ದಕ್ಷಿಣಕನ್ನಡದ ಶಾಶಕರುಗಳು ಕೇಸರಿ ಧರಿಸಿದ ಅಪ್ಪಟ ಸನ್ಯಾಸಿಗಳಾ ? । ಮಗು ಅಳೋದಿಲ್ಲ, ಅಮ್ಮಹಾಲು ಕೊಡೋದಿಲ್ಲ !
ಯಾವತ್ತಿಗೂ ಬಿಜೆಪಿಗೆ ನಿಷ್ಠರಾಗಿ ಉಳಿಯುವ ಶಾಶಕರುಗಳು. ಎಂತಹ ಪರಿಸ್ಥಿತಿಯಲ್ಲೂ ಪಕ್ಷದ ಜತೆ ನಿಸ್ವಾರ್ಥವಾಗಿ ದುಡಿಯುವ ನಾಯಕರುಗಳು. ಕೇಸರಿ ಶಾಲು ಹೊದ್ದು ಮನೆಮನೆ ಗಿರಗಿಟ್ಲೆ ಸುತ್ತುವ ಬೃಹತ್ ಹಿಂದುತ್ವವಾದಿ ಬಿಜೆಪಿ ಕಾರ್ಯಕರ್ತರು. ಅವರಿಗೆ ಸಲಹೆ ಸೂಚನೆ ಮಾರ್ಗದರ್ಶನ ನೀಡುವ ಆರ್ ಎಸ್ ಎಸ್. ಇದು ಅವಿಭಜಿತ ದಕ್ಷಿಣ ಕನ್ನಡ !
ಇವತ್ತು ದಕ್ಷಿಣ ಕನ್ನಡದಲ್ಲಿ 8 ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿಯದೇ ಕಲರವ. ನಾ ಮುಂದು, ನಾ ಮುಂದು ಎಂದು ಪೈಪೋಟಿಯಲ್ಲಿ ಕೆಲಸ ಮಾಡುವ ಶಾಶಕರಿದ್ದಾರೆ.
ದೇಶದಲ್ಲಿ ಎಲ್ಲಿ ಕೂಡ ಮತದಾರ ಕೈಕೊಟ್ಟರೂ ಬಿಜೆಪಿಯ ಜತೆ ಕದಲದೆ ನಿಲ್ಲುತ್ತದೆ ದಕ (ದಕ್ಷಿಣ ಕನ್ನಡ).
ಆದರೆ, ಸರಕಾರ ಅಧಿಕಾರಕ್ಕೆ ಬಂದಾಗ ಯಾರು ಲಾಬಿ ಮಾಡುತ್ತಾರೋ, ಯಾರು ಬೆಂಗಳೂರಿನಲ್ಲಿ ಎಂಎಲ್ಎ ಆಗಿರುತ್ತಾರೋ, ಅವರಿಗೇ ಅಧಿಕಾರದಲ್ಲಿ ಸಿಂಹಪಾಲು.
ದಕ್ಷಿಣಕನ್ನಡಕ್ಕೆ ಸಿಗುವುದು, ಕಡ್ಲೆ ಬಜಿಲ್ ಮಾತ್ರ.
ಆ ಜಾತಿ, ಈ ಜಾತಿ, ಎಡಗೈ, ಬಲಗೈ ಜಾತಿಗಳು ಒಂದು ಕಡೆ. ಒಕ್ಕಲಿಗ ಲಿಂಗಾಯತ ಮುಂತಾದ ಬಲಿಷ್ಠ ಕೋಟಾಗಳು ಇನ್ನೊಂದೆಡೆ. ಇವುಗಳ ಮಧ್ಯೆ ದಕ್ಷಿಣ ಕನ್ನಡ ಮಂತ್ರಿಸ್ಥಾನದ ವಿಷಯದಲ್ಲಿ ಸೊರಗಿದೆ.
ಈ ಸಲ, ಅನರ್ಹರಿಗೆ ಸ್ಥಾನ ಬಿಟ್ಟುಕೊಡಬೇಕಾದ ಅನಿವಾರ್ಯತೆಯೇನೋ ಇದೆ. ಅಲ್ಲಿ, ಯಾವುದೇ ಸಂದರ್ಭದಲ್ಲೂ ಪಕ್ಷ ಬಿಟ್ಟು ಆ ಕಡೆ ಹೋಗುವಂತಿರುವ ಉಮೇಶ್ ಕಟ್ಟಿ ತರದ ಬಾಯಿಬಡುಕರು ಮಂತ್ರಿಯಾಗಲು ಪ್ರಯತ್ನಿಸುತ್ತಿದ್ದಾರೆ.
ಯಾಕೆ ನಮ್ಮಸುಳ್ಯದ ಸೋಲರಿಯದ ಸರದಾರ ಅಂಗಾರ ಅವರಿಗೆ ಕಾಣಿಸುವುದಿಲ್ಲ ? ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ 30 ವರ್ಷ ದುಡಿದ, ದೇಶದ ರಾಜಕೀಯದ ಪ್ರಯೋಗಶಾಲೆ ಪುತ್ತೂರಿನ ಶಾಶಕರಾದ ಸಂಜೀವ ಮಠ೦ದೂರು ಇದ್ದಾರೆ.
ಇದೆಲ್ಲದರ ಮಧ್ಯೆ ದಕ್ಷಿಣ ಕನ್ನಡದ ಶಾಶಕರ ಮತ್ತು ಕಾರ್ಯಕರ್ತರ ಅಪ್ರೋಚ್ ನನಗಂತೂ ಇಷ್ಟವಾಗುತ್ತಿಲ್ಲ. ಈಗ ತಾನೇ, ನಮ್ಮ ಬೆಳಗಿನ ಲೇಖನದಲ್ಲಿ ಬರೆದಿದ್ದೇವೆ : ಜಸ್ಟ್ ಎಕ್ಸ್ ಪ್ರೆಸ್ ! ನಂಗೆ ಕೂಡ ಬೇಕು ಎಂದು ಪಬ್ಲಿಕ್ ಆಗಿ ಹೇಳಿಕೊಳ್ಳಿ, ನಿಮಗೆ ಯಾರೆಲ್ಲರಿಗೆ ಮಂತ್ರಿಯಾಗುವ ಆಸೆ ಇದೆಯೋ ಅವರುಗಳು. ಆಗೋದು ಹೋಗೋದು ಬೇರೆ ವಿಷಯ. ಜಾಬ್ ಗೆ ಅಪ್ಲೈ ಕೂಡ ಮಾಡದೆ ಜಾಬ್ ಸಿಗುವುದುಂಟೇ ?
ಮಗು ಅತ್ತಾಗಲೇ, ಅಮ್ಮ ಹಾಲು ಕೊಡುವುದು । ದಕ್ಷಿಣ ಕನ್ನಡ ಬೀದಿಯಲ್ಲಿ ನಿಂತಾಗಲೇ ಬೇಡಿಕೆ ಈಡೇರುವುದು !!
ಜಸ್ಟ್ ಎಕ್ಸ್ ಪ್ರೆಸ್ ಅಂಕಣ- ಹೌದ್ ಹುಲ್ಯಾ ಓದಿ :
ಸುದರ್ಶನ್ ಬಿ. ಪ್ರವೀಣ್, ಬೆಳಾಲು