ಪೀರಪ್ಪ ಕಟ್ಟೀಮನಿ, ಅಲಿಯಾಸ್ ಹೌದ್ ಹುಲಿಯಾ ಕರ್ನಾಟಕದ ಇವತ್ತಿನ ಟ್ರೆಂಡ್ ! ಬರಿಯ ಟ್ರೆಂಡ್ ಅಲ್ಲ , ‘ಹೌದ್ ಹುಲಿಯಾ ‘ ಟ್ರೆಂಡ್ ಸೆಟ್ಟರ್ !!
ರಾಜ್ಯಾದ್ಯಂತ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲೂ ಭಾರಿ ವರ್ಲ್ಡ್ ಫೇಮಸ್ ಆದವನು ಪೀರಪ್ಪ ಕಟ್ಟೀಮನಿ. ಇದು ಅಬಾಲವೃದ್ಧರಾಗಿ ಎಲ್ಲರಿಗೂ ತಿದಿರುವ ವಿಚಾರ. ನಮ್ಮ ಈ ದಿನದ ವಿಷಯ ಸ್ವಲ್ಪ ಬೇರೆಯದು.
ಪೀರಪ್ಪ ಕಟ್ಟೀಮನಿ ಅಲ್ಯಾಸ್ ‘ಹೌದ್ ಹುಲ್ಯಾ’ ಎಪಿಸೋಡು ನಮಗೆ ಕಲಿಸುವ ಪಾಠವಾದರೂ ಏನು? ನಡೆದ ಘಟನೆಗಳಿಂದ, ವರ್ತಮಾನಗಳಿಂದ ನಾವೊಂದಿಷ್ಟು ಕಲಿಯಬೇಕಲ್ಲವೇ?
” ಅದರಲ್ಲಿ ಕಲಿಯೋದೇನಿದೆ ? ಆತನೊಬ್ಬ ಕುಡಿದು ಕಾಂಗ್ರೆಸ್ ಸಭೆಯಲ್ಲಿ ಕೂತಿದ್ದ. ಕುಡಿದು ಬಿಟ್ಟು ಏನೋ ಹೇಳಿದ. ಅದು ಟ್ರೆಂಡ್ ಆಯಿತು ” ಹೀಗೊಬ್ಬ ಪೀರಪ್ಪ ಕಟ್ಟೀಮನಿಯನ್ನು ದೂರಬಹುದು.
” ಕಾಂಗ್ರೆಸ್ ಸಭೆ ಅಂದ್ರೆ ಕೇಳ್ಬೇಕೆ ? ಹಣ ಮತ್ತು ಎಣ್ಣೆ ಕೊಟ್ರೇನೇ ಜನ ಬರೋದು ; ಓಟು ಹಾಕೋದು ” ಎಂದು ಜನರಲೈಸ್ ಮಾಡಿ, ಪೀರಪ್ಪನ ಜತೆ ಕಾಂಗ್ರೆಸ್ ನ್ನೂ ದೂರಲು ಬಳಸ್ಕೊಬಹುದು.
” ಈ ಪತ್ರಿಕೆಗಳವರಿಗೆ ಮತ್ತು ನ್ಯೂಸ್ ಪೇಪರ್ ಗಳವರಿಗೆ ಕೆಲಸವಿಲ್ಲ. ಟಿ ಆರ್ ಪಿ ಬೇಕಲ್ವಾ. ಅದಕ್ಕೆ ಇದನ್ನೇ ದೊಡ್ಡದಾಗಿ ಮಾಡ್ತಿದ್ದಾರೆ. ಯೂಸ್ಲೆಸ್ ಫೆಲ್ಲೋಸ್.” ಎಂದು ಬೈದು, ತನ್ನ ಬನಿಯನ್ ಒಳಗಿನ ಜಾರಿದ ಹೊಟ್ಟೆಯನ್ನು ಸವರಿಕೋಬಹುದು.
ಒಬ್ಬಬ್ಬರದು ಒಂದೊಂದು ನೋಟ. ವಿಭಿನ್ನ ವಿಶ್ಲೇಷಣೆ.
