ದ್ವೇಷ ಕೆಟ್ಟದ್ದಲ್ಲ । ಆಂತರಿಕ ದೇಶದ್ರೋಹಿಗಳೆಡೆ ಇರಲಿ ಒಂದು ಆಕ್ರೋಶಭರಿತ ಹುಚ್ಚು ಕೇಕೆ !

ಅವಳು ಭಾರತಲ್ಲಿ ಹುಟ್ಟಿ ಬೆಳೆದು, ಇಲ್ಲಿನ ಅನ್ನ ನೀರು ತಿಂದು ಬೆಳೆದ ಹುಡುಗಿ. ಭಾರತದ ಸಾಂಪ್ರದಾಯಿಕ ಮನೆತನದಲ್ಲಿ ಒಳ್ಳೆಯ ಅಪ್ಪ ಅಮ್ಮ ಮತ್ತು ವಿದ್ಯಾಭ್ಯಾಸವನ್ನು ಪಡೆದು ಬೆಳೆದವಳು. ಮುಂದೊಂದು ದಿನ ಸ್ಕಾಲರ್ಶಿಪ್ ಪಡೆದು ಓದಲು ಅಮೆರಿಕಾ ದೇಶಕ್ಕೆ ಹೋಗುತ್ತಾಳೆ. ಓದಲು ಅಲ್ಲಿಗೆ ಹೋದಾಗ, ಮನದಲ್ಲಿ ಓದು ಒಂದೇ ಇರುತ್ತದೆ; ಬೇರೇನೂ ಇರುವುದಿಲ್ಲ.

ಅಲ್ಲಿ ಓದುತ್ತ ಓದುತ್ತಾ ಆಕೆಗೆ ಭಾರತದ ಬಗ್ಗೆ ಜಿಗುಪ್ಸೆಯಾಗುತ್ತದೆ. ಮತ್ತೆ ಭಾರತಕ್ಕೆ ಬರಲೇ ಬಾರದೆಂದು ಆಕೆ ಅಂದುಕೊಳ್ಳುತ್ತಾಳೆ. ಈಗ ಅವಳಿಗೆ ಭಾರತದ ರಸ್ತೆಗಳು ಕಿರಿದಾಗಿಯೂ ವಾಸನೆಯಿಂದಲೂ ಇದ್ದಂತೆ ಕಾಣಿಸುತ್ತಿವೆ.

” ನಾನು ಇಲ್ಲಿ ( ಭಾರತದಲ್ಲಿ ) ತುಳಿತಕ್ಕೊಳಗಾಗಿದ್ದೇನೆ ಎಂದು ನನಗನಿಸುತ್ತದೆ. ಇದು ನನ್ನ ಹೆತ್ತವರಿಂದಲ್ಲ. ಈ ದೇಶಕ್ಕೆ ಹೆಣ್ಣು ಎಂಬುದೊಂದು ಭಾರವಾದ ವಸ್ತು. ಅದಕ್ಕೆ (ಭಾರತಕ್ಕೆ) ಹೆಣ್ಣನ್ನು ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನಾನು ಭಾರತಕ್ಕೆ ಒಂದು ವೇಳೆ ಬಂದು ಬಿಟ್ಟರೆ ನಾನೇನು ಮಾಡಲಿ. ನನಗೆ ಜೀವಿಸುವುದು ಸಾಧ್ಯವಾಗುತ್ತದೆಯೇ? ನನಗೆ ನಾನೇ ಕೇಳಿಕೊಂಡೆ. ಭಾರತವು ಹೆಂಗಸರಿಗಲ್ಲ. ಹಾಗಾಗಿ ನಾನು ಇಲ್ಲಿ ಹೇಗೆ ಜೀವಿಸಲಿ ? ” ಹೀಗೆಂದು ಕ್ವಾರ್ಟ್ಜ್ ಎಂಬ ಆನ್ಲೈನ್ ಪತ್ರಿಕೆಯಲ್ಲಿ ಆಕೆ ಬರೆಯುತ್ತಾಳೆ.

