ಹೊಸ ವರ್ಷಾಚರಣೆಯ ಹೆಸರಿನಲ್ಲಿ ಸಂಸ್ಕತಿ ವಿರೋಧಿ ನಡವಳಿಕೆಗಳಲ್ಲಿ ದಯವಿಟ್ಟು ಪಾಲ್ಗೊಳ್ಳಬೇಡಿ|ಹಿಂದೂ ಪರ ಸಂಘಟನೆ ಗಳ ಮನವಿ
‘ ಹಿಂದೂ ಧರ್ಮಿಯರಾದ ನಮಗೆ ಚಂದ್ರಮಾನ ಯುಗಾದಿ ಅಥವಾ ಸೌರಮಾನ ಯುಗಾದಿ ನಮ್ಮ ಹೊಸ ವರುಷದ ಆರಂಭವಾಗಿದ್ದು ಯುಗಾದಿಯ ಸಂದರ್ಭ ಸಂವತ್ಸರ ಬದಲಾಗುತ್ತದೆ. ಭಾರತೀಯ ನಂಬಿಕೆಯಂತೆ ಹೊಸ ವರುಷ ಎಂದರೆ ಹೊಸ ಸಂವತ್ಸರಕ್ಕೆ ಸ್ವಾಗತ ಮಾಡುವುದಾಗಿದ್ದು, ಇದಕ್ಕೆ ಹೊರತಾಗಿ ಡಿ. 31ರಂದು ಆಚರಿಸಲ್ಪಡುವ ವಿದೇಶಿ ಪ್ರೇರಿತ, ಬ್ರಿಟೀಷ್ ಗುಲಾಮಗಿರಿಯ ಸಂಕೇತವಾದ ಹೊಸ ವರ್ಷಾಚರಣೆ ನಮ್ಮ ಸಂಸ್ಕತಿ ಮತ್ತು ಪರಂಪರೆಗೆ ವಿರುದ್ಧವಾಗಿದೆ “.
” ಜನವರಿ 1 ಕ್ಯಾಲೆಂಡರ್ ಬದಲಾವಣೆಯ ದಿನವೇ ಹೊರತು ಹಿಂದೂಗಳಿಗೆ ಹೊಸ ವರ್ಷ ಆರಂಭ ಅಲ್ಲ. ಹೊಸ ವರ್ಷವನ್ನು ಸಂಭ್ರಮಿಸುವ ನೆಪದಲ್ಲಿ ಡಿ. 31ರಂದು ನಡೆಯುವ ” ಎಂದು ಪುತ್ತೂರಿನ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಪರಿವಾರ ಸಂಘಟನೆಗಳು ಮನವಿ ಮಾಡಿವೆ.
ಡಿಸೆ೦ಬರ್ 31 ರ ರಾತ್ರಿ ಆಚರಿಸುವ ಹೊಸವರ್ಷದ ಪಾರ್ಟಿಯ ಬಗ್ಗೆ ಯುವ ಜನತೆ ಏನನ್ನುತ್ತಾರೆ ? ಆಚರಣೆ ಬೇಕಾ, ಬೇಡವಾ ? ಇಂಟರೆಸ್ಟಿಂಗ್ ಮಾಹಿತಿ ನಾಳೆ ಭಾನುವಾರ ಪ್ರಕಟ.