Boy raped boy: 24ರ ಯುವಕನಿಂದ 15ರ ಬಾಲಕ ಮೇಲೆ ಅತ್ಯಾಚಾರ! ಗಂಡಿನ ಶೀಲಕ್ಕೆಸುರಕ್ಷತೆ ಇಲ್ಲ! ಗಂಡಿಗೆ ಗಂಡೇ ಶತ್ರು!

Share the Article

Boy raped boy: ದಿನ ಬೆಳಗಾದರೆ ಹೆಣ್ಣು ಮಗು, ಕಂದಮ್ಮ, ಬಾಲಕಿ, ಹುಡುಗಿ, ಯುವತಿ, ಹೆಂಗಸು ಕೊನೆಗೆ ವೃದ್ಧೆಯ ಮೇಲೂ ಅತ್ಯಾಚಾರ(Rape) ಎನ್ನುವ ಸುದ್ದಿ ಓದುತ್ತಾ ಸಮಾಜ ಎತ್ತ ಸಾಗುತ್ತಿದೆ.? ಹೆಣ್ಣು ಮಕ್ಕಳ ಸುರಕ್ಷತೆ(Girls safty) ಏನು ಅನ್ನುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೆವು. ಇದರ ಜೊತೆಗೆ ಅಲ್ಲೊಂದು ಇಲ್ಲೊಂದು ಹುಡುಗರ ಮೇಲೆಯೂ ಲೌಂಗಿಕ ದೌರ್ಜನ್ಯದ(Sexual harassment) ಸುದ್ದಿಗಳನ್ನು ಕೇಳುತ್ತಿದ್ದೆವು. ಇದು ಕಲಿಗಾಲ, ಕಾಲ ಕೆಟ್ಟೋಯ್ತು ದೇವ್ರೇ ಎಂದು ಮೊರೆ ಇಡುವಾಗು ಇದೀಗ ಮತ್ತೊಂದು ಕೇಳಲಾರದಂತ ಸುದ್ದಿ ಬೆಳಕಿಗೆ ಬಂದಿದೆ.

24ರ ಯುವಕನಿಂದ 15 ವರ್ಷದ ಬಾಲಕ ಮೇಲೆ ಅತ್ಯಾಚಾರ(Boy raped) ಎಸಗಿದ ಘಟನೆ ಹುಬ್ಬಳ್ಳಿಯ(Hubli) ಕಸಬಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಸುಮ್ ಹುಲಮನಿ ಎಂಬಾತನಿಂದ ಕೃತ್ಯ ನಡೆದಿದೆ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಮಾಸುಮ್ ಹುಲಮನಿ, ಮೊಬೈಲ್ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಬಾಲಕನ ಮೇಲೆ ಅತ್ಯಾಚಾರವೆಸಗಿದ್ದಾನೆ.

ಪೊಲೀಸರು ಮಾಸುಮ್ ಹಲುಮನಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Leave A Reply