Blood Donation: ದೇಹದಲ್ಲಿ ಟ್ಯಾಟೂ ಇದ್ದವರು ರಕ್ತದಾನ ಮಾಡಬಾರದು? ಮಾಡಿದ್ರೆ ಏನಾಗುತ್ತೆ?!
Blood Donation: ಇವತ್ತು ಜಗತ್ತು ಆರೋಗ್ಯ, ಆಹಾರಕ್ಕಿಂತ ಹೆಚ್ಚಾಗಿ ತಮ್ಮ ಫ್ಯಾಷನ್ ವಿಷಯಗಳಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ದೇಹದ ಅಂದಕ್ಕಾಗಿ ತಮ್ಮ ಅರೋಗ್ಯವನ್ನೇ ಕಳೆದುಕೊಳ್ಳುತ್ತಾರೆ. ಉದಾಹರಣೆಗೆ ಯುವ ಜನತೆ ಹಾಕುವ ಟ್ಯಾಟೂಗಳು. ರಕ್ತ ದಾನ ಮಹಾದಾನ ಆದ್ರೆ ಟ್ಯಾಟೂ ಹಾಕಿದವರು ಇನ್ನೊಬ್ಬರಿಗೆ ರಕ್ತದಾನ ಮಾಡುವ ಮುನ್ನ ಕೆಲವು ವಿಷಯ ತಿಳಿದುಕೊಳ್ಳಬೇಕು.
ಹೌದು, ಟ್ಯಾಟೂಗಳು ಎಷ್ಟು ಅಪಾಯ ಎಂದರೆ ತುರ್ತು ಸಂದರ್ಭದಲ್ಲಿ ರಕ್ತದಾನ (Blood Donation) ಮಾಡಬೇಕಾದರೆ ವೈದ್ಯರು ಟ್ಯಾಟೂ ಹಾಕಿದ ವ್ಯಕ್ತಿಗಳಿಗೆ ರಕ್ತದಾನ ಮಾಡಲು ಬಿಡುವುದಿಲ್ಲ. ವಿಶೇಷವಾಗಿ ಯುವಕರು ತಮ್ಮ ದೇಹದ ಮೇಲೆ ವಿವಿಧ ರೀತಿಯ ಹಚ್ಚೆಗಳನ್ನು ಹಾಕಿಸಿಕೊಳ್ಳುತ್ತಿದ್ದರು ಆದರೆ ಈಗ ಪ್ರತಿಯೊಬ್ಬರೂ ಅಂದರೆ ಪುರುಷರು ಮತ್ತು ಮಹಿಳೆಯರು ಎಂಬ ಭೇದವಿಲ್ಲದೆ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ಹಚ್ಚೆಗಳು ಅಥವಾ ಟ್ಯಾಟೂಗಳು ಇದ್ದರೆ ಅವರಿಗೆ ರಕ್ತದಾನ ಮಾಡುವುದು ಕೆಲವೊಮ್ಮೆ ಸಮಸ್ಯೆಯಾಗಬಹುದು. ಹಾಗಾದರೆ ದೇಹದ ಮೇಲೆ ಹಚ್ಚೆ ಇದ್ದರೆ ನೀವು ರಕ್ತವನ್ನು ಏಕೆ ನೀಡಬಾರದು? ಇದರಿಂದ ಆಗುವ ಸಮಸ್ಯೆ ಏನು? ಎಂದು ಇಲ್ಲಿ ತಿಳಿಸಲಾಗಿದೆ.
ವಾಸ್ತವವಾಗಿ, ದೇಹದ ಮೇಲೆ ಹಚ್ಚೆ ಇದ್ದರೆ ರಕ್ತದಾನ ಮಾಡಲು ಯಾವುದೇ ಅಡೆತಡೆಗಳಿಲ್ಲ ಎಂದು ವೈದ್ಯರು ಹೇಳುತ್ತಾರೆ. ಹಚ್ಚೆ ಹಾಕಿಸಿಕೊಂಡು ನೀವು ಸುಲಭವಾಗಿ ರಕ್ತದಾನ ಮಾಡಬಹುದು. ಇದು ರೋಗಿಗೆ ಯಾವುದೇ ಹಾನಿಯನ್ನುಂಟು ಮಾಡುವ ಸಾಧ್ಯತೆ ಇರುವುದಿಲ್ಲ. ಆದರೆ ಹಚ್ಚೆ ಹಾಕಿಸಿಕೊಂಡವರು ಕೆಲವು ಮಾರ್ಗಸೂಚಿಗಳನ್ನು ಅನುಸರಿಸುವುದು ಅವಶ್ಯಕವಾಗಿರುತ್ತದೆ.
