ಪುತ್ತೂರಿನ ಮದುವೆ ಮನೆಯಲ್ಲಿ ಡಿಜೆ ಸದ್ದು | ಸದ್ದಡಗಿಸಿದ ಅಧಿಕಾರಿಗಳು
ಪುತ್ತೂರಿನ ಹಾರಾಡಿ ರೈಲ್ವೇ ಸೇತುವೆಯ ಸಮೀಪ ಇಬ್ಬರು ಸಹೋದರರ ಮದುವೆಯ ಸಂಭ್ರಮಕ್ಕೆ ಸಂಬಂಧಿಸಿದಂತೆ ರಾತ್ರಿ ವೇಳೆ ಡಿಜೆ ಹಾಕಿದರಿಂದ ಅಧಿಕಾರಿಗಳು ದಾಳಿ ನಡೆಸಿ ಡಿಜೆ ಸದ್ದಡಗಿಸಿದ ಘಟನೆ ನಡೆದಿದೆ.
ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ಕುರಿತು ಸಾರ್ವಜನಿಕರ ದೂರಿನ ಮೇರೆಗೆ ಪುತ್ತೂರು ನಗರಸಭಾ ಅಧಿಕಾರಿಗಳ ತಂಡ ಮದುವೆ ಮನೆಗೆ ತೆರಳಿ ಎಚ್ಚರಿಕೆ ನೀಡಿ ಡಿಜೆ ಶಬ್ದವನ್ನು ನಿಲ್ಲಿಸಿದರು.
ಶಬ್ದ ಮಾಲಿನ್ಯ ಕುರಿತು ಮೇಲಾಧಿಕಾರಿಗಳಿಗೆ ಸಾರ್ವಜನಿಕರು ನೀಡಿದ ದೂರಿಗೆ ಸಂಬಂಧಿಸಿ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸರು ಹಾರಾಡಿಯ ರೈಲ್ವೇ ಬ್ರಿಡ್ಜ್ ಸಮೀಪದಲ್ಲಿರುವ ಮದುವೆ ಮನೆಗೆ ಹೋಗಿ ಎಚ್ಚರಿಕೆ ನೀಡಿ ಡಿಜೆ ಶಬ್ದವನ್ನು ನಿಲ್ಲಿಸಿದ್ದಾರೆ.