ಮುದ್ದೆಯ ಇಂಟರ್ನ್ಯಾಷನಲ್ ಬ್ರಾಂಡ್ ಅಂಬಾಸಿಡರ್ ‘ ದೇವೇಗೌಡ ‘ ರಿಗೂ ಇಷ್ಟವಾಗುವ ಮುದ್ದೆ ಇನ್ನುಮುಂದೆ ‘ ಮುದ್ದೆ ಮೇಕರ್ ‘ ನಲ್ಲಿ ಸಾಧ್ಯ!

0 6

ಮುದ್ದೆ ಮೇಕರ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇಲ್ಲಿಯತನಕ, ಮುದ್ದೆ ಮಾಡುವುದು ಒಂದು ಬಹುದೊಡ್ಡ ಚಾಲೆಂಜ್. ಅದನ್ನು ಮಾಡಲು ಸರಿಯಾದ ಅನುಭವ ಇದ್ದರೆ ಮಾತ್ರ ಮುದ್ದೆ ಸರಿಯಾದ ಹಿಡಿತಕ್ಕೆ ಬರುತ್ತದೆ. ಗಂಟುಗಳಿಲ್ಲದೆ, ಮೃದುವಾಗಿ, ಹದಕ್ಕೆ ಬೆಂದು ತಿನ್ನಲು ಯೋಗ್ಯವಾಗಿರುತ್ತದೆ.

ಈಗ ಕೋಲನ್ನು ಹಿಡಿದು ಕಷ್ಟಪಟ್ಟು ತಿರುಗಿಸಿ ಬೆವರು ಹರಿಸುವ ಅಗತ್ಯವಿಲ್ಲ. ಮುದ್ದೆ ಗಂಟು ಗಂಟಾಗುವ ಆತಂಕವಿಲ್ಲ. ಮುದ್ದೆ ಮಾಡುವಾಗ ರೆಟ್ಟೆಯ ಶಕ್ತಿ ಸೋತುಹೋಗುವ ಭಯವಿಲ್ಲ. ಆರಾಮವಾಗಿ, ಸುಲಭವಾಗಿ, ಕಡಿಮೆ ಸಮಯದಲ್ಲಿ, ಮುದ್ದೆಯ ಇಂಟರ್ನ್ಯಾಷನಲ್ ಬ್ರಾಂಡ್ ಅಂಬಾಸಿಡರ್ ‘ ದೇವೇಗೌಡ ‘ ರಿಗೂ ಇಷ್ಟವಾಗುವ ಮುದ್ದೆ ಇನ್ನುಮುಂದೆ ಚಿಗುರು ಬ್ರಾಂಡಿನ ‘ ಮುದ್ದೆ ಮೇಕರ್ ‘ ನಲ್ಲಿ ಸಾಧ್ಯ. ಬೆಲೆ ಸುಮಾರು 2650 ರೂಪಾಯಿಗಳು.

ಸಾರು ಯಾವುದೇ ಇರಲಿ ; ಸೊಪ್ಪು ಸಾರು, ಉಪ್ಪುಸಾರು, ಬೇಳೆ ಸಾರು, ಹೆಸರು ಕಾಳು ಸಾರು, ನಾನ್ ವೆಜ್ ಪ್ರಿಯರ ಮಟನ್ ಕೂರ್ಮ, ಬೋಟಿ ಗಸಿ – ನೆಂಜಿಕೊಳ್ಳಲು ಯಾವುದಾದರೇನು ? ಬಾಳೆ ಎಲೆ ಹರಡಿಕೊಂಡು ಅದರ ಮಧ್ಯಕ್ಕೆ ಎರಡು ಮುದ್ದೆ ಗುಂಡು ಬಿಸಾಕಿ ತಿಂದು ತೇಗಿ. ನಿರೋಗಿಯಾಗಿ ದೀರ್ಘಾಯುಷಿಯಾಗಿ ಬದುಕಿ.

ದಕ್ಷಿಣ ಭಾರತದ ಪ್ರಧಾನ ಆಹಾರಗಳಲ್ಲಿ ರಾಗಿ ಮುದ್ದೆ ಕೂಡ ಒಂದು. ರಾಗಿ ಮುದ್ದೆಯ ಉಪಯೋಗಗಳೋ ಒಂದೆರಡಲ್ಲ.

ರಾಗಿ ಮುದ್ದೆಯ ಉಪಯೋಗಗಳು

  • ರಾಗಿ ಮುದ್ದೆ ತೂಕ ಇಳಿಕೆಯಲ್ಲಿ ಸಹಕಾರಿ.
  • ಮುದ್ದೆಯಲ್ಲಿ ಹೇರಳವಾದ ಕ್ಯಾಲ್ಶಿಯಂ ಮತ್ತು ಕಬ್ಬಿಣಸತ್ವವಿದೆ. ಅದು ಎಲುಬನ್ನು ಬಲಿಷ್ಠಗೊಳಿಸುತ್ತದೆ.
    ಮುದ್ದೆಯು ಮದುಮೇಹ ನಿಯಂತ್ರಣಕ್ಕೂ ಸಹಕಾರಿ.
  • ಕೊಲೆಸ್ಟರಾಲ್ ನ ಮಟ್ಟವನ್ನು ತಗ್ಗಿಸುತ್ತದೆ. ಪ್ರೊಟೀನ್, ಕಾರ್ಬೋಹೈಡ್ರೇಟ್ ಸಮ್ಮಿಳಿತ ಆಹಾರ.
  • ದೇಹದಲ್ಲಿ ಹೀಮೋಗ್ಲೋಬಿನ್ ನ ಅಂಶವನ್ನು ಜಾಸ್ತಿಮಾಡುತ್ತದೆ.
  • ಶರೀರವನ್ನು ಒಟ್ಟಾರೆಯಾಗಿ ಬಲಪಡಿಸುತ್ತದೆ.
  • ತ್ವಚೆಯ ತಾರುಣ್ಯ ರಕ್ಷಣೆಗೂ ಇದು ಸಹಕಾರಿ.

https://www.youtube.com/watch?v=WYVreBhkUWU&feature=emb_logo

Leave A Reply