ಇಂಡಿಯಾದ ದ್ವೇಷಕ್ಕೆ ಆಕೆ ಡಿಸೆಂಬರ್ 16, 2012 ರಂದು ನಡೆದ ನಿರ್ಭಯಾಳ ಅತ್ಯಾಚಾರ ಕೊಲೆ ಪ್ರಕರಣವನ್ನು ಸಮರ್ಥನೆಯಾಗಿ ತೆಗೆದುಕೊಳ್ಳುತ್ತಾಳೆ. ಅಂತಹ ಹೀನ ಘಟನೆಯನ್ನು ಪ್ರತಿ ನಾಗರಿಕ ಸಮಾಜ ಪ್ರತಿಭಟಿಸಬೇಕು. ಪ್ರತಿಭಟಿಸಿದೆ ಕೂಡ. ಆದರೆ ಅಭಿನಂದನಾ ಭಟ್ಟಾಚಾರ್ಯ ಎಂಬ ಯುವ ಲೇಖಕಿ ಭಾರತದ ಅಂತಃಸತ್ವವನ್ನು ಪ್ರಶ್ನಿಸುವ ಕೆಲಸ ಮಾಡಿದ್ದಾಳೆ.

” ಈ ದೇಶದಲ್ಲಿ ಸಿಸ್ಟೆಮಿಕ್ ಒಪ್ಪ್ರೆಷನ್, ಅಂದರೆ ಭಾರತದ ಮೂಲದಲ್ಲೇ ಬೇಧ ಭಾವವಿದೆ. ಅದನ್ನು ಮತ್ತೆ ಸರಿಪಡಿಸಲಾಗುತ್ತದೆಯಾ? ನಾನು ಮುಂಬೈಯಿಂದ ಯು ಎಸ ಗೆ ಹೊರಡುವಾಗ ಮತ್ತೆ ಭಾರತಕ್ಕೆ ಬರುವುದಿಲ್ಲ ಎಂದು ನಿರ್ಧರಿಸಿದೆ. ಎಷ್ಟೋ ಜನರು ಭಾರತಕ್ಕೆ ವಾಪಸ್ಸು ಬರುವುದಿಲ್ಲ ಎಂದು ಹೀಗೆಯೇ ನಿರ್ಧರಿಸುತ್ತಾರೆ. ಆದರೆ ಎಷ್ಟೋ ಜನರು ಭಾರತಕ್ಕೆ ವಾಪಸ್ ಬರಬೇಕಾಗುತ್ತದೆ. ಏಕೆಂದರೆ ಅವರಿಗೆ ಇಲ್ಲಿ ಬರಲು ಮನಸ್ಸಿಲ್ಲದಿದ್ದರೂ ಅಮೆರಿಕದಲ್ಲಿ ಭಾರತೀಯರಿಗೆ ವೀಸಾ ಪಡೆಯುವುದು ಬೆಟ್ಟ ಹತ್ತುವಷ್ಟೇ ಕಷ್ಟದ ಕೆಲಸ.”ಅನ್ನುತ್ತಾಳೆ ಆಕೆ.

ಅಲ್ಲೇ ಅಮೆರಿಕಾದಲ್ಲಿ ಹುಟ್ಟಿ ಬೆಳೆದು ಇಲ್ಲಿಗೆ ಬಂದವರೂ ಕೂಡ ಇಲ್ಲಿ ಬಂದು ಎಲ್ಲರ ಜತೆ ಹೊಂದಿಕೊಂಡು ಸಹಬಾಳ್ವೆ ನಡೆಸುತ್ತಾರೆ. ಅವರು ಇಂಡಿಯಾದ ಬಗ್ಗೆ ದ್ವೇಷ ಭಾವನೆ ಯಾಕೆ ಬೆಳೆಸಿಕೊಂಡಿಲ್ಲ.
ದೇಶದಲ್ಲಿ ಜಾತೀಯತೆಯಿದೆ, ಕಸ ರಸ್ತೆಯಲ್ಲಿ ಹಾಕುತ್ತೇವೆ, ಗೋಡೆಗಳನ್ನು ಉಗಿದು ಅಲ್ಲಿ ಕೆಂಪು ಚಿತ್ತಾರ ಬಿಡಿಸುತ್ತೇವೆ, ಭ್ರಷ್ಟಾಚಾರ ಇದೆ ಒಪ್ಪಿಕೊಳ್ಳೋಣ. ಮನೆಯಲ್ಲಿ ಹೆಣ್ಣು ಮಕ್ಕಳನ್ನು ಭದ್ರತೆ ಮಾಡುತ್ತೇವೆ. ಅದು ಹೌದು, ನಿಜ. ಈಕೆಯೂ ಇದರ ಜೊತೆಗೆ ಬೆಳೆದವಳು. ಈಗ ಯಾಕೆ ಸಡನ್ನಾಗಿ ಅಮೆರಿಕಕ್ಕೆ ಹೋದ ಮೇಲೆ ಇಂಡಿಯಾದ ಮೇಲೆ ಯಾಕೆ ಈಕೆಗೆ ಈ ತಾತ್ಸಾರ ?

