Ashadi Wari: ಆಷಾಢಿ ವಾರಿ ಪಲ್ಲಕ್ಕಿ ಮೆರವಣಿಗೆ ವೇಳೆ ಹಿಂದೂ ಭಕ್ತರ ಮೇಲೆ ಮಾಂಸ ಎಸೆದ ಮುಸ್ಲಿಂ ಮಹಿಳೆ

Ashadi Wari: ಆಷಾಢಿ ವಾರಿ ಪಲ್ಲಕ್ಕಿ ಮೆರವಣಿಗೆ ವೇಳೆ ಹಿಂದೂ ಭಕ್ತರ ಮೇಲೆ ಮುಸ್ಲಿಂ ಮಹಿಳೆ ಮಾಂಸ ಹಾಗೂ ಪ್ರಾಣಿಗಳ ಮೂಳೆಗಳ ಎಸೆದಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮಹಾರಾಷ್ಟ್ರದಲ್ಲಿ ನಡೆಯುವ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಈ ವಾರಿ ಕೂಡಾ ಒಂದು.

ಛತ್ರಪತಿ ಸಂಭಾಜಿನಗರ ನಿವಾಸಿ ಅಕ್ಕಲ್ವಂತ್ ರಾಥೋಡ್ ಎನ್ನುವವರು ದೂರು ದಾಖಲಿಸಲಾಗಿದೆ. ಆರೋಪಿ ಪುಣೆಯ ಕ್ಯಾಂಪ್ ಪ್ರದೇಶದ ಮಾಮದೇವಿ ಚೌಕ್ ಬಳಿಯ ಗೈಬಿಪಿರ್ ದರ್ಗಾ ಬಳಿಯ ಸೋಲಾಪುರ ರಸ್ತೆಯ ನಿವಾಸಿ 57 ವರ್ಷದ ನಾಸಿಮ್ ಶೇಖ್ ಮಹಿಳೆಯಾಗಿದ್ದಾರೆ.
ಪಲ್ಲಕ್ಕಿ ಮೆರವಣಿಗೆ ಹಾದು ಹೋಗುತ್ತಿದ್ದ ಸಂದರ್ಭದಲ್ಲಿ ಜನರ ಮೇಲೆ ಮಾಂಸ ಎಸೆದು, ಏನು ಮಾಡುತ್ತೀರೋ ಮಾಡಿಕೊಳ್ಳಿ ಎಂದು ರಾಥೋಡ್ ಎಂಬುವವರಿಗೆ ಎಚ್ಚರಿಕೆ ನೀಡಿದ್ದಾಳೆ. ಪೊಲೀಸರಿಗೆ ಈ ಕುರಿತು ಮಾಹಿತಿಯನ್ನು ನೀಡಲಾಗಿದ್ದು ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ಭಕ್ತರನ್ನು ಮುಂದೆ ಸಾಗಲು ಹೇಳಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Puttur: ಪುತ್ತೂರಿನಿಂದ ಮಂಗಳೂರಿಗೆ ನಾನ್ ಸ್ಟಾಪ್ ಸರಕಾರಿ ಬಸ್ ಸಂಚಾರ ಆರಂಭ: ಅಶೋಕ್ ರೈ
Comments are closed.