ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷದ್ ವತಿಯಿಂದ ‘ನಮ್ಮ ಮಹಾಪುರುಷರು’ಎಂಬ ಸರಣಿ ಉಪನ್ಯಾಸ ಕಾರ್ಯಕ್ರಮ

ವಿಶ್ವ ಹಿಂದೂ ಪರಿಷದ್ ಪುತ್ತೂರು ಪ್ರಖಂಡ ಇದರ ಆಶ್ರಯದಲ್ಲಿ ಸರಣಿ ಉಪನ್ಯಾಸ ಕಾರ್ಯಕ್ರಮ “ನಮ್ಮ ಮಹಾಪುರುಷರು “ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿ ತಿಂಗಳ ಕೊನೆಯ ಸೋಮವಾರದಂದು ಪುತ್ತೂರಿನ ಖ್ಯಾತ ವಾಗ್ಮಿ, ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಸಾಮರಸ್ಯ ಪ್ರಮುಖ್ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರಿಂದ, ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ದ ರಾಜಗೋಪುರದಲ್ಲಿ ಸಂಜೆ ಆರು ಗಂಟೆಯಿಂದ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ನ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಪುಣ್ಯಭೂಮಿ ಭಾರತದಲ್ಲಿ ಜನಿಸಿ, ಆಧ್ಯಾತ್ಮದ ಬೆಳಕನ್ನು ದಿನ ಎಲ್ಲೆಡೆಗೆ ಪಸರಿಸಿ, ಜಗತ್ ಕಲ್ಯಾಣವನ್ನು ಸಾಧಿಸಿದ ಮಹಾ ಮಹಿಮರ ಜೀವನಗಾಥೆ ಹಾಗೂ ಸಂದೇಶಗಳನ್ನು ಆಧರಿಸಿದ ಹೃದಯಗಳನ್ನು ಪುನೀತಗೊಳಿಸುವ ಕಾರ್ಯಕ್ರಮ ಇದಾಗಿದ್ದು, ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರು, ಶ್ರೀ ಶಂಕರಾಚಾರ್ಯರು, ಶ್ರೀ ಮದ್ವಾಚಾರ್ಯರು, ದಾಸವರೇಣ್ಯರ ವಿಚಾರಗಳು ಮಂಡನೆಗೊಳ್ಳಲಿವೆ.

ಈ ಸರಣಿ ಉಪನ್ಯಾಸದ ಮೊದಲ ಕಾರ್ಯಕ್ರಮ ದಿನಾಂಕ 30-12-2019 ನೆ ಸೋಮವಾರ ದಂದು ಸಂಜೆ ಆರು ಗಂಟೆಗೆ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಆ ದಿನ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ರವರು ಶ್ರೀ ಪುರಂದರದಾಸರು ಎಂಬ ವಿಷಯದ ಬಗ್ಗೆ ಪ್ರವಚನ ನೀಡಲಿದ್ದಾರೆ. 

ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ನ ಧರ್ಮಪ್ರಸಾರ ಪ್ರಮುಖ್ ಡಾ. ಹರ್ಷ ಕುಮಾರ್ ರೈ ಮಾಡವು ನಡೆಸಲಿದ್ದು, ಮುಖ್ಯ ಅತಿಥಿಯಾಗಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿಗಳಾದ ಶ್ರೀ ವಿಷ್ಣು ಪ್ರಸಾದ್ ಹಾಗೂ ಕಾರ್ಯನಿವಹನಾದಿಕಾರಿಗಳಾದ ಶ್ರೀ ನವೀನ್ ಭಂಡಾರಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಬಜರಂಗದಳ ಪುತ್ತೂರು ಪ್ರಖಂಡ ದ ಸಂಚಾಲಕ ಹರೀಶ್ ದೋಲ್ಪಾಡಿ, ಸಹಸಂಚಾಲಕ ಪ್ರಶಾಂತ್ ಪರ್ಪು0ಜ, ಸಾಪ್ತಾಹಿಕ ಮಿಲನ್ ಪ್ರಮುಖ್ ವಿಶಾಖ್ ಸಶಿಹಿತ್ಲು ಉಪಸ್ಥಿತರಿದ್ದರು.

Leave A Reply

Your email address will not be published.