” ಈ ಆರು ವರ್ಷಗಳಲ್ಲಿ ನಿರ್ಭಯಾ ಅತ್ಯಾಚಾರ ಕೊಲೆಯಾದ ನಂತರ ನಾನು ಭಾರತಕ್ಕೆ ಹಿಂದಿರುಗಿಲ್ಲ ಒಂದು ದಿನ ವಾಪಸ್ಸು ಹೋಗಿ ನನ್ನ ಹೆತ್ತವರನ್ನು ನೋಡಿ ಬರುತ್ತೇನೆ ಆದರೆ ಖಂಡಿತವಾಗಿಯೂ ವಾಪಸ್ಸು ಅಮೆರಿಕಾಗೆ ಬರುತ್ತೇನೆ. ಯಾಕೆಂದರೆ ಇಲ್ಲಿ ಬಂದು ನಿರಾಳವಾಗಿ ಉಸಿರಾಡಬಹುದು” ಇದು ಇಂಡಿಯಾದ ಮಾತೃ ಹೃದಯಿಯ ಎದೆ ಹಾಲು ಕುಡಿದ ಮಗಳ ಮಾತು.

ಈಕೆಯ ಮಾತನ್ನೇ ಕೇಳಿ. ಅಮೆರಿಕಾದಲ್ಲಿ ಸರಿಯಾಗಿ ವೀಸಾ ಸಿಗದೆ ಹೋದರೆ, ಅಲ್ಲಿರುವವರು ಅನಿವಾರ್ಯವಾಗಿ ಇಲ್ಲಿಗೆ ಬರುತ್ತಾರಂತೆ, ಬರಲು ಮನಸ್ಸಿಲ್ಲದಿದ್ದರೂ. ಏನಿದರ ಅರ್ಥ? ನಿಮ್ಮಂಥವರಿಗೆ, ಈ ದರಿದ್ರ, ಕೊಳಕು ದೇಶಕ್ಕೆ ಬರಬೇಕೆಂಬ ಮನಸ್ಸಿಲ್ಲದಿದ್ದರೆ ದಯವಿಟ್ಟು ಬರಬೇಡಿ. ಭಾರತವನ್ನು ಪ್ರೀತಿಸದವರಿಗೆ, ನಮ್ಮ ಅಮ್ಮ ಕುರೂಪಿಯಾದ ತಕ್ಷಣ, ಅಮ್ಮನಿಗೆ ವಯಸ್ಸಾದ ತಕ್ಷಣ, ಅಮ್ಮಅಸಹಾಯಕ, ಬಡ ಅನಕ್ಷರಸ್ಥಳಾದ ಕೂಡಲೇ ಆಕೆಯನ್ನು ನಾವು ತಿರಸ್ಕರಿಸಿ ಹೋಗುತ್ತೇವಾ? ಇದೆಂತಹ ಮನಸ್ಥಿತಿ. ನಿನ್ನಂತ ಹೀನ ಮನಸ್ಸತ್ವದವಳಿಗೆ ಇಲ್ಲಿ ಜಾಗವಿಲ್ಲ. ಅಲ್ಲಿ ಅಮೆರಿಕಾದಲ್ಲಿ ಬುಡಕ್ಕೆ ಒದ್ದು ಓಡಿಸಿದರೆ ಇಲ್ಲಿ ಬರಲಿಕ್ಕೆ ಇದೇನೂ ಧರ್ಮಛತ್ರವಲ್ಲ. ನಿನ್ನಂತಹಾ ಮನಸ್ಸುಗಳು ಇಲ್ಲಿ ಬಂದು, ವಿಷ ಬೀಜ ಬಿತ್ತುವುದು ಬೇಡ.

