Home Crime Telangana: ಗನ್ ತೋರಿ ಮಹಿಳಾ ಕಾನಿಸ್ಟೇಬಲ್ ಮೇಲೆ ಸಬ್ ಇನ್ಸ್‌ಪೆಕ್ಟರ್‌ ನಿಂದಲೇ ಅತ್ಯಾಚಾರ !!

Telangana: ಗನ್ ತೋರಿ ಮಹಿಳಾ ಕಾನಿಸ್ಟೇಬಲ್ ಮೇಲೆ ಸಬ್ ಇನ್ಸ್‌ಪೆಕ್ಟರ್‌ ನಿಂದಲೇ ಅತ್ಯಾಚಾರ !!

Telangana

Hindu neighbor gifts plot of land

Hindu neighbour gifts land to Muslim journalist

Telangana: ಗನ್ ತೋರಿಸಿ ಮಹಿಳಾ ಹೆಡ್‌ ಕಾನ್ಸ್‌ಟೇಬಲ್ ಮೇಲೆ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಅತ್ಯಾಚಾರ ಮಾಡಿದ ಅಮಾನುಷ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ತೆಲಂಗಾಣದ(Telangana) ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ಕಾಲೇಶ್ವರಂ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪಿವಿಎಸ್ ಭವಾನಿಸೇನ್ ಗೌಡ್(Bhavanisen Gowda) ಎನ್ನುವವರು ಮಹಿಳಾ ಹೆಡ್ ಕಾನ್ಸ್ಟೇಬಲ್ ಮೇಲೆ ಗನ್ ತೋರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬುಧವಾರ ಬಂಧಿಸಲಾಗಿದ್ದು, ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ.

Bengaluru Crime News: ಬಾಲಕನ ಅಪಹರಣ ಮಾಡಿದ ಉದ್ಯಮಿ; 14 ಗಂಟೆಯಲ್ಲಿ ಖಾಕಿ ಬಲೆಗೆ ಬಿದ್ದ ಅಪಹರಣಕಾರ

ಜೂನ್ 15 ರಂದು ನೀರಾವರಿ ಇಲಾಖೆಗೆ ಸೇರಿದ ಅತಿಥಿಗೃಹದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅತ್ಯಾಚಾರವೆಸಗಿ, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾನೆ ಎಂದು ಸಂತ್ರಸ್ತ ಮಹಿಳಾ ಪೊಲೀಸ್ ದೂರಿನಲ್ಲಿ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯೆ ಸಂಬಂಧಿತ ಸೆಕ್ಷನ್‌ಗಳ ಅಡಿ ಎಸ್‌ಐ ವಿರುದ್ಧ ದೂರು ದಾಖಲಾಗಿದೆ. ಸತ್ಯ ಏನೆಂದು ನಾವು ತನಿಖೆ ಮಾಡುತ್ತೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Pavitra Gowda: ಜೈಲಿನಲ್ಲೂ ʼಡಿʼ ಬ್ಯಾರಕ್ ನಲ್ಲಿ ಪವಿತ್ರಾ ಗೌಡ