Health Tips: ಈ ಸಮಯದಲ್ಲಿ ತೂಕ ನೋಡಬಾರದು ಯಾಕೆ ಗೊತ್ತಾ?
Health Tips: ದೇಹದ ತೂಕದ ಮೇಲೆ ಹಿಡಿತ ಕಾಪಾಡಿಕೊಳ್ಳುವವರು ಸದಾ ತಮ್ಮ ದೇಹ ತೂಕದ ಕಡೆ ಗಮನ ಕೊಡುತ್ತಾರೆ. ಹಾಗಿರುವಾಗ ತೂಕ ನೋಡಲು ಸರಿಯಾದ ಸಮಯ ಯಾವುದು ಎಂದು ತಿಳಿದುಕೊಳ್ಳುವುದು ಅವಶ್ಯಕ. ಯಾಕೆಂದರೆ ದೇಹದಲ್ಲಿ ಹಾರ್ಮೋನ್ ಬದಲಾದಾಗ ತೂಕದಲ್ಲಿ ಏರಿಳಿತ ಉಂಟಾಗಲು ಕಾರಣವಾಗಬಹುದು. ಆದ್ದರಿಂದ ಇನ್ನು ಮುಂದೆ ನಿಮ್ಮ ತೂಕ ಪರೀಕ್ಷಿಸುವ ಸರಿಯಾದ ಸಮಯ ಯಾವುದು ಎಂದು ಈ ಕೆಳಗೆ ನೀಡಿರುವ ಮಾಹಿತಿ (Health Tips) ಮೂಲಕ ತಿಳಿದುಕೊಳ್ಳಿ.
ಈ ಸಮಯದಲ್ಲಿ ತೂಕ ಪರೀಕ್ಷೆ ಸರಿಯಲ್ಲ:
ನೀವು ತೂಕ ಇಳಿಸಿಕೊಳ್ಳಲು ಯಾವುದೇ ರೀತಿಯ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯನ್ನು ಮಾಡಿದ ತಕ್ಷಣ ನಿಮ್ಮ ತೂಕವನ್ನು ಪರಿಶೀಲಿಸಬಾರದು. ಏಕೆಂದರೆ ಈ ಸಮಯದಲ್ಲಿ ಬೆವರು ಮತ್ತು ನಿಮ್ಮ ದೇಹದಲ್ಲಿ ದ್ರವದ ಕೊರತೆ ಇರಲು ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ, ತೂಕದಲ್ಲಿ ಸ್ವಲ್ಪ ಏರಿಳಿತಗಳು ಕಂಡುಬರುತ್ತವೆ.
ಇದನ್ನೂ ಓದಿ: Mangaluru Job News: ಶಿಷ್ಯ ವೇತನ ಸಹಿತ ವೃತ್ತಿ ತರಬೇತಿ ಕಾರ್ಯಕ್ರಮ: ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಮುಟ್ಟಿನ ದಿನಾಂಕದ ಒಂದು ವಾರದ ಮೊದಲು ಈ ಸಮಯದಲ್ಲಿ ಹಾರ್ಮೋನ್ ಬದಲಾವಣೆಯಿಂದ ದೇಹದಲ್ಲಿ ನೀರು ಹಿಡಿದಿಟ್ಟುಕೊಳ್ಳುವುದು ಮತ್ತು ಉಬ್ಬುವುದು ಸಂಭವಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ತೂಕ ನೋಡಿದರೆ ಹೆಚ್ಚು ತೂಕ ಕಾಣಬಹುದು ಆದ್ದರಿಂದ ಈ ಸಮಯದಲ್ಲಿ ತೂಕವನ್ನು ಪರೀಕ್ಷಿಸದಿರುವುದು ಒಳ್ಳೆಯದಲ್ಲ.
ಇನ್ನು ಮಲಬದ್ಧತೆಯ ಸಮಸ್ಯೆ ಇದ್ದ ಸಮಯದಲ್ಲಿ ನಿಮ್ಮ ತೂಕವನ್ನು ಪರೀಕ್ಷಿಸಬಾರದು. ಆ ಸಮಯದಲ್ಲಿ ಆಹಾರ ಜೀರ್ಣ ಆಗದೇ ಇದ್ದು ಕೆಲವು ದಿನದ ಆಹಾರ ನಿಮ್ಮ ಹೊಟ್ಟೆಯಲ್ಲಿ ಶೇಖರಣೆ ಆಗಿರುತ್ತದೆ. ಇದು ಹೆಚ್ಚಿದ ತೂಕವನ್ನು ತೋರಿಸುತ್ತದೆ.
ಅದಲ್ಲದೆ ದೀರ್ಘ ಪ್ರಯಾಣದ ನಂತರ ಅಂದರೆ ವಾರಗಳ ಕಾಲ ನೀವು ಬೇರೆ ಸ್ಥಳದಲ್ಲಿ ಇದ್ದಾಗ ಆಹಾರ ಬದಲಾವಣೆ ಸಾಧ್ಯತೆ ಹೆಚ್ಚು. ಆ ಸಮಯದಲ್ಲಿ ನಿಮ್ಮ ತೂಕವನ್ನು ನೀವು ಪರಿಶೀಲಿಸಬಾರದು. ಏಕೆಂದರೆ ಈ ಸಮಯದಲ್ಲಿ ನೀವು ಹೊರಗಿನ ಆಹಾರವನ್ನು ಸೇವಿಸುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ತೂಕ ಸ್ವಲ್ಪ ಹೆಚ್ಚಾಗಬಹುದು.
ಈ ಮೇಲಿನ ಸಮಯ ಸಂದರ್ಭ ಹೊರತು ಪಡಿಸಿ ನೀವು ನಿಮ್ಮ ತೂಕ ಪರೀಕ್ಷೆ ಮಾಡುವುದು ಉತ್ತಮ ಮತ್ತು ಸರಿಯಾದ ದೇಹ ತೂಕವನ್ನು ನೀವು ಕಾಣಬಹುದು.
[…] […]
[…] […]