Belthangady: ಪದವಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

Share the Article

Belthangady; ತೋಟತ್ತಾಡಿ ಗ್ರಾಮದಲ್ಲಿ ಪದವಿ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ನಿಧನ ಹೊಂದಿದ ಘಟನೆಯೊಂದು ನಡೆದಿದೆ. ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ ಜಯರಾಮ (19) ಹೃದಯಾಘಾತ ಸಂಭವಿಸಿದ್ದು ಇಂದು (ಫೆ.17) ಚಿಕಿತ್ಸೆ ಫಲಕಾರಿಯಾಗದೆ ಮೃತಹೊಂದಿದ್ದಾರೆ.

ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಜ.22 ರ ಬೆಳಗ್ಗೆ ಹೃದಯಾಘಾತ ಸಂಭವಿಸುವುದರಿಂದ ಬ್ರೈನ್‌ ಸ್ಟ್ರೋಕ್‌ ಕೂಡಾ ಸಂಭವಿಸಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯರಾಮ ಚಿಕಿತ್ಸೆ ಫಲಕಾರಿಯಾಗದೆ ಇಂದು (ಫೆ.17) ರಂದು ನಿಧನರಾಗಿದ್ದಾರೆ.

Comments are closed.