ಮುಖ್ಯವಾಗಿ, ಟ್ಯಾಟೂಗಳನ್ನು ಯಾವಾಗಲೂ ಹೊಸ ಸೂಜಿಗಳನ್ನು ಬಳಸಿಯೇ ಹಾಕಿಸಿಕೊಳ್ಳಬೇಕು. ಕೆಲವೊಮ್ಮೆ ಹೆಚ್ಚಿನ ಜನರು ಒಂದೇ ಸೂಜಿಗಳಿಂದ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇದರಿಂದ ಮಾರಣಾಂತಿಕ ಕಾಯಿಲೆಗಳು ರಕ್ತದ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ನಂತರ ಅದು ರೋಗಿಯ ದೇಹಕ್ಕೆ ಹರಡುತ್ತದೆ. ಸೋಂಕಿನ ನಂತರ ವೈರಸ್ ಸಂತಾನೋತ್ಪತ್ತಿ ಮಾಡುವ ಅವಧಿಯನ್ನು ಇನ್ಕ್ಯುಬೇಷನ್ ಅವಧಿ ಎಂದು ಕರೆಯಲಾಗುತ್ತದೆ. ಇದರರ್ಥ ಒಬ್ಬ ವ್ಯಕ್ತಿಯು ಆರು ತಿಂಗಳೊಳಗೆ ಎಚ್ಐವಿ, ಹೆಪಟೈಟಿಸ್ ಬಿ ಅಥವಾ ಹೆಪಟೈಟಿಸ್ ಸಿ ವೈರಸ್ ಸೋಂಕಿಗೆ ಒಳಗಾಗಿದ್ದು ಆ ಸಮಯದಲ್ಲಿ ರಕ್ತ ಪರೀಕ್ಷೆಗೆ ಒಳಗಾಗಿದ್ದರೆ, ವರದಿ ನೆಗೆಟಿವ್ ಬರಬಹುದು. ಆದ್ದರಿಂದ ಹಚ್ಚೆ ಹಾಕಿಸಿಕೊಂಡ ಆರು ತಿಂಗಳೊಳಗೆ ರಕ್ತದಾನ ಮಾಡಬಾರದು. ಏಕೆಂದರೆ ಆರೋಗ್ಯವಂತ ವ್ಯಕ್ತಿಯು ರಕ್ತದ ಮೂಲಕ ಮಾರಣಾಂತಿಕ ಕಾಯಿಲೆಗೆ ತುತ್ತಾಗುವ ಅಪಾಯವಿರುತ್ತದೆ.
ಈ ಕಾರಣದಿಂದ ಹಚ್ಚೆ ಹಾಕಿಸಿಕೊಳ್ಳುವ ವ್ಯಕ್ತಿ ಮೊದಲು ಕನಿಷ್ಠ ಆರು ತಿಂಗಳು ಜಾಗರೂಕರಾಗಿರಬೇಕು. ಆರು ತಿಂಗಳ ನಂತರ, ಸರಿಯಾಗಿ ಖಚಿತಪಡಿಸಿಕೊಳ್ಳಲು ರಕ್ತ ಪರೀಕ್ಷೆ ಮಾಡಬೇಕು. ಆಗ ನೀವು ಹಚ್ಚೆ ಹಾಕಿಸಿಕೊಂಡಿದ್ದರೂ ಸುರಕ್ಷಿತವಾಗಿ ರಕ್ತದಾನ ಮಾಡಬಹುದು. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ, ಕೆಲವು ವೈದ್ಯರು ಒಂದು ವರ್ಷದವರೆಗೆ ರಕ್ತದಾನ ಮಾಡುವುದನ್ನು ನಿಷೇಧಿಸುತ್ತಾರೆ.