Pavitra Gowda: ಜೈಲಿನಲ್ಲೂ ʼಡಿʼ ಬ್ಯಾರಕ್ ನಲ್ಲಿ ಪವಿತ್ರಾ ಗೌಡ

Share the Article

Pavitra Gowda: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಕುರಿತಂತೆ ನಿನ್ನೆ ನ್ಯಾಯಾಲಯವು ದರ್ಶನ್‌ ಸೇರಿ ನಾಲ್ಕು ಮಂದಿಗೆ ಪೊಲೀಸ್‌ ಕಸ್ಟಡಿ ನೀಡಲಾಗಿದ್ದು, ಉಳಿದಂತೆ ಪವಿತ್ರ ಗೌಡ ಹಾಗೂ ಉಳಿದವರು ಪರಪ್ಪನ ಅಗ್ರಹಾರ ಸೇರಿದ್ದಾರೆ.

ದರ್ಶನ್‌ ಅವರನ್ನು ಅವರ ಅಭಿಮಾನಿಗಳು ಡಿ ಬಾಸ್‌ ಎಂದು ಕರೆಯುತ್ತಾರೆ. ಹಾಗೆನೇ ಇದೀಗ ಅವರ ಪಟಾಲಂ ಅನ್ನು ಡಿ ಬಾಸ್‌ ಗ್ಯಾಂಗ್‌ ಎಂದು ಹೇಳಲಾಗುತ್ತಿದೆ. ಇದೇ ಡಿ ಬಾಸ್‌ಗೆ ಬಹಳ ಹತ್ತಿರದ ಗೆಳತಿಯಾಗಿರುವ ಪವಿತ್ರಾ ಗೌಡ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ಕೂಡಾ ಡಿ ಬ್ಯಾರಕ್‌ ಸಿಕ್ಕಿದೆ.

ಉಳಿದ ಆರೋಪಿಗಳು ಜೈಲಿನ ಕ್ವಾರೆಂಟೈನ್‌ ಬ್ಯಾರಕ್‌ನಲ್ಲಿ ಇಡಲಾಗಿದೆ.

ನಿನ್ನೆ ಆರೋಪಿಗಳನ್ನು ಜೈಲಿಗೆ ತಡವಾಗಿ ಕರೆತರಲಾಗಿದ್ದು, ಇಂದು ಎಲ್ಲಾ ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್‌ ನೀಡಲಾಗುತ್ತದೆ. ಹತ್ತು ಗಂಟೆಯ ನಂತರ ಜೈಲಾಧಿಕಾರಿಗಳು ಸಂಖ್ಯೆಯನ್ನು ನೀಡಲಿದ್ದಾರೆ.

ಪವಿತ್ರಾ ಗೌಡ ಅವರು ಡಿ ಬ್ಯಾರಕ್‌ನಲ್ಲಿ ರಾತ್ರಿ ನಿದ್ದೆ ಇಲ್ಲದೆ ಸಮಯ ಕಳೆದಿದ್ದಾರೆ. ಹೊರಗೆ ಹೈಫೈ ಜೀವನ ನಡೆಸುತ್ತಿದ್ದ ಪವಿತ್ರಾ ಅವರು ಇದೀಗ ಜೈಲಿನ ಜೀವನದಲ್ಲಿ ಸಮಯ ಕಳೆಯುತ್ತಿದ್ದಾರೆ.

ಜೈಲಿನ ಮೆನುವಿನಂತೆ ಇಂದು ತಿಂಡಿಗೆ ಉಪ್ಪಿಟ್ಟು ನೀಡಲಾಗಿದೆ.

Leave A Reply

Your email address will not be published.