ಮಂಗಳೂರು ಗೋಲಿಬಾರಿನಲ್ಲಿ ಸತ್ತವರಿಗೆ ತನಿಖೆಯಿಲ್ಲದೆ 37.5 ಲಕ್ಷ ಕೊಡಬೇಕೇ?

0 13

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ‘ಟೆರ್ರರ್ ರಾಣಿ ‘ಮಮತಾ ಬ್ಯಾನರ್ಜಿ ಮಂಗಳೂರಿನ ಗೋಲಿಬಾರ್ ಸಂತ್ರಸ್ತರಿಗೆ ತಲಾ 5 ಲಕ್ಷ ಘೋಷಿಸಿದ್ದಾರೆ. ಮೊನ್ನೆ ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾಂಗ್ರೆಸ್ಸಿನ ರಾಲಿಯಲ್ಲಿ ” ಕರ್ನಾಟಕ ಗೋಲಿಬಾರ್ ನಲ್ಲಿ ಸತ್ತವರಿಗೆ ನೀಡುತ್ತೇನೆಂದು ನೀಡಿದ ವಾಗ್ದಾನಕ್ಕೆತಪ್ಪಿದೆ. ಆದ್ದರಿಂದ ನಾನು ಪರಿಹಾರ ಘೋಷಿಸುತ್ತಿದ್ದೇನೆ ” ಎಂದಿದ್ದಾರೆ.

ಬಿಜೆಪಿಗರ ಪ್ರಕಾರ ಸತ್ತುಹೋದವರು ಅಮಾಯಕರಾಗಿದ್ದರೆ ಮಾತ್ರ ಪರಿಹಾರ. ಹಿಂಸಾತ್ಮಕ ಗಲಭೆಯಲ್ಲಿ ಭಾಗವಹಿಸಿದ್ದಾರೆ ಆಗ ಪರಿಹಾರ ನೀಡುವುದಿಲ್ಲವೆಂದು ಕರ್ನಾಟಕ ಸರಕಾರ ಸ್ಪಷ್ಟಪಡಿಸಿದೆ. ಒಂದೊಮ್ಮೆ ಹಿಂಸೆಯಲ್ಲಿ ತೊಡಗಿಕೊಂಡವರಿಗೆ ದುಡ್ಡು ನೀಡಿದರೆ ಆಗ ಸಮಾಜಕ್ಕೆ ತಪ್ಪರ್ಥ ರವಾನೆಯಾಗುತ್ತದೆ ಎಂಬುದು ಬಿಜೆಪಿಯ ವಾದ.

ಕರ್ನಾಟಕ ಸರಕಾರ 10 ಲಕ್ಷ, ಕೇರಳ ಸರಕಾರ 15 ಲಕ್ಷ, ಕಾಂಗ್ರೆಸ್ 7.5 ಲಕ್ಷ, ಹೆಚ್ ಡಿ ಕುಮಾರಸ್ವಾಮಿ 5 ಲಕ್ಷ – ಒಟ್ಟು ಮೂವತ್ತೇಳುವರೆ ಲಕ್ಷ ! ಅದೇ ರೈತ ಸಾಲ ಮಾಡಿ, ಕೃಷಿ ಬೆಲೆ ನಾಶವಾಗಿ ಆತ್ಮಹತ್ಯೆ ಮಾಡಿಕೊಂಡರೆ ಸಿಗುವುದು 2 ರಿಂದ 3 ಲಕ್ಷ. ಅದೂ ತನಿಖೆ ಮತ್ತು ರಾಜಕೀಯ ಮುಗಿದ ಮೇಲೆ !! ಹೀಗಂತ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ.

ಕಾಂಗ್ರೆಸ್ ಆಗಲಿ, ಬೇರೆ ಯಾರೇ ಎಡಪಂತೀಯರಿರಲಿ, ಅವರು ಬೇರೆ ಯಾರಿಗೂ ಪರಿಹಾರ ಕೊಡುವುದಿಲ್ಲ. ಪರಿಹಾರ ಸಿಗಬೇಕೆಂದರೆ ಬೇಕಾದ ಮೊದಲ ಕ್ವಾಲಿಫಿಕೇಷನ್ ” ಮುಸ್ಲಿಂ ” !!

ದೂರದ ಪಶ್ಚಿಮ ಬಂಗಾಳಕ್ಕೂಮಂಗಳೂರಿಗೂ ಏನು ಸಂಬಂಧ ಎಂದು ಯೋಚಿಸುವ ಅಗತ್ಯವಿಲ್ಲ. ಪಶ್ಚಿಮ ಬಂಗಾಳದಲ್ಲೇ ಬಿಜೆಪಿ ಕಾರ್ಯಕರ್ತರ ಸರಣಿ ಕೊಲೆಗಳಾಗುತ್ತಿವೆ. ಆದರೂ ಕಲ್ಲು ಬಂಡೆ ಮನಸ್ಸಿನ ಆಕೆಯ ಮನಸ್ಸು ಕರಗಿಲ್ಲ.

ಯಾಕೆಂದರೆ ಇದು ರಾಜಕೀಯ. ಓಟು ಬ್ಯಾಂಕ್ ರಾಜಕೀಯದಲ್ಲಿ ಸಂಬಂಧ, ದೂರ ಯಾವುದಕ್ಕೂ ಅರ್ಥವಿಲ್ಲ.

Leave A Reply