Crime: ಲಂಡನ್ನಲ್ಲಿ ಉದ್ಯೋಗ ಕೊಡಿಸುವುದಾಗಿ ಲಕ್ಷಲಕ್ಷ ವಂಚಸಿ ಹತ್ಯೆ!

Crime: ಎಂಎಸ್ಸಿ ಇನ್ ಅಗ್ರಿಕಲ್ಚರ್ ಪದವಿ ಮಾಡಿ ಖಾಸಗಿ ಕೋಚಿಂಗ್ ಸೆಂಟರ್ನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಪದವೀಧರನಿಗೆ ಲಂಡನ್ನಲ್ಲಿ ಕೆಲಸ ಕೊಡುತ್ತೇನೆ, ಲಕ್ಷ ಲಕ್ಷ ಸಂಬಳ ಸಿಗುತ್ತೆ ಅಂತ ಹೇಳಿ ನಂಬಿಸಿ ಬಳಿಕ ಆತನ ಬಳಿಯೇ ಲಕ್ಷಾಂತರ ರೂ ಪಡೆದು ವಂಚಿಸಿದ್ದಾರೆ. ಕೊನೆಗೆ ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಲಂಡನ್ಗೆ ಕರೆದುಕೊಂಡು ಹೋಗುತ್ತೇವೆ ಅಂತ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ.

ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಸುಧಾಕರ್, ಮನೋಜ್ ಮತ್ತು ಮಂಜುನಾಥ್ರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜಿ ರಾಮಪುರ ಗ್ರಾಮದ ರಾಮಾಂಜಿ (30) ಕೊಲೆಯಾದ ವ್ಯಕ್ತಿ.
ಇದನ್ನೂ ಓದಿ:Karnataka: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿ ಪ್ರತಿಭಾ ಕುಳಾಯಿ ನೇಮಕ
Comments are closed.