Health tips: ನಮ್ಮ ಪುಟ್ಟ ಹೃದಯಕ್ಕೆ ಯಾಕೆ ಆಘಾತ ಆಗುತ್ತಿದೆ? ಕಾರಣ ಏನು? ವಯಸ್ಸಿನಲ್ಲಿ ತಾರತಮ್ಯ ಮರೆತ ಹೃದಯ

Share the Article

Health tips: ಮಾನವನ ಹೃದಯವು ಪೊಳ್ಳಾದ ಸ್ನಾಯುಗಳಿಂದ ಮಾಡಲ್ಪಟ್ಟ ದೇಹದ ಪ್ರಮುಖ ಅಂಗವಾಗಿದೆ ಮತ್ತು ಅದರ ಗಾತ್ರವು ಮುಚ್ಚಿದ ಮುಷ್ಟಿಯ ಗಾತ್ರದಷ್ಟಿದೆ. ಹೃದಯವನ್ನು ಪೂರೈಸುವ ರಕ್ತನಾಳಗಳಿಗೆ ಆಮ್ಲಜನಕದ ಅಗತ್ಯವಿರುತ್ತದೆ. ಹೃದಯವು ಪ್ರತಿ ನಿಮಿಷಕ್ಕೆ ಸರಾಸರಿ 72 ಬಾರಿ ಆಕುಂಚನ ಮತ್ತು ಪ್ರಸರಣ ಹೊಂದುತ್ತದೆ. ಪ್ರತಿಯೊಬ್ಬ ಕುಂಚನ ಮತ್ತು ಪ್ರಸರಣವನ್ನು ನಾವು ಹೃದಯದ ಬಡಿತ ಎಂದು ಹೇಳುತ್ತೇವೆ. ನಮ್ಮ ಹೃದಯವು ದಿನಕ್ಕೆ ಒಂದು ಲಕ್ಷ ಬಾರಿ ಬಡಿಯುತ್ತದೆ.

ತಾಯಿಯ ಗರ್ಭದಲ್ಲಿ ಹೃದಯದ ಸೃಷ್ಟಿ ಆದಾಗಿನಿಂದಲೂ ಕೊನೆ ಉಸಿರು ಎಳೆಯುವವರೆಗೂ ಹೃದಯವು ಎಡಬಿಡದೆ ನಿರಂತರವಾಗಿ ಬಡಿದುಕೊಳ್ಳುತ್ತದೆ. ಇಂತಹ ಅದ್ಭುತ ಕಾರ್ಯ ಶಕ್ತಿ ಯನ್ನು ಹೊಂದಿರುವ ಹೃದಯವು ತನ್ನ ಕಾರ್ಯವನ್ನು ನಿರ್ವಹಿಸಲು ನಿರಂತರ ಆಮ್ಲಜನಕದ ಪೂರೈಕೆಯ ಮೇಲೆ ಅವಲಂಬಿಸಿರುತ್ತದೆ. ಆಮ್ಲಜನಕವು ರಕ್ತದ ಮೂಲಕ ಪೂರೈಕೆಯಾಗುತ್ತದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ ಅದೇ ರೀತಿ ಹೃದಯಕ್ಕೆ ಆಮ್ಲಜನಕ ಪೂರೈಸುವ ಸಲುವಾಗಿ ಹೃದಯದ ಸುತ್ತಲೂ ವಿಶಿಷ್ಟ ರಕ್ತನಾಳ ಜಾಲವಿರುತ್ತದೆ.

ನಿಮ್ಮ ಆಹಾರದ ಗುಣಮಟ್ಟ ಮತ್ತು ವಯಸ್ಸಿಗೆ ಅನುಗುಣವಾಗಿ ನಿಮ್ಮ ರಕ್ತನಾಳಗಳಲ್ಲಿ ದೇಹದ ಕೊಬ್ಬು ಇತರ ಕೆಲ ಪದಾರ್ಥಗಳು ಸಂಗ್ರಹವಾಗುತ್ತದೆ. ಈ ಕಾರಣದಿಂದಾಗಿ ರಕ್ತನಾಳಗಳಲ್ಲಿ ಅಡಚಣೆಗಳು ಉಂಟಾಗುತ್ತವೆ. ಈ ತಡೆಯಿಂದಾಗಿ ಹೃದಯಕ್ಕೆ ರಕ್ತ ಮತ್ತು ಆಮ್ಲಜನಕ ಪೂರೈಕೆಯು ಕಡಿಮೆಯಾಗುತ್ತದೆ. ರಕ್ತನಾಳಗಳು ಕಿರಿದಾಗುವುದರಿಂದ ಹೃದಯದ ಅಸ್ವಸ್ಥತೆಗಳ ಅಪಾಯವಿದೆ. ಕೆಳಗಿನ ಕಾರಣಗಳು ಸಹ ಹೃದಯದ ಅಸ್ವಸ್ಥತೆಗಳಿಗೆ ಕಾರಣವಾಗಿವೆ.

ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ದೈಹಿಕ ಚಟುವಟಿಕೆಯ ಕೊರತೆ, ಅನುವಂಶಿಕತೆ, ಮಾನಸಿಕ ಒತ್ತಡ, ಕೋಪ ಕೂಡ ಹೃದಯದ ಅಸ್ವಸ್ಥತೆಗಳನ್ನು ಉಂಟುಮಾಡುತ್ತದೆ.

ರೋಗಲಕ್ಷಣಗಳು:

ಸಾಮಾನ್ಯವಾಗಿ ಎದೆಯ ಮಧ್ಯದಲ್ಲಿ ತೀವ್ರವಾದ ನೋವು, ಉಸಿರಾಟದ ತೊಂದರೆ, ಬೆವರು, ವಾಕರಿಕೆ ಮತ್ತು ತಲೆತಿರುಗುವಿಕೆ, ಎದೆ ಅಥವಾ ಬೆನ್ನುಮೂಳೆಯ ಮಧ್ಯದಲ್ಲಿ ನೋವು, ಅಲ್ಲಿಂದ ಕುತ್ತಿಗೆ ಅಥವಾ ಎಡಗೈಗೆ ಹರಡುತ್ತದೆ. ಈ ರೋಗಲಕ್ಷಣಗಳು ಸುಮಾರು ಇಪ್ಪತ್ತು ನಿಮಿಷಗಳಿಗಿಂತ ಹೆಚ್ಚು ಕಾಲ ಇರುತ್ತವೆ. ಕೆಲವೊಮ್ಮೆ ರೋಗಿಯು ಬಿಳಿಚಿಕೊಂಡು ರಕ್ತದೊತ್ತಡದ ಕುಸಿತದಿಂದಾಗಿ ಸಾಯುತ್ತಾನೆ.

ಹೃದಯಾಘಾತ ಯಾರಿಗೆ ಬರುತ್ತದೆ?

ಮೂರು ದಶಕಗಳ ಹಿಂದಿನವರೆಗೂ ಹೃದಯಘಾತವು 50 ವರ್ಷ ವಯಸ್ಸು ಮೀರಿದವರಿಗೆ ಮತ್ತು ಪುರುಷರಿಗೆ ಹೆಚ್ಚಾಗಿ ಬರುತ್ತಿತ್ತು. ತಂಬಾಕು ಮತ್ತು ಧೂಮಪಾನ ಮಾಡುವವರಲ್ಲಿ ಹೆಚ್ಚು ಕಂಡು ಬರುತ್ತಿತ್ತು. ಆದರೆ ಕಳೆದ 30 ವರ್ಷಗಳಲ್ಲಿ ತೀವ್ರವಾಗಿ ಬದಲಾಗಿರುವ ಜೀವನ ಶೈಲಿಯ ಕಾರಣದಿಂದ ಈಗ ವಯಸ್ಸು ಹಾಗೂ ಲಿಂಗದ ತಾರತಮ್ಯವಿಲ್ಲದೆ ಯಾರಿಗಾದರೂ ಹೃದಯ ಘಾತ ಸಂಭವಿಸಬಹುದು ಕಳೆದ ನವರಾತ್ರಿಯ ಸಂದರ್ಭದಲ್ಲಿ ದಾಂಡಿಯಾ ನೃತ್ಯ ಮಾಡುತ್ತಿದ್ದ ಸುಮಾರು 25 ಹದಿಹರೆಯದ ಆರೋಗ್ಯವಂತ ವ್ಯಕ್ತಿಗಳು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಅಸು ನೀಗಿದ ಸುದ್ದಿಯನ್ನು ನಾವು ಕೇಳಿದ್ದೇವೆ.

