Kalaburagi : ಟ್ರಿಪ್ ಕರೆದುಕೊಂಡು ಹೋಗಿ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸುವಂತೆ ಒತ್ತಡ – ಪ್ರಾಧ್ಯಾಪಕನ ವಿರುದ್ಧ ದೂರು

Share the Article

Kalaburagi: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿವಿಯ ವಿದ್ಯಾರ್ಥಿನಿಯರನ್ನು ಪ್ರವಾಸಕ್ಕೆ ಕರೆದೊಯ್ದು ಹಿಜಾಬ್ ಧರಿಸುವಂತೆ ಒತ್ತಾಯ ಮಾಡಿದ ಆರೋಪ ಕೇಳಿ ಬಂದಿದೆ.

ಹೌದು, ಕಲ್ಬುರ್ಗಿಯಲ್ಲಿ ಮತ್ತೆ ಜಾಬ್ ಸದ್ದು ಮಾಡುತ್ತಿದ್ದು, ಪ್ರಾಧ್ಯಾಪಕನೊಬ್ಬ ಟ್ರಿಪ್ ಗೆ ಎಂದು ಕರೆದೋಯ್ದು ಹಿಜಾಬ್ ಧರಿಸುವಂತೆ ವಿದ್ಯಾರ್ಥಿನಿಯರಿಗೆ ಒತ್ತಾಯಿಸಿದ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ಸಹ ಪ್ರಧ್ಯಾಪಕ ಅಬ್ದುಲ್ ಮಜೀದ್ ವಿರುದ್ಧ ವಿದ್ಯಾರ್ಥಿಗಳು ಈ ಒಂದು ಆರೋಪ ಮಾಡಿದ್ದು, ಕೇಂದ್ರೀಯ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಅಬ್ದುಲ್ ಮಜಿದ್ ಕಲ್ಬುರ್ಗಿ ಮತ್ತು ಬೀದರ್ ಜಿಲ್ಲೆಯ ಹಲವು ವಿದ್ಯಾರ್ಥಿನಿಯರನ್ನು ಕರೆದೋಯ್ದಿದ್ದ. ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಸ್ಥಳಗಳಿಗೆ ಹೆಚ್ಚು ಪ್ರವಾಸ ಮಾಡಿದ್ದಾರೆ ಎಂದು ಆರೋಪ ಸಹ ಕೇಳಿ ಬಂದಿದೆ. ಈ ಕುರಿತು ವಿದ್ಯಾರ್ಥಿನಿಯರು ವಿವಿಯ ವಿಸಿ ಪ್ರೊ. ಭಟ್ಟು ನಾರಾಯಣ್ ಅವರಿಗೆ ದೂರು ಸಲ್ಲಿಸಿದ್ದಾರೆ.

Comments are closed.