ಸಿದ್ದರಾಮಯ್ಯನವರ ಡೋಂಟ್ ಕೇರ್ ‘ ಟಗರು ‘ ಕ್ಯಾರೆಕ್ಟರಿಗೆ, ಅವರ ಒರಟು ಮಾತಿಗೆ, ಗಡಸು ದನಿಗೆ, ಪರ್ಫೆಕ್ಟ್ ಆಗಿ ಸ್ಯೂಟ್ ಆಗುತ್ತದೆ ‘ ಹೌದ್ ಹುಲಿಯಾ ‘ ಡೈಲಾಗ್ .
‘ ಹೌದ್ ಹುಲಿಯಾ ‘ ಸಿದ್ದು ಗೆ ಹೇಳಿ ಮಾಡಿ ಹೊಲಿಸಿದ ಬಟ್ಟೆಯಂತಿತ್ತು. ಅಷ್ಟೇ ಅಲ್ಲ, ಅದರಲ್ಲೊಂದು ಸಾಹಿತ್ಯಿಕ ಅಂಶವೂ ಬೆರೆತಿತ್ತು. ಅದೇ ಕಾರಣಕ್ಕೆ ‘ ಹೌದ್ ಹುಲ್ಯಾ’ ಮನೆ ಮಾತಾಯಿತು. ಪೀರಪ್ಪ ಸ್ಟಾರ್ ಆದ.
ಮನಸ್ಸಿಗೆ ಬಂದದ್ದನ್ನು, ಯಾರು ಏನಂದುಕೋತಾರೊ ಎಂಬ ಅಳುಕಿಲ್ಲದೆ, ಅದರಿಂದ ಇನ್ನೊಬ್ಬರಿಗೆ ಅವಮಾನ ಆಗದೆ ಇದ್ದರೆ, ಅನ್ನಿಸಿದ್ದನ್ನು ಓಪನ್ ಆಗಿ ಜಸ್ಟ್ ಎಕ್ಸ್ ಪ್ರೆಸ್ !
ಪೀರಪ್ಪ ಮಾಡಿದ್ದೂ ಅದನ್ನೇ. ತನಗನ್ನಿಸಿದ್ದನ್ನು ಹೇಳಿದ. ಅಷ್ಟೇ !! ಒಂದು ವೇಳೆ ಆತ ಆ ದಿನ ಬಾಯಿ ಮುಚ್ಚಿ ಕೂತಿದ್ದರೆ, ಅತನನ್ನು ಯಾರು ತಾನೇ ಗುರುತಿಸುತ್ತಿದ್ದರು?
ಜನ ಗೇಲಿ ಮಾಡಿದರೆ, ಜನ ನಕ್ಕರೆ, ಜನರು ನಗದೇ ಇದ್ದರೆ, ಬೇಜಾರು ಮಾಡಿಕೊಂಡರೆ, ಕಿಚಾಯಿಸಿದರೆ – ಎಲ್ಲ ಮರೆದುಬಿಡಿ. ನಿಮಗೆ ಸರಿಯೆನಿಸಿದ್ದನ್ನು ಕಾಂಫಿಡೆನ್ಸ್ ನಿಂದ ತೆರೆದಿಡಿ.
ಅದು ನೀವು ಮನಸ್ಸಿನೊಳಗೇ ಬಿಚ್ಚಿಡದೆ ಬಚ್ಚಿಟ್ಟ ಪ್ರೀತಿಯೇ ಇರಬಹುದು, ಅವಳಿಗೆ ಹೇಳಿಬಿಡಿ : ಯಾರಿಗೆ ಗೊತ್ತು ? ನಿಮ್ಮ ಆ ಒಂದು ಎಕ್ಸ್ ಪ್ರೆಷನ್ ಗಾಗಿ ಆಕೆ ಕಾದು ಕೂತಿರಬಹುದು !

ಸುದರ್ಶನ್ ಬಿ. ಪ್ರವೀಣ್, ಬೆಳಾಲು
Pingback: ದಕ್ಷಿಣಕನ್ನಡದ ಶಾಶಕರುಗಳು ಕೇಸರಿ ಧರಿಸಿದ ಅಪ್ಪಟ ಸನ್ಯಾಸಿಗಳಾ ? । ಮಗು ಅಳೋದಿಲ್ಲ, ಅಮ್ಮಹಾಲು ಕೊಡೋದಿಲ್ಲ !