ಮರ್ಕಂಜ : ಗಂಡ ಹೆಂಡತಿ ಜಗಳ ,ಹೆಂಡತಿಗೆ ಗಂಡನಿಂದ ಕತ್ತಿಯೇಟು

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಹೈದಂಗೂರು ಎಂಬಲ್ಲಿ ಗಂಡ ಹೆಂಡತಿಯ ನಡುವೆ ಜಗಳವಾಗಿ ಪತಿಯು ಪತ್ನಿಗೆ ಕತ್ತಿಯಿಂದ ಕಡಿದಿರುವ ಬಗ್ಗೆ ವರದಿಯಾಗಿದೆ.

ಹೈದಂಗೂರು ನಿವಾಸಿ ಸುಂದರ ಮತ್ತು ಅವರ ಪತ್ನಿ ಯಶೋದಾ ಎಂಬವರ ಮಧ್ಯೆ ನಿನ್ನೆ ರಾತ್ರಿಯಿಂದ ಜಗಳ ನಡೆಯುತ್ತಿತ್ತೆನ್ನಲಾಗಿದೆ.

ಈ ಮಧ್ಯೆ ಸುಂದರ ತನ್ನ ಪತ್ನಿ ಯಶೋದಾಗೆ ಕತ್ತಿಯಿಂದ ಕಡಿದಿದ್ದಾರೆ ಎನ್ನಲಾಗಿದೆ.

ಇದರಿಂದ ತೀವ್ರವಾಗಿ ಗಾಯಗೊಂಡ ಯಶೋಧಾ ಅವರನ್ನು ಅಂಬ್ಯುಲೆನ್ಸ್ ಮೂಲಕ ಸುಳ್ಯ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.