ಪುತ್ತೂರು ಪಾಂಗಳಾಯಿ ಪರ್ಲಡ್ಕ ಶ್ರೀ ಅರಸು ಮುಂಡ್ಯತ್ತಾಯ ದೈವದ ವರ್ಷಾವಧಿ ಪೂಜೆ, ದೈವಗಳ ನೇಮೋತ್ಸವ
ಶ್ರೀ ಅರಸು ಮುಂಡ್ಯತ್ತಾಯ ದೈವದ ವರ್ಷಾವಧಿ ಪೂಜೆ, ಗಣ ಹೋಮ, ಸತ್ಯನಾರಾಯಣ ಪೂಜೆ, ನಾಗತಂಬಿಲ, ಆಶ್ಲೇಷ ಬಲಿ, ಹಾಗೂ ದೈವಗಳ ನೇಮೋತ್ಸವ ಕಾರ್ಯಕ್ರಮ ದಿನಾಂಕ 04-01-2020 ನೆ ಶನಿವಾರ ಪುತ್ತೂರಿನ ಪಾಂಗಳಾಯಿ ಪರ್ಲಡ್ಕದ ಶ್ರೀ ಮುಂಡ್ಯತ್ತಾಯ ದೈವಸ್ಥಾನ ದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ರಾದ ವಿನಯ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಗರದ ಕೇಂದ್ರ ಭಾಗವಾದ ಪಾಂಗಳಾಯಿಯಲ್ಲಿ ನೆಲೆಸಿರುವ ಗ್ರಾಮ ದೈವವಾದ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನ ಮತ್ತು ಪರಿವಾರ ದೈವಗಳ ಕ್ಷೇತ್ರವು ಕಾರಣಿಕದ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದೆ.
ಕಳೆದ 11ವರ್ಷಗಳಿಂದ ಶ್ರೀ ಮುಂಡ್ಯತ್ತಾಯ ದೈವಸ್ಥಾನ ಹಾಗೂ ಪರಿವಾರ ದೈವಗಳ ದೈವಸ್ಥಾನ ಮತ್ತು ನಾಗ ಸನ್ನಿಧಿಯು ಊರಿನ ಹತ್ತು ಸಮಸ್ತರ ಕೂಡುವಿಕೆಯಿಂದ ಮತ್ತು ಪರಿಶ್ರಮದಿಂದ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆಗೊಂಡು ಬ್ರಹ್ಮಕಲಶ, ನೇಮೋತ್ಸವ ಅತಿ ವಿಜೃಂಭಣೆಯಿಂದ ಜರಗಿಕೊಂಡು ಬಂದಿರುತ್ತದೆ.
ಈ ಬಾರಿಯೂ ಸಂಕಲ್ಪ ಮಾಡಿದಂತೆ ದಿನಾಂಕ 04-01-2020 ಶನಿವಾರದಂದು ಬೆಳಗ್ಗೆ ಪ್ರಾರ್ಥನೆಯೊಂದಿಗೆ ಶುಭ ಆರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ಜರುಗಿ ಮದ್ಯಾಹ್ನ ಸುಮಾರು 2500 ರಷ್ಟು ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ.
ನಂತರ ರಾತ್ರಿ ಶ್ರೀ ಅರಸು ಮುಂಡ್ಯತ್ತಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆದು ಗುಳಿಗ ದೈವದ ನೇಮದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಬಿ. ತಾರಾನಾಥ ರೈ, ಕಾರ್ಯದರ್ಶಿ ಪುರುಷೋತ್ತಮ ನ್ಯಾಕ್, ಖಜಾಂಜಿ ಸರೋಜಿನಿ ಅಭಿಕಾರ್, ಮಾಜಿ ಖಜಾಂಜಿ ಸೂರಪ್ಪ ಗೌಡ, ಉತ್ಸವ ಸಮಿತಿ ಕಾರ್ಯದರ್ಶಿ ಚಿತ್ರೇಶ್ ಕಲ್ಲಿಮಾರ್, ಮಾಧ್ಯಮ ಸಂಚಾಲಕ ಉಮಾಶಂಕರ್ ಉಪಸ್ಥಿತರಿದ್ದರು