Ad Widget

ಭಾರತ ಮತ್ತು ದುಬೈ ನಡುವಿನ ವಿಮಾನಯಾನ ಇದೇ ಭಾನುವಾರದಿಂದ ಬಂದ್ !

ಭಾರತದಲ್ಲಿ ಕೋವಿಡ್-19 ಪ್ರಕರಣಗಳ ತೀವ್ರ ಹೆಚ್ಚಳದ ಕಾರಣ ಯುನೈಟೆಡ್ ಅರಬ್ ಎಮಿರೇಟ್ಸ್ ಇದೇ ಭಾನುವಾರದಿಂದ 10 ದಿನಗಳ ಕಾಲ ದುಬೈ ಮತ್ತು ಭಾರತದ ನಡುವಿನ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಿದೆ.

ಇತ್ತೀಚೆಗೆ ಬ್ರಿಟನ್ ತನ್ನ ಕಟ್ಟುನಿಟ್ಟಾದ ಪ್ರಯಾಣ ನಿರ್ಬಂಧಗಳನ್ನು ಭಾರತದ ಮೇಲೆ ಹೇರಿದ ಕೆಲವು ದಿನಗಳ ನಂತರ ಮತ್ತು ಪ್ರಧಾನಿ ಬೋರಿಸ್ ಜಾನ್ಸನ್ ನವದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದರು.

ಇದೀಗ ಕೆಲವು ದಿನಗಳ ನಂತರ ಗಲ್ಫ್ ರಾಷ್ಟ್ರದ ವಿಮಾನಯಾನ ಸಂಸ್ಥೆ ವಿಮಾನಹಾರಾಟವನ್ನು ನಿಲ್ಲಿಸಲು ಕ್ರಮ ಕೈಗೊಂಡಿದೆ. ಲಸಿಕೆ ಹಾಕದೇ ಇರುವವರು ತಮ್ಮ ಚಲನೆಯ ಮೇಲೆ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಈ ಮದ್ಯೆ ಭಾರತದಿಂದ ಬರುವ ಪ್ರಯಾಣಿಕರಿಗೆ 10 ದಿನಗಳ ಕ್ವಾರಂಟೈನ್ ವಿಧಿಸುವುದಾಗಿ ಫ್ರಾನ್ಸ್ ಕೂಡ ಹೇಳಿದೆ.

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: