Sanehalli Shri: ಮನಸ್ಸು ಮಾಡಿದ್ರೆ ಈ ಸಚಿವ ಇಂದೇ ರಾಜ್ಯದ ಮುಖ್ಯಮಂತ್ರಿ ಆಗಬಹುದು – ಸಾಣೇಹಳ್ಳಿ ಸ್ವಾಮಿಜೀಗಳಿಂದ ಅಚ್ಚರಿ ಭವಿಷ್ಯ!!
Sanehalli Shri: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ, ಸಿಎಂ ಕುರ್ಚಿ ವಿಚಾರ ಬಾರೀ ದೊಡ್ಡ ಮಟ್ಟದಲ್ಲಿ ಸದ್ದುಮಾಡುತ್ತಿದೆ. ಕಾಂಗ್ರೆಸ್ ಹಿರಿಯ, ಕಿರಿಯ ನಾಯಕರೆಲ್ಲಾ ಕುರ್ಚಿಗೆ ಟವೆಲ್ ಹಾಕಲು ರೆಡಿಯಾಗಿದ್ದಾರೆ. ಡಿಕೆ ಶಿವಕುಮಾರ್, ಡಾ. ಜಿ. ಪರಮೇಶ್ವರ್, ಆರ್‌ವಿ ದೇಶಪಾಂಡೆ, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ಈಗಾಗಲೇ ಕ್ಯೂನಲ್ಲಿ ನಿಂತಿದ್ದಾರೆ. ಈ ಬೆನ್ನಲ್ಲೇ ಸಿದ್ದರಾಮಯ್ಯ ಸಿಎಂ ಕುರ್ಚಿ ಖಾಲಿ ಇಲ್ಲ, ನಾನೇ ಮುಂದುವರಿಯುತ್ತೇನೆ ಎಂದು ಗೊಂದಲಗಳಿಗೆ ಬೇರೆ ತೆರೆ ಎಳೆದಿದ್ದಾರೆ. ಆದರೆ ಈ ಬೆನ್ನಲ್ಲೇ ನಾಡಿನ ಪ್ರಬಲ ಸ್ವಾಮಿಗಳಾದ ಸಾಣೇಹಳ್ಳಿ ಶ್ರೀಗಳು(Sanehalli Shri) ‘ಈ ಸಚಿವರು ಮನಸ್ಸು ಮಾಡಿದರೆ ಮಂತ್ರಿಯಾಗಬಹುದು’ ಎಂದು ಉರಿವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಹೌದು, ಸಿದ್ದರಾಮಯ್ಯ(CM Siddaramaiah)ಅವರ ಚೇರ್ ಅಲ್ಲಾಡುತ್ತಿರುವ ವಿಚಾರದ ಮಧ್ಯೆಯೇ ದಾವಣಗೆರೆ ತಾಲ್ಲೂಕಿನ ಉಳುಪಿನಕಟ್ಟೆಯಲ್ಲಿ ಮಾತನಾಡಿದ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಅವರು ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್‌ಗೆ ಸಿಎಂ ಆಗೋ ಅರ್ಹತೆ ಇದೆ. ಲಿಂಗಾಯತ ಸಮಾಜದಲ್ಲಿ ಒಳ್ಳೆಯ ನೇತಾರ ಆಗೋ ಅವಕಾಶ ಸಚಿವ ಮಲ್ಲಿಕಾರ್ಜುನ ಅವರಿಗೆ ಇದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಸ್ವಾಮೀಜಿ ‘ಮನಸ್ಸು ಮಾಡಿದ್ರೆ ಅವರು ಮುಂದಿನ ಮುಖ್ಯಮಂತ್ರಿ ಆಗಬಹುದು. ರಾಜಕೀಯದಲ್ಲಿ ಸೋಲು ಗೆಲುವು ಸಹಜ. ಹಿಂದೆ ಸಾಕಷ್ಟು ಅಭಿವೃದ್ದಿ ಮಾಡಿ ಚುನಾವಣೆಯಲ್ಲಿ ಸೋತಾಗ ರಾಜಕೀಯ ಸನ್ಯಾಸ ಸ್ವೀಕಾರ ಮಾಡಿದ್ರು. ಆದರೆ ರಾಜಕೀಯದಲ್ಲಿ ಸೋಲು ಗೆಲವು ಸಹಜ. ನಮ್ಮ ಸಮಾಜದಲ್ಲಿ ಉತ್ತಮ ನೇತಾರ ಆಗಿ ಬೆಳೆಯುವ ಅವಕಾಶ ಮಲ್ಲಿಕಾರ್ಜುನ್(SS Mallikharjun)ಅವರಿಗಿದೆ ಎಂದು ಹೇಳಿದ್ದಾರೆ.