Ballari: ವಿಂಡ್‌ ಫ್ಯಾನ್‌ಗೆ ಬೆಂಕಿ; ನಿಮಿಷದಲ್ಲೇ ಸುಟ್ಟು ಭಸ್ಮ

Share the Article

Ballari: ರೈತರ ಜಮೀನಿನಲ್ಲಿ ಅಳವಡಿಸಿದ್ದ ವಿಂಡ್‌ ಫ್ಯಾನ್‌ಗೆ ಬೆಂಕಿ ಹತ್ತಿಕೊಂಡ ಪರಿಣಾಮ ಹೊತ್ತಿ ಉರಿದ ಘಟನೆಯೊಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಿರಾಳ್‌ ಗ್ರಾಮದಲ್ಲಿ ನಡೆದಿದೆ.

ಬಿಸಿಲ ಧಗೆ ರಾಜ್ಯದಲ್ಲಿ ಹೆಚ್ಚಾಗಿರುವ ಕಾರಣ ಬೆಂಕಿ ಅವಘಡಗಳು ಹೆಚ್ಚುತ್ತಿವೆ ಎನ್ನಬಹುದು. ಹಿರಾಳ್‌ ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಅಳವಡಿಸಲಾಗಿದ್ದ ವಿಂಡ್‌ ಫ್ಯಾನ್‌ಗೆ ಬೆಂಕಿ ಹತ್ತಿದ್ದು ಏಕಾಏಕಿ ಹೊತ್ತಿ ಭಸ್ಮವಾಗಿ ಸುತ್ತುಲೂ ಕಪ್ಪು ಛಾಯೆ ಮೂಡಿದೆ.

ಘಟನಾ ಸ್ಥಳಕ್ಕೆ ಚೋರನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Comments are closed.