Bank Holiday: ಸೆಪ್ಟೆಂಬರ್ ನಲ್ಲಿ 8 ದಿನ ಬ್ಯಾಂಕ್ ಗಳಿಗೆ ರಜೆ !! ಇಲ್ಲಿದೆ ಪಟ್ಟಿ

Bank Holiday: ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಕರ್ನಾಟಕದ ಬ್ಯಾಂಕ್ ಗಳಿಗೆ ಒಟ್ಟು 8 ದಿನ ರಜೆ(Bank Holiday) ಇರಲಿದೆ. ರಜೆಯ ಕುರಿತು ಪಟ್ಟಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ನೀವು ಯಾವುದಾದರಾ ಪ್ರಮುಖ ಬ್ಯಾಂಕ್ ಕೆಲಸಗಳಿದ್ದರೆ, ಬ್ಯಾಂಕ್‌ಗೆ ತೆರಳುವ ಮೊದಲು ಬ್ಯಾಂಕ್ ರಜಾ ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ.

ಕರ್ನಾಟಕದಲ್ಲಿ 2024ರ ಸೆಪ್ಟಂಬರ್ ನ ಬ್ಯಾಂಕ್ ರಜಾ ದಿನಗಳು :
ಸೆಪ್ಟಂಬರ್ 7, ಶನಿವಾರ: ವಿನಾಯಕ ಚತುರ್ಥಿ
ಸೆಪ್ಟಂಬರ್ 8: ಭಾನುವಾರದ ರಜೆ
ಸೆಪ್ಟಂಬರ್ 14: ಎರಡನೇ ಶನಿವಾರ
ಸೆಪ್ಟಂಬರ್ 15: ಭಾನುವಾರದ ರಜೆ
ಸೆಪ್ಟಂಬರ್ 16, ಸೋಮವಾರ: ಈದ್ ಮಿಲಾದ್
ಸೆಪ್ಟಂಬರ್ 22: ಭಾನುವಾರದ ರಜೆ
ಸೆಪ್ಟಂಬರ್ 28: ನಾಲ್ಕನೇ ಶನಿವಾರ
ಸೆಪ್ಟಂಬರ್ 29: ಭಾನುವಾರದ ರಜೆ
ಅಂದಹಾಗೆ ಎಲ್ಲಾ ಬ್ಯಾಂಕ್(Bank) ರಜಾದಿನಗಳು ಮತ್ತು ವಾರಾಂತ್ಯಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ತುರ್ತು ವಹಿವಾಟುಗಳಿಗಾಗಿ ಬ್ಯಾಂಕ್‌ಗಳ ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಅಥವಾ ಎಟಿಎಂ (ATM)ಗಳನ್ನು ಬಳಸಿ ಗ್ರಾಹಕರು ತಮ್ಮ ಬ್ಯಾಂಕಿಂಗ್ ಕಾರ್ಯಗಳನ್ನು ಅನುಕೂಲಕರವಾಗಿ ನಿರ್ವಹಿಸಬಹುದು.