Towel: ಸ್ನಾನ ಮಾಡಿದ ತಕ್ಷಣ ಸೊಂಟಕ್ಕೆ, ಮೈಗೆ ಟವೆಲ್ ಸುತ್ತಿಕೊಳ್ಳತೀರಾ? ಯಪ್ಪಾ.. ಇದಿಷ್ಟು ಡೇಂಜರ್ ಗೊತ್ತಾ? ಬಯಲಾಯ್ತು ಅಚ್ಚರಿ ಸಂಶೋಧನೆ

Towel: ಹುಡುಗರಾಗಲಿ ಅಥವಾ ಹುಡುಗಿಯರಾಗಲಿ ಹೆಚ್ಚಿನವರು ಸ್ನಾನ ಮಾಡಿದ ನಂತರ ನೇರವಾಗಿ ಬಟ್ಟೆ ಹಾಕಿಕೊಳ್ಳದೆ ಮೈಗೆ ಅಥವಾ ಸೊಂಟಕ್ಕೆ ಟವೆಲ್(Towel) ಸುತ್ತಿಕೊಂಡು ಬರುತ್ತಾರೆ. ಇದು ಫ್ರೀ ಅನಿಸುತ್ತೆ, ಅರಾಮ ಅನಿಸುತ್ತೆ ಅಂಡ್ ಬೆಟರ್ ಕೂಡ ಎಂದು ಭಾವಿಸುತ್ತಾರೆ. ಆದರೆ ನಿಮಗೆ ಗೊತ್ತಾ ಈ ರೀತಿಯ ಅಭ್ಯಾಸ ತುಂಬಾ ಅಪಾಯಕಾರಿ ಎಂದು?

ಹೌದು, ಸ್ನಾನ ಮುಗಿಸಿಕೊಂಡು ಹೊರ ಬರುವಾಗ ಟವಲ್ ಅನ್ನು ದೇಹಕ್ಕೆ ಅಥವಾ ಕೂದಲಿಗೆ ಸುತ್ತಿಕೊಂಡು ಬರುವ ಅಭ್ಯಾಸ ಬಹುತೇಕ ಮಂದಿಗೆ ಇರುತ್ತದೆ. ಆದರೆ ಇದು ಬಹಳ ಅಪಾಯಕಾರಿ ಎನ್ನುವುದು ಸಂಶೋಧನೆಗಳಿಂದ ಹೊರ ಬಂದಿರುವ ಸತ್ಯ. ಹೀಗಾಗಿ ಸ್ನಾನದ ಬಳಿಕ ಸೊಂಟಕ್ಕೆ ಟವೆಲ್ ಸುತ್ತೋದು ನಿಜಕ್ಕೂ ಅಪಾಯಕಾರಿ. ಹೇಗೆ? ಇಲ್ಲಿದೆ ನೋಡಿ ವಿವರಣೆ.

ಸ್ನಾನಕ್ಕೆ ಬಳಸುವ ಬಳಸುವ ಟವಲ್ ಬಗ್ಗೆ ತಲೆಕೆಡಿಸಿಕೊಳ್ಳುವವರ ಸಂಖ್ಯೆ ಕಡಿಮೆ. ನಿತ್ಯ ಧರಿಸುವ ಬಟ್ಟೆಗಳನ್ನು ತೊಳೆಯುವಂತೆ ಸಾಮಾನ್ಯವಾಗಿ ಟವಲ್ ಗಳನ್ನು ಪ್ರತಿ ದಿನ ಒಗೆಯುವುದಿಲ್ಲ. ಇದರಿಂದಾಗಿ ಟವಲ್ ನಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಈ ಬ್ಯಾಕ್ಟೀರಿಯಾಗಳು ರೋಗಗಳನ್ನು ಹರಡುತ್ತದೆ. ಈ ಬ್ಯಾಕ್ಟೀರಿಯಾಗಳು ಅತಿಸಾರ ಮತ್ತು ಫುಡ್ ಪೋಯಿಸನ್ ನಂಥಹ ಕಾಯಿಲೆಗಳಿಗೆ ಕಾರಣವಾಗಬಹುದು.

ಟವೆಲ್‌ನಲ್ಲಿ ಬ್ಯಾಕ್ಟೀರಿಯಾ ಬೆಳೆಯೋದು ಹೇಗೆ ? :
ಸ್ನಾನ ಮಾಡುವಾಗಲೆಲ್ಲಾ ದೇಹವನ್ನು ಒರೆಸಿದ ನಂತರ ಟವೆಲ್ ಒದ್ದೆಯಾಗುತ್ತದೆ. ಹಾಗಾಗಿ ಟವಲ್ ನಲ್ಲಿ ತೇವಾಂಶವು ದೀರ್ಘಕಾಲದವರೆಗೆ ಉಳಿಯುತ್ತದೆ. ಇದು ಟವಲ್ ನಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಅದೇ ಟವಲ್ ಅನ್ನು ನಾವು ಮತ್ತೆ ಮತ್ತೆ ಬಳಸಿದಾಗ,ಈ ಬ್ಯಾಕ್ಟೀರಿಯಾಗಳು ನಿಮ್ಮ ದೇಹವನ್ನು ಪ್ರವೇಶಿಸಿ ರೋಗಗಳು ಹರಡಲು ಕಾರಣವಾಗುತ್ತವೆ.

ಹೀಗಾಗಿ ಪ್ರತಿ ಬಾರಿ ಸ್ನಾನದ ನಂತರ ಟವೆಲ್ ನಿಂದ ಮೈ ಅಥವಾ ಕೂದಲು ಒರೆಸಿದ ನಂತರ ಟವಲ್ ಅನ್ನು ಬಿಸಿಲಿನಲ್ಲಿ ಒಣಗಲು ಹಾಕಬೇಕು. ನಿತ್ಯವೂ ತೊಳೆಯಬೇಕು. ಹೀಗಾದಾಗ ಸೂರ್ಯನ ಶಾಖಕ್ಕೆ ಟವಲ್ ನಲ್ಲಿರುವ ತೇವಾಂಶ ಒಣಗಿ ಹೋಗುತ್ತದೆ. ರೋಗಾಣುಗಳು ಹುಟ್ಟಿಕೊಳ್ಳುವುದಿಲ್ಲ.

1 Comment
  1. Leora Strausser says

    You are a very clever person!

Leave A Reply

Your email address will not be published.