USA: ಅಮೇರಿಕಾದ ಡೆಮಾಕ್ರಟಿಕ್ ಪಕ್ಷದ ಸಭೆಯಲ್ಲಿ ವೇದಮಂತ್ರಗಳ ಸದ್ದು – ಹಿಂದೂ ಸಂಪ್ರದಾಯದಂತೆ ಸಭೆ ಆರಂಭ !!
USA: ಭಾರತದ ಸನಾತನ ಧರ್ಮ ಇಂದು ವಿಶ್ವವ್ಯಾಪಿಯಾಗುತ್ತಿದೆ. ಇಡೀ ವಿಶ್ವವೇ ಹಿಂದುತ್ವವನ್ನು ಅಪ್ಪಿ, ಮೆಚ್ಚಿ, ಕೊಂಡಾಡುತ್ತಿದೆ. ಇದಕ್ಕೆ ಪ್ರಮುಖ ಉದಾಹರಣೆ ಎಂಬಂತೆ ಇದೀಗ ಅಮೆರಿಕದ (USA) ಚಿಕಾಗೋದಲ್ಲಿ ನಡೀತಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ (Democratic National Convention) ಸಭೆಯನ್ನು 3ನೇ ದಿನ ಹಿಂದೂ ಸಂಪ್ರದಾಯಂತೆ ವೇದ ಮಂತ್ರಗಳೊಂದಿಗೆ ಆರಂಭಿಸಲಾಗಿದೆ.
ಬೆಂಗಳೂರಿನ ಪೇಜಾವರ ಮಠದಲ್ಲಿ ಶಿಕ್ಷಣ ಪಡೆದಿರುವ 2013ರಿಂದ ಮೇರಿಲ್ಯಾಂಡ್‌ನ ಶಿವವಿಷ್ಣು ದೇವಾಲಯದಲ್ಲಿ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸ್ತಿರುಶ (Bengaluru Priest Rakesh Bhatt) ರಾಕೇಶ್ ಭಟ್, ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಾ ಸಭೆಗೆ ದೇವರ ಆಶೀರ್ವಚನ ಕೋರಿದ್ರು. ಅಮೆರಿಕದಲ್ಲಿ ಈ ರೀತಿ ನಡೀತಿರೋದು ಇದೇ ಮೊದಲ ಬಾರಿ ಎಂದು ಹೇಳಲಾಗುತ್ತಿದೆ.
ಮಂತ್ರ ಪಠಿಸಿದ ರಾಕೇಶ್ ಅವರು ‘ನಾವೆಲ್ಲ ಒಂದೇ ಕುಟುಂಬ.. ಸತ್ಯವೇ ನಮ್ಮ ಬುನಾದಿ.. ಅದೇ ನಮ್ಮನ್ನು ಗೆಲ್ಲಿಸುತ್ತದೆ.. ಕತ್ತಲಿನಿಂದ ಬೆಳಕಿನೆಡೆಗೆ.. ಸಾವಿನಿಂದ ಅಮರತ್ವದವರೆಗೂ ನಮ್ಮನ್ನು ನಡೆಸಿ ಎಂದು ಆ ದೇವರನ್ನು ಕೋರುತ್ತಿರುವೆ. ಓಂ ಶಾಂತಿ.. ಶಾಂತಿ ಶಾಂತಿ ಎಂದು’ ಪ್ರಾರ್ಥಿಸಿದರು.
ಈ ಬಗ್ಗೆ ಅಮೆರಿಕದಲ್ಲಿರುವ ಹಿಂದೂಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅಮೆರಿಕಾದಲ್ಲಿ ಹಿಂದೂ ಸಮಾಜಕ್ಕೆ ಹೆಚ್ಚುತ್ತಿರುವ ಆದರಣೆ, ಪ್ರಾಮುಖ್ಯತೆಯನ್ನು ಇದು ತೋರಿಸುತ್ತದೆ ಎಂದು ಹಿಂದೂ ಮುಖಂಡರು (Hindu Leader) ಹೇಳಿದ್ದಾರೆ.
Your blog is one of my go-to resources.
Thanks for providing such valuable content.
Your blog is consistently helpful and inspiring.
Your blog is a treasure trove of information.
ventolin generic brand: Buy Albuterol inhaler online – ventolin india
ventolin 2.5 mg