ಆನ್‍ಲೈನ್‍ನಲ್ಲಿ ಮೀನು ಖರೀದಿಸಿದವನಿಗೆ ಡೆಲಿವರಿ ಬಂದದ್ದು ಜೀವಂತ ಮೊಸಳೆ !!
ಮನೆಯಲ್ಲಿ ಮೀನು ಸಾಕಲೆಂದು ಆನ್‍ಲೈನ್‍ನಲ್ಲಿ ಮೀನು ಖರೀದಿಸಿದ್ದ ಹುಡುಗನಿಗೆ ಪಾರ್ಸಲ್ ನಲ್ಲಿ ಮೊಸಳೆ ಇರುವುದನ್ನು ನೋಡಿ ಬೆಚ್ಚಿ ಬಿದ್ದಿದ್ದಾನೆ.
ಚೈನಾದ ಬಾಲಕನೋರ್ವನಿಗೆ ಮನೆಯಲ್ಲಿ ಮೀನು ಸಾಕುವ ಆಸೆಯಾಗಿದೆ. ಅದಕ್ಕಾಗಿ ಆತ ಆನ್ ಲೈನ್ ನಲ್ಲಿ ಮೀನು ಬುಕ್ ಮಾಡಿದ್ದಾನೆ. ಆದರಂತೆ ಆತನಿಗೆ ಪಾರ್ಸಲ್ ಬಂದಿದೆ. ಖುಷಿಯಿಂದ ಆತ ಪಾರ್ಸಲ್ ಓಪನ್ ಮಾಡುತ್ತಲೇ ಜೋರಾಗಿ ಕಿರುಚಿಕೊಂಡಿದ್ದಾನೆ. ಆತನಿಗೆ ಮೀನಿನ ಬದಲಿಗೆ ಅಲ್ಲಿ ಮೊಸಳೆಯ ಮರಿಯನ್ನು ಮೊಸಳೆಯನ್ನು ಪಾರ್ಸೆಲ್ ಮಾಡಲಾಗಿತ್ತು.
ಅದು ಸಿಯಾಮಿಸ್ ಎನ್ನುವ ವಿಶೇಷ ತಳಿಯ ಮೊಸಳೆಯಾಗಿದ್ದು, ಈ ಮೊಸಳೆ ತಳಿ ಅಳಿವಿನಂಚಿನಲ್ಲಿರುವ ಜೀವಿಯಾಗಿದೆ ಎನ್ನಲಾಗಿದೆ. ಮೊಸಳೆ ಕಂಡು ಗಾಬರಿಯಾದ ಕುಟುಂಬ ಅದನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕೊರಿಯರ್ ಕಂಪನಿ,
‘ನಾವು ಯಾವುದೇ ಜೀವಂತ ಪ್ರಾಣಿಗಳನ್ನು ಡೆಲಿವರಿ ಮಾಡುವುದಿಲ್ಲ. ಈ ಪ್ರಕರಣದಲ್ಲಿ ಅದು ಹೇಗೆ ಜೀವಂತ ಪ್ರಾಣಿಯನ್ನು ಡೆಲಿವರಿ ಮಾಡಲಾಗಿದೆ ಎಂದು ತನಿಖೆ ನಡೆಸುತ್ತೇವೆ. ಅದು ಆರ್ಡರ್ ಮಾಡಿದ ಮೀನಿನ ಬದಲಿಗೆ ಮೊಸಳೆಯನ್ನು ಪಾರ್ಸೆಲ್ ಆಗಿದೆ ಎಂದು ಶೀಘ್ರದಲ್ಲಿ ಪತ್ತೆ ಹಚ್ಚಲಾಗುವುದು ಎಂದು ಕೊರಿಯರ್ ಕಂಪನಿ ಹೇಳಿಕೊಂಡಿದೆ.