ಯಾಕೆ ಇವಳಿಗೆ ಭಾರತದ ಮೇಲೆ ಎಷ್ಟು ದ್ವೇಷ ? ಏನಕ್ಕೆ ಇವಳಿಗೆ ಭಾರತವನ್ನು ಕಂಡರೆ ಇಷ್ಟರ ಮಟ್ಟಿಗಿನ ಹೇಸಿಗೆ ? ಇದು ನನ್ನನ್ನು ಬಹುವಾಗಿ ಕಾಡಿದ ಪ್ರಶ್ನೆ. ಎಷ್ಟೋ ದಿನಗಳಿಂದ ಇದಕ್ಕೆ ಉತ್ತರ ಸಿಕ್ಕಿರಲಿಲ್ಲ. ಈಗ ಉತ್ತರ ನಿಚ್ಚಳವಾಗುತ್ತಿದೆ. ಒಂದು ಸಲ ಯು ಎಸ್ ನಂತಹಾ ದೇಶಗಳಿಗೆ ಹೋದ ಜನರಲ್ಲಿ ಹಲವಾರು ಯಾಕೆ ಮತ್ತೆ ಭಾರತಕ್ಕೆ ಬರಲು ಹಿಂಜರಿಯುತ್ತಾರೆಂಬುದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.

ಕೊಲೆ, ಹಿಂಸೆ, ಅತ್ಯಾಚಾರ ಎಲ್ಲ ದೇಶಗಳಲ್ಲೂ ನಡೆಯುತ್ತದೆ. ಅಮೆರಿಕಾ ದೇಶವು ಒಟ್ಟಾರೆ ಕ್ರೈಂ ನಲ್ಲಿ ನಮಗಿಂತ ಮುಂದಿದೆ. ಪ್ರಪಂಚದ ಯಾವುದೇ ದೇಶದಲ್ಲಿ, ಯಾರೇ ಸರ್ವೆ ಮಾಡಲಿ, ಅಮೆರಿಕಾಕ್ಕೆ ಮುಂಚೂಣಿಯ ಕ್ರಿಮಿನಲ್ ಪಟ್ಟ ಗ್ಯಾರಂಟಿ. ಅಂತಹ ರಾಷ್ಟ್ರ ಅದು. ಆದರೂ ಅದನ್ನು ಪ್ರೀತಿಸಬೇಕಾದರೆ, ಅವರಿಗೆ ಅಲ್ಲಿ ಏನೋ, ಇಲ್ಲಿ ಇಲ್ಲದ್ದು ದೊರಕುತ್ತಿರಬೇಕಲ್ಲವೇ? ಏನದು?

ಭಾರತ ನಿನ್ನಂತವರಿಗೆ ಬೇಡ ಅನ್ನಿಸುವುದಕ್ಕೆ ಮೊದಲ ಕಾರಣ: ವಿಲಾಸ !!

ಅಭಿನಂದಾ ಭಟ್ಟಾಚಾರ್ಯಳಂತಹ ವ್ಯಕ್ತಿಗಳು ಅಲ್ಲಿ ಹೋದ ಕೂಡಲೇ, ” ದೇ ಆರ್ ಸೋಲ್ಡ್ ಫಾರ್ ಡಾಲರ್ಸ್.” ಇವತ್ತಿಗೆ ನಮ್ಮ72 ರೂಪಾಯಿ ಅವರಿಗೆ ಕೇವಲ ಒಂದು ರೂಪಾಯಿ. ಅಲ್ಲಿ ಚಿಕ್ಕ ನೌಕರಿಯನ್ನು ತಲೆ ಬಗ್ಗಿಸಿ ಮಾಡಿದರೂ ಅಗಾಧವಾಗಿ ಸಂಪಾದಿಸಬಹುದು. ಹಾಗೆ ಸಂಪಾದಿಸಿದ ದುಡ್ಡಿನಲ್ಲಿ ಅತ್ಯಂತ ಹೈಜೆನಿಕ್ ರೂಮುಗಳಲ್ಲಿ, ಮಂದ್ರ ದೀಪದ ಅಡಿಯಲ್ಲಿ ಒಂದರ ನಂತರ ಒಂದು ಬೀರು ಹೀರಬಹುದು. ತರಾವರಿ ಸ್ಕಾಚು ಕುಡಿಯಬಹುದು. ಸ್ವಚ್ಛ ಬೀದಿಗಳಲ್ಲಿ ಸ್ವಚ್ಛಂದವಾಗಿ ತಿರುಗಾಡಬಹುದು.

ಅವನ್ನೆಲ್ಲ ತನ್ನ ದುಡ್ಡಲ್ಲೇ ಮಾಡಬೇಕೆಂದೇನೂ ಇಲ್ಲ. ಏಕಾಂತದಲ್ಲಿ ಬಹುಕಾಂತರೊಂದಿಗೆ ಸುಖಾಂತಕ್ಕೆ ಅಲ್ಲಿ ಅನಂತ ಅವಕಾಶ. ಅಲ್ಲಿ ಅದಕ್ಕೆ ಯಾರು ಕೂಡಾ ಅಡ್ಡಿ ಪಡಿಸುವುದಿಲ್ಲ. ಮನೆಯಲ್ಲೇ ಪಾರ್ಟಿ ಮಾಡುವುದಕ್ಕೆ ಗದರಲು ಅಪ್ಪ ಅಲ್ಲಿಲ್ಲ. ಪ್ರೊಟೆಕ್ಟಿವ್ ಅಣ್ಣನ ರಕ್ಷಣೆಯಿಲ್ಲ. ಸಂಜೆಯೊಳಗೆ ಮನೆಗೆ ಬರದೇ ಹೋದರೆ ಬಯ್ಯುವ ಅಮ್ಮ ಅಲ್ಲಿಲ್ಲ. ಒಟ್ಟಾರೆ ಅನ್ಲಿಮಿಟೆಡ್ ವಿಲಾಸಕ್ಕೆ ಇಲ್ಲಿರುವ ಹಾಗೆ ಲಿಮಿಟೇಷನ್ ಅಲ್ಲಿಲ್ಲ. ನಿನಗೆ ಹೇಗಿರಬಹುದೋ, ನಿನ್ನಿಷ್ಟದಂತೆ ಸ್ವೇಚ್ಛೆಯಿಂದ ಇರಬಹುದು. ಅದುವೇ ತಾನೇ, ನಿಮ್ಮ ಸ್ತ್ರೀ ಸಮಾನತೆಯ ಮಾಡರ್ನ್ ಪರಿಭಾಷೆ?

ಈಗ ಅವನ್ನೆಲ್ಲ ಆಕೆಗೆ ಕೇಳಬೇಕಾಗಿದೆ. ನಿನ್ನ ಪ್ರೀತಿಯ ದೇಶ ಅಮೆರಿಕಾ ಭಾರತೀಯರಿಗೆ ಎಷ್ಟು ಸೇಫು?
ಅಮೆರಿಕಾದಲ್ಲಿ ಭಾರತೀಯರ ಮೇಲೆ ನಡೆದ ಗುಂಡಿನ ದಾಳಿಯಷ್ಟು ಇಲ್ಲಿ ಭಾರತದಲ್ಲಿ ನಡೆದಿದ್ದರೆ, ಅಮೆರಿಕಾ ಭಾರತದ ಮೇಲೆ ಯುದ್ಧವೇ ಹೂಡಿರುತ್ತಿತ್ತು !

2017 ಕ್ಕಿಂತ ಈಚೆಗೇ ನಡೆದ ಭಾರತೀಯರ ಹತ್ಯಾಕಾಂಡವನ್ನೇ ನೋಡಿ.
ಫೆಬ್ರವರಿ, 2017 ರಲ್ಲಿ ಪ್ರತ್ಯೇಕ ಎರಡು ಗುಂಡಿನ ದಾಳಿಗಳಾದವು. ಅದರಲ್ಲಿ ವಂಶಿ ರೆಡ್ಡಿ ಹತನಾಗಿದ್ದ. ಇನ್ನೊಂದರಲ್ಲಿ ಶ್ರೀನಿವಾಸ್ ರೆಡ್ಡಿ ಕುಚಿಬೋಟ್ಲಾ ಗುಂಡಿಗೆ ಬಲಿಯಾಗಿದ್ದ.
ಆನಂತರ ಮಾರ್ಚ್ ತಿಂಗಳಿನಲ್ಲಿ ಓವ್ರ ಮಹಿಳಾ ಟೆಕ್ಕಿ ಮತ್ತಾಕೆಯ 7 ವರ್ಷದ ಮಗನನ್ನು ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ಅದೇ ವರ್ಷ ಏಪ್ರಿಲ್ ನಲ್ಲಿ 56 ವರ್ಷದ ಖಂಡು ಪಟೇಲ್ ಅನ್ನು ಗುಂಡು ಹೊಡೆದು ಸಾಯಿಸಲಾಗಿತ್ತು. ಮತ್ತೆ 2017 ರ ನವೆಂಬರ್ ನಲ್ಲಿ 21 ವರ್ಷದ ಅಮರಿಂದರ್ ಸಿಂಗ್ ರಾಬರ್ ಗಳ ಗುಂಡಿಗೆ ಬಲಿಯಾಗಿದ್ದ.
2018 ರಲ್ಲಿ ಜುಲೈನಲ್ಲಿ , ಕಾನ್ಸಾಸ್ ನಗರದ ಮಿಸ್ಸೌರಿ ವಿಶ್ವವಿದ್ಯಾಲಯದಲ್ಲಿ ಶರತ್ ಕೊಪ್ಪು ಎಂಬ 26 ವರ್ಷದ ವಿದ್ಯಾರ್ಥಿಯನ್ನು ರಾಬರ್ ಗಳ ಗುಂಡು ಕೊಂದಿತ್ತು.
ಮೇ 2019 ಓರ್ವ ಭಾರತೀಯ ಮತ್ತು ನಾಲ್ವರು ಭಾರತೀಯರು ಗುಂಡಿಗೆ ಅಸುನೀಗಿದ್ದನು. ಅದೇ ವರ್ಷ ಜೂನ್ ತಿಂಗಳಲ್ಲಿ ಚಂದ್ರಶೇಖರ್ ಸುಂಕರ ಎಂಬಾತನ ಇಡೀ ಕುಟುಂಬವೇ ಗುಂಡಿನ ಆಕ್ರೋಶಕ್ಕೆ ಸತ್ತು ಬಿದ್ದಿತ್ತು.

ಶ್ರೀನಿವಾಸ್ ರೆಡ್ಡಿ ಕುಚಿಬೋಟ್ಲಾ . ಮರಣ : 2017
ಅಭಿಷೇಕ್, ಮೈಸೂರು. ಮರಣ : ಕಳೆದ ವಾರ (2019)

ಮೊನ್ನೆ ಮೂರು ದಿನಗಳ ಹಿಂದೆ ಮೈಸೂರಿನ ಅಭಿಷೇಕ್ ನನ್ನ ಅಮೆರಿಕಾ ಎಂಬ ‘ ಗ್ರೇಟ್ ಕಂಟ್ರಿ ‘, ಕೇವಲ ನಾವು ಬುದ್ದಿವಂತರು, ಶ್ರಮ ಜೀವಿಗಳು ಮುಂತಾದ ಈರ್ಷೆಯ ಕಾರಣದಿಂದ ಸಾಯಿಸಿದೆ.
ಭಾರತವನ್ನು ದ್ವೇಷಿಸಿ ಬರೆಯುವ ಅಭಿನಂದಾ ಭಟ್ಟಾಚಾರ್ಯ ಥರದ ‘ ವಿಲಾಸಿ ‘ ಹೆಣ್ಣಿಗೆ ಅದು ಗೋಚರಿಸುವುದಿಲ್ಲ.

ಇವರೇ ಭಾರತವನ್ನು ಭಾರತೀಯರೇ ದ್ವೇಷಿಸುವಂತೆ ಮಾಡುತ್ತಿರುವುದು. ಇಂತಹಾ ವಿಷ ಬೀಜಗಳೇ ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿ, ದೇಶ ಅಭಿವೃದ್ಧಿಯತ್ತ ಸಾಗಿದರೂ, ದೇಶದ ಅರ್ಥ ವ್ಯವಸ್ಥೆ ಕುಸಿದು ಹೋಗುತ್ತಿದೆ ಎಂದು ಕೂಗು ಹಾಕುವವರು. ನಾವು ಮೊದಲು ಇಂತವರನ್ನು ದ್ವೇಷಿಸಲು ಕಲಿಯಬೇಕು. ಅಂತವರೆಡೆಗೆ ನೆಟ್ಟಿರಲಿ ನಿಮ್ಮದೊಂದು ಕಣ್ಣು. ಇಂತಹ ಆಂತರಿಕ ದೇಶದ್ರೋಹಿಗಳೆಡೆ ಇರಲಿ ಒಂದು ಆಕ್ರೋಶಭರಿತ ಹುಚ್ಚು ಕೇಕೆ !

ಅಭಿನಂದಾ ಭಾರತ ದ್ವೇಷದ ಲೇಖನ : https://qz.com/india/1218598/why-an-indian-girl-chose-to-become-an-american-woman/

ಸುದರ್ಶನ್ ಬಿ.ಪ್ರವೀಣ್, ಬೆಳಾಲು

Leave A Reply

Your email address will not be published.