ಇತ್ತೀಚಿನ ದಶಕಗಳಲ್ಲಿ ಸ್ತ್ರೀ ಪುರುಷರಲ್ಲಿ ಧೂಮ್ರಪಾನ ಪ್ರಕರಣಗಳು ಹೆಚ್ಚಾಗಿವೆ. ತಂಬಾಕು, ಗುಟಖಾ ಸೇವನೆ, ಆಹಾರದ ಕಳಪೆ ಗುಣಮಟ್ಟ, ದೈಹಿಕ ಚಟುವಟಿಕೆಗಳ ಕೊರತೆ, ಜಿಮ್ಗಳಲ್ಲಿ ಮಾಡುವ ಅಸಮರ್ಪಕ ವ್ಯಾಯಾಮಗಳು, ಧಾವಂತದ ಜೀವನ, ಮಾನಸಿಕ ಒತ್ತಡ, ಪರಿಸರ ಮಾಲಿನ್ಯ, ಕಲಬೆರಕೆ ಆಹಾರ, ಕೋಪ, ದ್ವೇಷ, ಅಸೂಯೆ, ಇತ್ಯಾದಿ ಭಾವನಾತ್ಮಕ ನಡವಳಕೆಗಳಲ್ಲಿ ಹೆಚ್ಚಳ ಇತ್ಯಾದಿ ಅಂಶಗಳು ಹೆಚ್ಚಿದ ಹೃದಯಘಾತಕ್ಕೆ ಕಾರಣವಾಗಿವೆ.

ಹೃದಯ ರೋಗದಿಂದ ರಕ್ಷಣೆ

ಹೃದ್ರೋಗದ ಅಪಾಯದಲ್ಲಿರುವವರು ಅಥವಾ ಹೃದ್ರೋಗದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಯಸುವವರು ಈ ಕೆಳಗಿನ ನಿಯಮಗಳನ್ನು ಅನುಸರಿಸಬೇಕು. ನಿಮ್ಮ ಆಹಾರದಲ್ಲಿ ಉಪ್ಪು ಮತ್ತು ಕೊಬ್ಬು ಕಡಿಮೆ ಮತ್ತು ಫೈಬರ್ ಮತ್ತು ಪ್ರೋಟೀನ್ ಗಳು ಹೆಚ್ಚಿರಬೇಕು. ಅಧಿಕ ತೂಕ ಇರುವವರು ತೂಕ ಇಳಿಸಿಕೊಳ್ಳಬೇಕು. ಪ್ರತಿದಿನ ಬೆಳಿಗ್ಗೆ ಸೂಕ್ತ ದೈಹಿಕ ವ್ಯಾಯಾಮ ಮಾಡುವುದು ಅವಶ್ಯಕ. ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದರೆ ತಕ್ಷಣದ ಸ್ಥಗಿತಗೊಳಿಸಬೇಕು. ಮಧುಮೇಹ, ರಕ್ತದ ಅಧಿಕ ಒತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಇದ್ದಲ್ಲಿ ಸೂಕ್ತ ಔಷಧೋಪಚಾರಗಳನ್ನು ನಿಯಮಿತವಾಗಿ ತೆಗೆದುಕೊಂಡು ಅವುಗಳನ್ನು ನೈಸರ್ಗಿಕವಾಗಿ ನಿವಾರಿಸಿಕೊಳ್ಳಬೇಕು.

ಚಿಕಿತ್ಸೆ:

