UP: ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ- 10 ಮಕ್ಕಳು ಸಜೀವ ದಹನ!!
UP: ಝಾನ್ಸಿ (Jhansi) ವೈದ್ಯಕೀಯ ಕಾಲೇಜಿನ (Medical college) ಎನ್‌ಐಸಿಯುನಲ್ಲಿ (Neonatal Intensive Care Unit) ಬೆಂಕಿ (Fire) ಕಾಣಿಸಿಕೊಂಡು 10ಕ್ಕೂ ಹೆಚ್ಚು ಮಕ್ಕಳು (Children) ಸಜೀವ ದಹನಗೊಂಡಿದ್ದಾರೆ.
ಶುಕ್ರವಾರ ತಡರಾತ್ರಿ ಉತ್ತರ ಪ್ರದೇಶದ (Uttar Pradesh) ಝಾನ್ಸಿ (Jhansi) ವೈದ್ಯಕೀಯ ಕಾಲೇಜಿನ (Medical college) ಎನ್‌ಐಸಿಯುನಲ್ಲಿ (Neonatal Intensive Care Unit) ಶಾರ್ಟ್ ಸರ್ಕ್ಯೂಟ್‌ನಿಂದ NICU (ನವಜಾತ ಶಿಶುಗಳ ತೀವ್ರ ನಿಗಾ ಘಟಕ) ಒಳಗಿನ ಘಟಕದಲ್ಲಿ ರಾತ್ರಿ 10.30 ರಿಂದ 10.45 ರ ವೇಳೆಗೆ (ಶುಕ್ರವಾರ) ಬೆಂಕಿ ಕಾಣಿಸಿಕೊಂಡಿದೆ. 10ಕ್ಕೂ ಹೆಚ್ಚು ಮಕ್ಕಳು (Children) ಸಜೀವ ದಹನಗೊಂಡಿದ್ದಾರೆ. ಅನೇಕ ಮಕ್ಕಳು ಇನ್ನೂ ವಾರ್ಡ್‌ನಲ್ಲಿ ಸಿಲುಕಿಕೊಂಡಿದ್ದು, ಇಲ್ಲಿಯವರೆಗೆ 37 ಮಕ್ಕಳನ್ನು ಸ್ಥಳಾಂತರಿಸಲಾಗಿದೆ.
ವರದಿಗಳ ಪ್ರಕಾರ, ಘಟನೆಯಲ್ಲಿ 10 ಶಿಶುಗಳು ಸಾವನ್ನಪ್ಪಿರುವ ಭಯವಿದೆ” ಎಂದು ಝಾನ್ಸಿ ಡಿಎಂ ಅವಿನಾಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಜಿಲ್ಲೆಯ ಹಿರಿಯ ಅಧಿಕಾರಿಗಳು ವೈದ್ಯಕೀಯ ಕಾಲೇಜಿಗೆ ತಲುಪಿದ್ದಾರೆ ಎಂದು ಝಾನ್ಸಿ ಪೊಲೀಸರು ತಿಳಿಸಿದ್ದಾರೆ. ಇನ್ನು ಮುಖ್ಯಮಂತ್ರಿ ಯೋಗಿ ಅವರು ಅವಘಡದ ಬಗ್ಗೆ ಗಮನ ಹರಿಸಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯವನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
VIDEO | Fire breaks out at Maharani Laxmi Bai Medical College in Jhansi, Uttar Pradesh; rescue operation underway. More details awaited. #Fire #Jhansifire
(Source: Third Party)
(Full video available on PTI Videos – https://t.co/n147TvrpG7) pic.twitter.com/Q5aZ9MiZMY
— Press Trust of India (@PTI_News) November 15, 2024
ಅಲ್ಲದೆ ಘಟನೆಯ ವಿಡಿಯೋ ಕೂಡ ಹೊರಬಿದ್ದಿದ್ದು, ಅಗ್ನಿಶಾಮಕ ದಳದವರು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗೆ ಸಹಾಯ ಮಾಡಲು ಕೆಲವು ಗಾಜಿನ ಕಿಟಕಿಗಳನ್ನು ಒಡೆದರು. ವೈದ್ಯಕೀಯ ಕಾಲೇಜಿನಿಂದ ಬಿಡುಗಡೆಯಾದ ಚಿತ್ರಗಳಲ್ಲಿ, ರೋಗಿಗಳು ಮತ್ತು ಅವರ ಸಂಬಂಧಿಕರು ಅಳುತ್ತಿರುವುದು ಕಂಡುಬಂದಿದೆ.