ಬೆಳ್ತಂಗಡಿ | ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿರುವ ಪೊಲೀಸರು, ಕಂದಾಯ & ನಗರಸಭೆ ಅಧಿಕಾರಿಗಳು, ವೈನ್ ಸೇರಿದಂತೆ ಇತರ ಅಗತ್ಯ ಸೇವೆಗಳು ಲಭ್ಯ !
ಬೆಳಿಗ್ಗೆ ಯಥಾಪ್ರಕಾರ ಅಂಗಡಿ ಮುಂಗಟ್ಟುಗಳನ್ನು ತೆರೆದು ತಮ್ಮ ತಮ್ಮ ವ್ಯಾಪಾರ ಶುರುಮಾಡಿದ್ದ ಅಂಗಡಿಗಳನ್ನು ಪೊಲೀಸರು ಮತ್ತು ನಗರಸಭೆಯ ಸಿಬ್ಬಂದಿಗಳು ಬಂದು ಮುಚ್ಚಿಸುತ್ತಿದ್ದಾರೆ.
ಜಿಲ್ಲಾಡಳಿತದ ಸೂಚನೆಯ ಮೇರೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಬಟ್ಟೆ, ಮೊಬೈಲ್ ಹಾಗೂ ಚಿನ್ನಾಭರಣದ ಅಂಗಡಿಗಳನ್ನು ಮುಚ್ಚುವಂತೆ ಪೊಲೀಸರು ಮತ್ತು ಪಂಚಾಯಿತಿ ಅಧಿಕಾರಿಗಳು ತಹಸಿಲ್ದಾರ್ ದಿಢೀರ್ ಸೂಚನೆ ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ ಇದೀಗ ದಿನಬಳಕೆಯ ಅಂಗಡಿ ಮುಗ್ಗಟ್ಟುಗಳನ್ನು ಬಿಟ್ಟು ಎಲ್ಲಾ ಅಂಗಡಿಗಳನ್ನು ಬಂದ್ ಮಾಡುತ್ತಿರುವ ಪೊಲೀಸರು ಮತ್ತು ಪಂಚಾಯತ್ ಇಲಾಖೆ ಸಿಬ್ಬಂದಿಗಳು.
ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿಚ್ಚುವಂತೆ ಬೆಳ್ತಂಗಡಿ ಠಾಣಾ ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಸೂಚಿಸಿದ್ದಾರೆ.
ಈಗ ಮೆಡಿಕಲ್, ತರಕಾರಿ, ಹಾಲು ಮೀನು,ಮಾಂಸದ ಅಂಗಡಿ ಬಿಟ್ಟು ಬಹುತೇಕ ಅಂಗಡಿಗಳು ತಮ್ಮ ಶಟರ್ ಕೆಳಗೆಳೆದುಕೊಂಡಿವೆ. ಪೆಟ್ರೋಲ್ ಬಂಕ್ ಬ್ಯಾಂಕ್ ವಾಹನ ಸಂಚಾರಕ್ಕೆ ಅವಕಾಶ ಇದೆ.
ಇದೇ ಪರಿಸ್ಥಿತಿ ಇತರ ಕಡೆಗಳಲ್ಲೂ ಕಂಡು ಬರುತ್ತಿದೆ.
ದಕ್ಷಿಣ ಕನ್ನಡದ ಅಲ್ಲಲ್ಲಿ ಪೊಲೀಸರು ಮಾಲಕರ ಮಧ್ಯೆ ಸಣ್ಣ ವಾಗ್ವಾದ. ಸರ್ಕಾರದ ಆತುರದ ನಿರ್ಧಾರಕ್ಕೆ ಅಂಗಡಿ ಮಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಸರಕಾರದ ಮೇಲೆ ಇರುವ ಅಸಮಾಧಾನವನ್ನು ಅಂಗಡಿ ಮಾಲೀಕರು ಪೊಲೀಸರ ಮುಂದೆ ವ್ಯಕ್ತಪಡಿಸುತ್ತಿದ್ದಾರೆ. ಹಳ್ಳಿ ಪ್ರದೇಶದಲ್ಲಿ, ಒಂದೆರಡು ಅಂಗಡಿಗಳು ಇರುವ ಕಡೆ ಅಂಗಡಿಗಳು ತೆರೆದಿವೆ.
ಎಕಾನಮಿ ವಾರಿಯರ್ಸ್ ಆದ ಬಾರುಗಳು ವೈನ್ ಶಾಪ್ ಗಳು ತೆರೆದುಕೊಂಡಿವೆ. ಆದರೆ ಪಾರ್ಸಲ್ ಮಾಡಲು ಮಾತ್ರ ಅವಕಾಶ. ಪೇಟೆಗಳಲ್ಲಿ ಜನಸಂಖ್ಯೆ ತೀರ ವಿರಳ. ಇವತ್ತು ಜನರು ಪೇಟೆಗೆ ಬರಲು ಯಾವ ಅಡ್ಡಿ ಇಲ್ಲ.