ಅಲೋಪತಿ ಚಿಕಿತ್ಸಾ ಪದ್ಧತಿಯಲ್ಲಿ ಸಾಮಾನ್ಯವಾಗಿ ಹೃದಯದ ರಕ್ತನಾಳಗಳ ಅವರೋಧ (ಹಾರ್ಟ್ ಬ್ಲಾಕೆಜ್ / ಕೋರೋನರಿಗೆ ಆರ್ಟರಿ ಬ್ಲಾಕೇಜ್) ವನ್ನು “ಆಂಜಿಯೋಪ್ಲಾಸ್ಟಿ” ಎಂಬ ವಿಶಿಷ್ಟ ಕ್ರಿಯೆಯ ಮೂಲಕ ಅವರೋಧವನ್ನು ತೆರವುಗೊಳಿಸಿ “ಸ್ಟೆಂಟ್” ಎಂಬ “ಸ್ಪ್ರಿಂಗ” ನ್ನು ಅಳವಡಿಸುತ್ತಾರೆ. ಆದರೆ ಹೃದಯದ ಅವರೋದಕ್ಕೆ ಇದೊಂದು ಉತ್ತಮ ಅಥವಾ ಸಮಗ್ರ ಚಿಕಿತ್ಸೆ ಅಲ್ಲ ಇದು ಕೇವಲ ತಾತ್ಕಾಲಿಕ ಲಾಭವನ್ನು ನೀಡಬಹುದು ಆದರೆ ಯಾವರೋದವಳು ಉಂಟಾಗಲು ಮೂಲ ಕಾರಣವಾದ ಪ್ರಕೃತಿ ದೋಷವನ್ನು ನಿವಾರಿಸುವುದಿಲ್ಲ. ಅಲ್ಲದೆ ಸ್ಟಂಟ್ ಅಳವಡಿಸಿರುವ ಜಾಗದಲ್ಲಿ ಮತ್ತೆ ಕೊಲೆಸ್ಟ್ರಾಲ್ ಇತ್ಯಾದಿ ಕಲ್ಮಶಗಳು ಸಂಗ್ರಹವಾಗಿ ಅವರೋಧವೂ ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚುತ್ತವೆ.

ಇತ್ತೀಚೆಗೆ ಇಇಸಿಪಿ ಎಂಬ ಹೊಸ ಪ್ರಕ್ರಿಯೆಯ ಮೂಲಕ ಅವರೋಧಗಳನ್ನು ಯಾವುದೇ ಗಾಯಗಳನ್ನು ಮಾಡದೆ ತೆರವುಗೊಳಿಸುವ ವಿಧಾನವನ್ನು ಉಪಯೋಗಿಸಲಾಗುತ್ತಿದೆ. ಇದೊಂದು ಸಂಘಟನೆಕೃತ ಪ್ರಕ್ರಿಯೆಯಾಗಿದೆ ಈ ಪ್ರಕ್ರಿಯೆಯಲ್ಲಿ ಕೈ ಮತ್ತು ಕಾಲುಗಳಿಗೆ ವಿಶಿಷ್ಟ ಬಟ್ಟೆಯ ಪಂಪುಗಳನ್ನು ಅಳವಡಿಸಲಾಗುತ್ತದೆ ಇವು ರಕ್ತದೊತ್ತಡ ಅಳೆಯುವ ಯಂತ್ರಕ್ಕೆ ಅಳವಡಿಸಿರುವ ಗಾಳಿ ತುಂಬಿದ ತೋಳು ಕವಚದಂತೆಯೇ ಇರುತ್ತವೆ. ಯಂತ್ರವು ಹೃದಯ ಬಡಿತಕ್ಕೆ ಅನುಗುಣವಾಗಿ ರಕ್ತವನ್ನು ಕೈ ಮತ್ತು ಕಾಲುಗಳಿಂದ ಜೋರಾಗಿ ಹೃದಯದತ್ತ ತಳ್ಳುತ್ತವೆ. ಈ ಒತ್ತಡದಿಂದ ಹೃದಯನಾಳದಲ್ಲಿನ ಅವರೋಧಗಳು ಕಳಚಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಇದು ಕೂಡ ಶಾಶ್ವತ ಪರಿಹಾರವಲ್ಲ.

ಹೃದಯದ ಅವರೋಧಗಳು ಉಂಟಾಗದಂತೆ ತಡೆಯಲು ಹೋಮಿಯೋಪತಿ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ ಇವುಗಳು ಮಾತ್ರ ಉಪಯುಕ್ತ ಚಿಕಿತ್ಸಾ ವಿಧಾನಗಳಾಗಿವೆ. ಈ ವಿಷಯದಲ್ಲಿ ಆಯಾ ಕ್ಷೇತ್ರದ ತಜ್ಞರಿಂದ ಸಲಹೆಯ ಮೇರೆಗೆ ಚಿಕಿತ್ಸೆಯನ್ನು ಪಡೆಯಬೇಕು.

ಡಾ. ಪ್ರ. ಅ. ಕುಲಕರ್ಣಿ

ಇದನ್ನೂ ಓದಿ:Death: 800 ಗ್ರಾಂ ಚಿನ್ನ 70 ಲಕ್ಷ ಬೆಲೆಬಾಳುವ ಕಾರು ಸಾಕಾಗಲಿಲ್ಲ: ವರದಕ್ಷಿಣೆ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ ನವವಧು

Comments are closed.