದೆ.

Leave A Reply

Your email address will not be published.