Romance: ಪಾರ್ಕಿನ ಪೊದೆಯಲ್ಲಿ ಜೋಡಿಗಳ ‘ಕುಚು ಕುಚು ಹೋ ತಾ ಹೈ..’ !! ವಿಡಿಯೋ ವೈರಲ್

Share the Article

Romance: ಸಾರ್ವಜನಿಕ ಸ್ಥಳಗಳಲ್ಲಿ, ಎಲ್ಲೆಂದರಲ್ಲಿ ಈ ಹಸಿದ ಜೋಡಿಗಳ ಕಾಮಕೇಳಿಯನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ಬಸ್ಸು, ರೈಲು, ಮೆಟ್ರೋ, ಪಾರ್ಕ್ ಅನ್ನೋದನ್ನೂ ನೋಡದೆ ಅವರು ನಾಚಿಕೆ ಬಿಟ್ಟು ಮೈ ಮರೆಯೋದು ಇದನ್ನು ಕಂಡು ಸಾರ್ವಜನಿಕರು ಮುಜುಗರ ಪಡೋದು, ಅದನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡೋದು ನಡೆದೇ ಇದೆ. ಇದನ್ನು ನಿಯಂತ್ರಿಸೋದು ಹೇಗೆ ಅನ್ನೋದೇ ಯಕ್ಷ ಪ್ರಶ್ನೆ!! ಯಾವ ಪ್ರಶ್ನೆ ಹಾಕೊಂಡ್ರೂ ಅವರ ಆಟ ನಡೆದೇ ಇದೆ ಬಿಡಿ.

ಅಂತೆಯೇ ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಪಾರ್ಕ್ ಒಂದರ ಪೊದೆಯಲ್ಲಿ ಕುಳಿತು ಪ್ರೇಮಿಗಳಿಬ್ಬರು ರೊಮ್ಯಾನ್ಸ್(Romanc) ಮಾಡಿದ್ದಾರೆ. ಸಾರ್ವಜನಿಕರು ಗಮನಿಸಿ, ವಿಡಿಯೋ ಮಾಡಿ ಹೆದರಿಸಿದರೆ ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಈ ಭಾರೀ ವೈರಲ್ ಆಗ್ತಿದೆ.

ಠಾಕೂರ್ ಮಾನ್ ಸಿಂಗ್ (thakur_maan_singh_20k) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಸಹೋದರ, ನೀವು ಯಾವ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಿ ???’ ಎಂಬ ತಮಾಷೆಯ ಶೀರ್ಷಿಕೆ ಬರೆದುಕೊಂಡಿದ್ದಾರೆ.

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ
ಪಾರ್ಕ್ ಗೆ ಬಂದ ಪ್ರೇಮಿಗಳಿಬ್ಬರು(lovers) ಪೊದೆಯಲ್ಲಿ ಕುಳಿತು ರೊಮ್ಯಾನ್ಸ್ ಮಾಡುತ್ತಿದ್ದಾರೆ. ಇವರು ಸರಸ ಸಲ್ಲಾಪದಲ್ಲಿ ತೊಡಗಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕೊನೆಗೆ ವಿಡಿಯೋ ಮಾಡುತ್ತಿರುವವರನ್ನೇ ಬೆನ್ನಟ್ಟಿ ದಬಾಯಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Leave A Reply