Sugar Patient: ಶುಗರ್ ಇರುವವರು ಒಂದು ತಿಂಗಳು ಅನ್ನ ತಿನ್ನೋದು ಬಿಟ್ರೆ ಶುಗರ್ ಕಡಿಮೆ ಆಗುತ್ತಾ? ಇಲ್ಲಿದೆ ನೋಡಿ ಅಚ್ಚರಿ ವರದಿ

Sugar Patient : ಅನ್ನದಲ್ಲಿ ಹೆಚ್ಚಿನ ಕ್ಯಾಲೋರಿ ಇರುತ್ತೆ. ಹೀಗಾಗಿ ಅದು ನಮ್ಮಬೊಜ್ಜು, ಫ್ಯಾಟ್ ಅನ್ನು ಹೆಚ್ಚಿಸುತ್ತೆ. ಇದನ್ನು ತಿನ್ನೋದನ್ನು ಬಿಟ್ಟರೆ ನಾವು ಬೇಗ ಸಣ್ಣಗಾಗಬಹುದು ಎಂದು ಅನೇಕ ಜಿಮ್ ಮ್ಯಾನ್ ಗಳು, ಆರೋಗ್ಯ ಸಲಹೆಗಾರರು, ಡಯಟ್ ಟ್ರೈನಿಗಳು ಹೇಳೋದನ್ನು ಕೇಳಿದ್ದೇವೆ. ಇದು ಡಯಟ್ ವಿಚಾರ ಆದರೆ, ಇನ್ನು ಶುಗರ್ ಪೇಷಂಟ್(Sugar Patient) ಗಳಿಗೂ ಅನ್ನ ತಿನ್ನಬಾರದು ಎಂದು ವೈದ್ಯರೇ ಹೇಳುತ್ತಾರೆ. ಆದರೂ ಹೆಚ್ಚಿನವರು ಅನ್ನ ಬಿಡಲು ರೆಡಿ ಇರುವುದಿಲ್ಲ. ಒಂದು ವೇಳೆ ಒಂದು ತಿಂಗಳು ಅನ್ನ(Rice) ತಿನ್ನೋದನ್ನು ಬಿಟ್ಟರೆ ಶುಗರ್(Sugar) ಕಡಿಮೆ ಆಗುತ್ತಾ? ಇಲ್ಲಿದೆ ನೋಡಿ ಉತ್ತರ

ಹೌದು, ಕಾರ್ಬೋಹೈಡ್ರೇಟ್‌ ಅಂಶ ಹೆಚ್ಚಿರುವ ಅಕ್ಕಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚು ಮಾಡುತ್ತದೆ. ಈ ಕಾರಣಕ್ಕಾಗಿ ಅನ್ನವನ್ನು ತಿನ್ನದಿರಲು ಮಧುಮೇಹ ರೋಗಿಗಳಿಗೆ(ಶುಗರ್ ಪೇಷಂಟ್) ಸಲಹೆ ನೀಡುತ್ತಾರೆ. ಅನ್ನ ತಿನ್ನುವುದನ್ನು ನಿಲ್ಲಿಸುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಇದು ವೈಜ್ಞಾನಿಕವಾಗಿಯೂ ಸತ್ಯ.

ಆದರೆ ಒಂದು ವೇಳೆ ನೀವು ಒಂದು ತಿಂಗಳು ಅನ್ನ ತಿನ್ನುವುದನ್ನು ನಿಲ್ಲಿಸಿದರೆ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ? ಎಂದು ಕೇಳಬಹುದು. ಯಸ್, ಖಂಡಿತವಾಗಿಯೂ ಕಡಿಮೆ ಆಗುತ್ತೆ. ಆದರೆ, ಒಂದು ತಿಂಗಳ ನಂತರ ಮತ್ತೆ ಅನ್ಪ ತಿಂದರೆ ಸಕ್ಕರೆ ಮಟ್ಟ ಮತ್ತೆ ಹೆಚ್ಚುತ್ತದೆ. ಆದರೆ, ಮಿತ ಪ್ರಮಾಣದಲ್ಲಿ ಸೇವಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅತಿಯಾದಾಗಲೇ ತೊಂದರೆ ಹೆಚ್ಚು ಎಂಬುದು ನೆನಪಿನಲ್ಲಿರಲಿ.

ಅಂದಹಾಗೆ ನೀವು ದಿನಕ್ಕೆ ಒಂದು ಅಥವಾ ಎರಡು ಬಾರಿ ತಿಂದರೆ ಒಳ್ಳೆಯದು. ರಾತ್ರಿ ವೇಳೆಯೂ ಅನ್ನ ತಿನ್ನುವುದಾದರೆ ಏಳು ಗಂಟೆಯೊಳಗೆ ತಿನ್ನಬೇಕು. ಅದು ಕೂಡ ಮಿತವಾಗಿ ಸೇವಿಸಬೇಕು. ಇದಾದ ಬಳಿಕ ನೀರನ್ನು ಹೊರತುಪಡಿಸಿ ಯಾವುದೇ ಆಹಾರವನ್ನು ತೆಗೆದುಕೊಳ್ಳಬೇಡಿ. ದಿನದಲ್ಲಿ ಸರಿಯಾದ ವ್ಯಾಯಾಮ ಮತ್ತು ವಾಕಿಂಗ್ ಮಾಡಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

Leave A Reply

Your email address will not be published.