Samosa Video Viral: ಗರಿ ಗರಿ ಸಮೋಸದೊಳಗೆ ಸತ್ತ ಕಪ್ಪೆ; ವಿಡಿಯೋ ವೈರಲ್

Samosa Video Viral: ಸಮೋಸ ಅಂದ್ರೆ ಸಾಕು ಕೆಲವರಿಗೆ ಪಂಚ ಪ್ರಾಣ. ಗರಿ ಗರಿಯಾಗಿರುವ ಬಿಸಿ ಸಮೋಸದೊಳಗೆ ಏನು ಇದೆ ಅನ್ನೋದಕ್ಕಿಂದ ಅದರ ರುಚಿಯೇ ಬೇರೆ ಲೆವೆಲ್ ಇರುತ್ತೆ. ಆದ್ರೆ ಇದೀಗ ಸಮೋಸದೊಳಗೆ ಸತ್ತ ಕಪ್ಪೆಯೊಂದು ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ (Samosa Video Viral) ಆಗಿದೆ. ಸಮೋಸ ಪ್ರಿಯರಿಗೆ ಇದೊಂದು ಶಾಕಿಂಗ್ ನ್ಯೂಸ್ ಆಗಿದೆ.

ಹೌದು, ಉತ್ತರ ಪ್ರದೇಶದ ಗಾಜಿಯಾಬಾದ್‌ನ ಅಂಗಡಿಯೊಂದರಲ್ಲಿ ವ್ಯಕ್ತಿಯೊರ್ವ ಸಮೋಸಾ ಖರೀದಿಸಿ ತಿಂದಿದ್ದಾನೆ. ಒಂದು ಬೈಟ್​​ ತಿನ್ನುವಷ್ಟರಲ್ಲಿ ಸಮೋಸದೊಳಗೆ ಸತ್ತ ಕಪ್ಪೆ ಕಂಡು ಶಾಕ್ ಆಗಿದಾನೆ. ಅಲ್ಲದೆ ಅಂಗಡಿ ಮುಂದೆ ಯಜಮಾನನ್ನ ಕರೆಸಿ ಎಂದು ವಾದಕ್ಕೆ ಇಳಿದಿದ್ದಾನೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸದ್ಯ @SachinGuptaUP ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸಮೋಸ ಪ್ರಿಯರಿಗೆ ಈ ವಿಡಿಯೋದಿಂದ ಇನ್ಮೇಲೆ ಸಮೋಸ ತಿನ್ನೋದ ಬೇಡ್ವಾ ಎಂಬ ಗೊಂದಲ ಆರಂಭ ಆಗಿದೆ..

Leave A Reply

Your email address will not be published.