Mangaluru : ಪೆಟ್ರೋಲ್ ಬಂಕ್ ನಲ್ಲಿ ತನ್ನ ಕ್ಯು ಆರ್ ಕೋಡ್ ಇರಿಸಿದ ಆಸಾಮಿ- ದೋಚಿದ್ದು 58 ಲಕ್ಷ, ಗೊತ್ತಾಗಿದ್ದು 2 ವರ್ಷದ ಬಳಿಕ!!

Mangaluru : ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಒಬ್ಬ, ಬಂಕ್ ನ ಕ್ಯೂ ಆರ್ ಕೋಡ್ ಬದಲು ಮಾಡಿ, ತನ್ನ ವೈಯಕ್ತಿಕ ಬ್ಯಾಂಕ್ ಖಾತೆ ಕ್ಯೂ ಆರ್ ಕೋಡ್ ಇರಿಸಿ ಸುಮಾರು 58 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

 

ಹೌದು, ಮಂಗಳೂರಿನ(Mangaluru)ರಿಲಯನ್ಸ್ ಔಟ್ಲೆಟ್ ಫ್ಯುಯಲ್ ಬಂಕ್ ನಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಂಕ್ ನಲ್ಲಿ ಗ್ರಾಗಕರು ಪಾವತಿಗಾಗಿ ಬಳಸಲು ಇಟ್ಟಿದ್ದ ಕ್ಯುಆರ್​ ಕೋಡ್​ ಅನ್ನು ತೆರವು ಮಾಡಿದ್ದ ಆರೋಪಿ ಮಂಗಳೂರಿನ ಬಜ್ಪೆ ನಿವಾಸಿ ಮೋಹನದಾಸ್ ತನ್ನದೇ ಕ್ಯುಆರ್​ ಕೋಡ್​ ಇಟ್ಟಿದ್ದ. ಪರಿಣಾಮವಾಗಿ ಗ್ರಾಹಕರು ಪಾವತಿ ಮಾಡಿದ ಹಣ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತಿತ್ತು. ಈತ ಸುಮಾರು 15 ವರ್ಷಗಳಿಂದ ಪೆಟ್ರೋಲ್​​ ​ಬಂಕ್​ನಲ್ಲಿ ಕೆಲಸಕ್ಕಿದ್ದ ಎನ್ನಲಾಗಿದೆ. ಬಂಕ್​ನ ಹಣಕಾಸು ವ್ಯವಹಾರ, ನಿರ್ವಹಣೆ ಜವಬ್ದಾರಿ ಹೊತ್ತಿದ್ದ ಮೋಹನದಾಸ, 10-03-2020 ರಿಂದ 31-07-2022ರವರೆಗೆ ಕ್ಯುಆರ್ ಕೋಡ್ ಬದಲಿಸಿದ್ದ.

ಅಂದಹಾಗೆ ಕಳೆದ 15 ವರ್ಷದಿಂದ ಮೋಹನ್ ದಾಸ್ ಸೂಪರ್ವೈಸರ್ ಆಗಿ ಫ್ಯುಯಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ಹಣಕಾಸು ನಿರ್ವಹಣೆ ಸಹ ಈತನ ನಿಯಂತ್ರಣದಲ್ಲಿ ಇರುತ್ತಿತ್ತು. ಸಧ್ಯ ಆರೋಪಿ ವಿರುದ್ಧ ರಿಲಯನ್ಸ್​​ ಕಂಪನಿ ಮ್ಯಾನೇಜರ್​ ಸಂತೋಷ್​​ ಮ್ಯಾಥ್ಯೂ ದೂರು ನೀಡಿದ್ದು, ಮಂಗಳೂರಿನ ಸೈಬರ್​ ಕ್ರೈಂ ಮತ್ತು ಎಕನಾಮಿಕ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮೋಹನದಾಸನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Comments are closed, but trackbacks and pingbacks are open.